ರಶೀದ್ ಖಾನ್‌ರ ಒಂದೇ ಓವರ್‌ನಲ್ಲಿ 26 ರನ್ ಬಾರಿಸಿದ RCB ಬ್ಯಾಟರ್!

ರಶೀದ್ ಬೌಲಿಂಗ್ ಮಾಡಲು ಬಂದಾಗ ಲಿವಿಂಗ್‌ಸ್ಟನ್ 76 ರಿಂದ 80ನೇ ಎಸೆತಗಳ ನಡುವೆ ತನ್ನ ಪೂರ್ಣ ಶಕ್ತಿಯನ್ನು ಪ್ರದರ್ಶಿಸಿದರು. ಅವರು ರಶೀದ್‌ಗೆ ಮೂರು ಸಿಕ್ಸರ್‌ಗಳು ಮತ್ತು ಎರಡು ಬೌಂಡರಿಗಳನ್ನು ಬಾರಿಸಿದರು.
Liam Livingstone
ಲಿಯಾಮ್ ಲಿವಿಂಗ್‌ಸ್ಟನ್
Updated on

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಇಂಗ್ಲೆಂಡ್‌ನ ಸ್ಟಾರ್ ಆಟಗಾರ ಲಿಯಾಮ್ ಲಿವಿಂಗ್‌ಸ್ಟನ್ ಅದ್ಭುತವಾದ ಹೊಡೆತಗಳ ಮೂಲಕ ತಮ್ಮ ತಂಡ ಬರ್ಮಿಂಗ್‌ಹ್ಯಾಮ್ ಫೀನಿಕ್ಸ್ ತಂಡವನ್ನು ದಿ ಹಂಡ್ರೆಡ್ 2025 ರಲ್ಲಿ ಓವಲ್ ಇನ್ವಿನ್ಸಿಬಲ್ಸ್ ವಿರುದ್ಧ ಜಯಗಳಿಸಲು ನೆರವಾದರು. ಲಿವಿಂಗ್‌ಸ್ಟನ್ ಕೇವಲ 27 ಎಸೆತಗಳಲ್ಲಿ 69 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ತಂಡವು ಇನ್ನೂ ಎರಡು ಎಸೆತ ಬಾಕಿ ಇರುವಾಗಲೇ 181 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ಅವರ ಅದ್ಭುತ ಇನಿಂಗ್ಸ್‌ನಲ್ಲಿ, ಅಫ್ಗಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್‌ ಅವರ ಐದು ಎಸೆತಗಳಲ್ಲಿ 26 ರನ್‌ಗಳನ್ನು ಗಳಿಸಿದರು.

ರಶೀದ್ ಬೌಲಿಂಗ್ ಮಾಡಲು ಬಂದಾಗ ಲಿವಿಂಗ್‌ಸ್ಟನ್ 76 ರಿಂದ 80ನೇ ಎಸೆತಗಳ ನಡುವೆ ತನ್ನ ಪೂರ್ಣ ಶಕ್ತಿಯನ್ನು ಪ್ರದರ್ಶಿಸಿದರು. ಅವರು ರಶೀದ್‌ಗೆ ಮೂರು ಸಿಕ್ಸರ್‌ಗಳು ಮತ್ತು ಎರಡು ಬೌಂಡರಿಗಳನ್ನು ಬಾರಿಸಿದರು.

ಇಂಗ್ಲೆಂಡ್‌ನ ಈ ತಾರೆಯನ್ನು ಐಪಿಎಲ್ 2025ರ ಮೆಗಾ ಹರಾಜಿನಲ್ಲಿ 8.75 ಕೋಟಿ ರೂ.ಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಖರೀದಿಸಿತ್ತು ಮತ್ತು ಆರ್‌ಸಿಬಿ ಮೊದಲ ಬಾರಿಗೆ 18ನೇ ಆವೃತ್ತಿಯಲ್ಲಿ ಐಪಿಎಲ್ ಪ್ರಶಸ್ತಿ ಗೆದ್ದು ಪ್ರಶಸ್ತಿ ಬರವನ್ನು ನೀಗಿಸಿತು. ಲಿವಿಂಗ್‌ಸ್ಟನ್ ಆ ಆವೃತ್ತಿಯಲ್ಲಿ ಅಷ್ಟೇನು ಉತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್. ಅವರು ಎಂಟು ಇನಿಂಗ್ಸ್‌ಗಳಲ್ಲಿ ಕೇವಲ 112 ರನ್‌ಗಳನ್ನು ಗಳಿಸಿದರು. ಇದರಲ್ಲಿ ಒಂದು ಅರ್ಧಶತಕ ಸೇರಿದೆ.

ಈಮಧ್ಯೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಜೆಸ್ಸಿ ರೈಡರ್, ಈ ವರ್ಷ RCBಯ ಐತಿಹಾಸಿಕ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪ್ರಶಸ್ತಿ ಗೆಲುವನ್ನು ಶ್ಲಾಘಿಸಿದ್ದು, ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. 'ನಾನು ಅವರಿಗಾಗಿ ತುಂಬಾ ಉತ್ಸುಕನಾಗಿದ್ದೆ, ಗೊತ್ತಾ. ಅದಕ್ಕಾಗಿ RCB ಹುಡುಗರಿಗೆ ಅಭಿನಂದನೆಗಳು' ಎಂದು ರೈಡರ್ ಹೇಳಿದರು.

ವಿರಾಟ್ ಕೊಹ್ಲಿ ಅಂತಿಮವಾಗಿ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದ ಬಗ್ಗೆ ಮಾತನಾಡಿದ ರೈಡರ್, ಈ ಗೆಲುವು ಮಾಜಿ ಆರ್‌ಸಿಬಿ ನಾಯಕನಿಗೆ ಸಲ್ಲುತ್ತದೆ. ಹೌದು, ಈ ಗೆಲುವಿನ ಬಗ್ಗೆ ಅವರು ಎಷ್ಟು ಭಾವನಾತ್ಮಕವಾಗಿದ್ದರು ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ. ಸ್ಪಷ್ಟವಾಗಿ ಅದು ಅವರಿಗೆ ಬಹಳಷ್ಟು ಅರ್ಥಪೂರ್ಣವಾಗಿತ್ತು, ಆದ್ದರಿಂದ ಅಂತಿಮವಾಗಿ ಗೆಲುವು ಸಾಧಿಸಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು ಎಂದು ಹೇಳಿದರು.

ಜುಲೈ 3 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡವನ್ನು ಸೋಲಿಸುವ ಮೂಲಕ ಆರ್‌ಸಿಬಿ ತಮ್ಮ 18 ವರ್ಷಗಳ ಪ್ರಶಸ್ತಿ ಬರವನ್ನು ಕೊನೆಗೊಳಿಸಿತು. ಆರ್‌ಸಿಬಿ ಆರು ರನ್‌ಗಳಿಂದ ಗೆದ್ದಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com