
ಯುಎಇಯಲ್ಲಿ ನಡೆಯಲಿರುವ ತ್ರಿಕೋನ ಸರಣಿ ಮತ್ತು ನಂತರ ಏಷ್ಯಾಕಪ್‌ಗಾಗಿ ಪಾಕಿಸ್ತಾನ ಇಂದು 17 ಸದಸ್ಯರ ತಂಡವನ್ನು ಘೋಷಿಸಿತು. ಇದರಲ್ಲಿ ಅನುಭವಿ ಬ್ಯಾಟ್ಸ್‌ಮನ್‌ಗಳಾದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ಕೈಬಿಡಲಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತನ್ನ ವೆಬ್‌ಸೈಟ್‌ನಲ್ಲಿ ತಂಡವನ್ನು ಘೋಷಿಸಿದೆ. ಇದರಲ್ಲಿ ವೇಗದ ಬೌಲರ್‌ಗಳಾದ ಶಾಹೀನ್ ಶಾ ಅಫ್ರಿದಿ, ಮೊಹಮ್ಮದ್ ವಾಸಿಮ್ ಮತ್ತು ಎಡಗೈ ಬೌಲರ್ ಸಲ್ಮಾನ್ ಮಿರ್ಜಾ ತಂಡದಲ್ಲಿದ್ದಾರೆ. ಬಾಬರ್ ಅಜಮ್ ಕಳೆದ ವರ್ಷದವರೆಗೆ ಟಿ20 ತಂಡದ ನಾಯಕರಾಗಿದ್ದು ನಿರಂತರ ಕಳಪೆ ಪ್ರದರ್ಶನದಿಂದಾಗಿ ಅವರನ್ನು ಮತ್ತೊಮ್ಮೆ ತಂಡದಿಂದ ದೂರವಿಡಲಾಗಿದೆ. ತಂಡ ಘೋಷಣೆ ನಂತರ, ಪಾಕಿಸ್ತಾನದ ವೈಟ್ ಬಾಲ್ ಕ್ರಿಕೆಟ್ ಮುಖ್ಯ ಕೋಚ್ ಮೈಕ್ ಹೆಸ್ಸನ್ ಬಾಬರ್ ಅಜಮ್‌ಗೆ ತಂಡದಲ್ಲಿ ಸ್ಥಾನ ನೀಡದಿರುವ ಬಗ್ಗೆ ಮೌನ ಮುರಿದಿದ್ದಾರೆ.
ಸೆಪ್ಟೆಂಬರ್ 9 ರಿಂದ ಯುಎಇಯಲ್ಲಿ ಟಿ20 ಮಾದರಿಯಲ್ಲಿ ಏಷ್ಯಾಕಪ್ ಆರಂಭವಾಗಲಿದೆ. ಇದಕ್ಕೂ ಮುನ್ನ, ಸಲ್ಮಾನ್ ಅಲಿ ಅಘಾ ನೇತೃತ್ವದ ಪಾಕಿಸ್ತಾನ ತಂಡ ಆಗಸ್ಟ್ 29 ರಿಂದ ಸೆಪ್ಟೆಂಬರ್ 7 ರವರೆಗೆ ಶಾರ್ಜಾದಲ್ಲಿ ಅಫ್ಘಾನಿಸ್ತಾನ ಮತ್ತು ಆತಿಥೇಯ ಯುಎಇ ವಿರುದ್ಧ ತ್ರಿಕೋನ ಸರಣಿಯನ್ನು ಆಡಲಿದೆ. ಸ್ಪಿನ್ನರ್‌ಗಳ ವಿರುದ್ಧ ಸ್ಟ್ರೈಕ್ ದರವನ್ನು ಸುಧಾರಿಸಲು ಮಾಜಿ ನಾಯಕನಿಗೆ ಸೂಚಿಸಲಾಗಿದೆ ಎಂದು ಪಾಕಿಸ್ತಾನದ ಮುಖ್ಯ ತರಬೇತುದಾರ ಬಹಿರಂಗಪಡಿಸಿದ್ದಾರೆ. ಬಾಬರ್ ತಮ್ಮ ಟಿ20 ಅಂತರರಾಷ್ಟ್ರೀಯ ಪುನರಾಗಮನಕ್ಕಾಗಿ ಬಿಗ್ ಬ್ಯಾಷ್ ಲೀಗ್‌ನಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.
ಏಷ್ಯಾಕಪ್ ಗಾಗಿ ಪಾಕ್ ತಂಡವನ್ನು ಘೋಷಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೈಕ್ ಹೆಸ್ಸನ್, ಬಾಬರ್ ಅಜಮ್ ಅವರನ್ನು ಕೆಲವು ಕ್ಷೇತ್ರಗಳಲ್ಲಿ ಕೆಲಸ ಮಾಡಲು ಕೇಳಲಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ವಿಶೇಷವಾಗಿ ಸ್ಪಿನ್ ವಿರುದ್ಧ ಮತ್ತು ಅವರ ಸ್ಟ್ರೈಕ್ ದರದ ಮೇಲೆ. ಅವರು ಪ್ರಸ್ತುತ ಈ ಅಂಶಗಳ ಮೇಲೆ ತುಂಬಾ ಶ್ರಮಿಸುತ್ತಿದ್ದಾರೆ ಎಂದು ನನಗೆ ತಿಳಿದಿದೆ. ಬಾಬರ್‌ನಂತಹ ಆಟಗಾರನಿಗೆ ಬಿಬಿಎಲ್‌ನಲ್ಲಿ ಆಡಲು ಮತ್ತು ಟಿ20 ಕ್ರಿಕೆಟ್‌ನ ಆ ಕ್ಷೇತ್ರಗಳಲ್ಲಿ ಸುಧಾರಣೆ ತೋರಿಸಲು ಅವಕಾಶವಿದೆ. ಅವರು ಎಷ್ಟು ಒಳ್ಳೆಯ ಆಟಗಾರ ಎಂದರೆ ನಾವು ಅವರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಪಾಕಿಸ್ತಾನ ತಂಡ:
ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಜ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಮ್ ಜರ್ಹಾನ್, ಸಾಬ್ಝಾದಾ, ಸಹಾಹಿ ಶಾಹೀನ್ ಶಾ ಅಫ್ರಿದಿ, ಸುಫಿಯಾನ್ ಮೊಕಿಮ್.
Advertisement