Asia Cup 2025: ಭಾರತ ತಂಡಕ್ಕೆ ಬಲ: ಟೂರ್ನಿಗೆ ಬುಮ್ರಾ ಲಭ್ಯ; ಫಿಟ್ನೆಸ್ ಪರೀಕ್ಷೆಯಲ್ಲಿ ಸೂರ್ಯಕುಮಾರ್ ಪಾಸ್!

2025 ರ ಏಷ್ಯಾ ಕಪ್ ತಂಡ ಘೋಷಣೆಗೂ ಮುನ್ನ ಭಾರತ ತಂಡಕ್ಕೆ ಭಾರಿ ಉತ್ತೇಜನ ನೀಡುವ ಸಲುವಾಗಿ ಸೆಪ್ಟೆಂಬರ್ 9ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ನಡೆಯಲಿರುವ ಟೂರ್ನಿಗೆ ಜಸ್ಪ್ರೀತ್ ಬುಮ್ರಾ ಸಹ ಲಭ್ಯವಿರುವುದಾಗಿ ಬಿಸಿಸಿಐಗೆ ತಿಳಿಸಿದ್ದಾರೆ.
Jasprit Bumrah-Suryakumar Yadav
ಜಸ್ ಪ್ರೀತ್ ಬುಮ್ರಾ-ಸೂರ್ಯಕುಮಾರ್ ಯಾದವ್
Updated on

2025ರ ಏಷ್ಯಾ ಕಪ್‌ಗಾಗಿ ಟೀಮ್ ಇಂಡಿಯಾ ಘೋಷಣೆಯಾಗುವ ಸ್ವಲ್ಪ ಮೊದಲು ಒಂದು ದೊಡ್ಡ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸೆಪ್ಟೆಂಬರ್ 9 ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಪ್ರಾರಂಭವಾಗುವ ಈ ಪಂದ್ಯಾವಳಿಯಲ್ಲಿ ಸೂರ್ಯಕುಮಾರ್ ಯಾದವ್ ಗೆ ಟೀಮ್ ಇಂಡಿಯಾದ ನಾಯಕತ್ವ ಸಿಗುತ್ತದೆಯೇ ಅಥವಾ ಬೇರೆಯವರಿಗೆ ನಾಯಕತ್ವ ಸಿಗುತ್ತದೆಯೇ? ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಈ ಪಂದ್ಯಾವಳಿಯಲ್ಲಿ ಮೈದಾನಕ್ಕೆ ಇಳಿಯಲಿದೆ. ಸೂರ್ಯನ ಫಿಟ್ನೆಸ್ ಪರೀಕ್ಷೆಯ ಫಲಿತಾಂಶ ಹೊರಬಂದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

2025 ರ ಏಷ್ಯಾ ಕಪ್ ತಂಡ ಘೋಷಣೆಗೂ ಮುನ್ನ ಭಾರತ ತಂಡಕ್ಕೆ ಭಾರಿ ಉತ್ತೇಜನ ನೀಡುವ ಸಲುವಾಗಿ ಸೆಪ್ಟೆಂಬರ್ 9ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ನಡೆಯಲಿರುವ ಟೂರ್ನಿಗೆ ಜಸ್ಪ್ರೀತ್ ಬುಮ್ರಾ ಸಹ ಲಭ್ಯವಿರುವುದಾಗಿ ಬಿಸಿಸಿಐ ತಿಳಿಸಿದ್ದಾರೆ. ಬುಮ್ರಾ ಅವರು ಆಯ್ಕೆಗೆ ಲಭ್ಯವಿದ್ದಾರೆ ಎಂದು ಬಿಸಿಸಿಐ ಆಯ್ಕೆದಾರರಿಗೆ ತಿಳಿಸಿದ್ದಾರೆ. ಏಷ್ಯಾ ಕಪ್ ಆಯ್ಕೆಗೆ ಬುಮ್ರಾ ಲಭ್ಯವಿರುತ್ತಾರೆ ಎಂದು ಆಯ್ಕೆದಾರರಿಗೆ ತಿಳಿಸಿದ್ದಾರೆ. ಮುಂದಿನ ವಾರ ಭೇಟಿಯಾದಾಗ ಆಯ್ಕೆ ಸಮಿತಿ ಸಭೆ ಸೇರಿ ಚರ್ಚಿಸಲಿದೆ ಎಂದು ಮೂಲವೊಂದು ತಿಳಿಸಿದೆ.

ಭಾರತೀಯ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕೆಲವು ವಾರಗಳ ಹಿಂದೆ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಂದಿನಿಂದ ಅವರು ಫಿಟ್ನೆಸ್ ಗಾಗಿ ಒಳಗಾಗುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಸೂರ್ಯ ಬೆಂಗಳೂರಿನಲ್ಲಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿದ್ದರು. ಅಲ್ಲಿ ವೈದ್ಯಕೀಯ ತಂಡವು ಅವರ ಫಿಟ್ನೆಸ್ ಪರೀಕ್ಷೆಯನ್ನು ನಡೆಸಿತ್ತು. ವರದಿಯ ಪ್ರಕಾರ, ಈ ಪರೀಕ್ಷೆಯ ಫಲಿತಾಂಶ ಬಂದಿದ್ದು ಭಾರತೀಯ ನಾಯಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಿದ್ದಾರೆ.

Jasprit Bumrah-Suryakumar Yadav
ಪಾಕಿಸ್ತಾನಕ್ಕೆ ಮತ್ತಷ್ಟು ಸಂಕಷ್ಟ: ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್ ಸೇರಿದಂತೆ ಇತರ ಆಟಗಾರರಿಗೆ ಭೀತಿ; ವರದಿ

ಸೂರ್ಯಕುಮಾರ್ ಫಿಟ್ ಆಗಿರುವುದು ಟೀಮ್ ಇಂಡಿಯಾಗೆ ಮತ್ತು ವಿಶೇಷವಾಗಿ ಆಯ್ಕೆ ಸಮಿತಿಗೆ ದೊಡ್ಡ ಸಮಾಧಾನ ತಂದಿದೆ. ಏಕೆಂದರೆ ಆಗಸ್ಟ್ 19ರಂದು ಈ ಟೂರ್ನಮೆಂಟ್‌ಗೆ ಟೀಮ್ ಇಂಡಿಯಾವನ್ನು ಘೋಷಿಸಲಾಗುವುದು. ಅಂತಹ ಪರಿಸ್ಥಿತಿಯಲ್ಲಿ, ಹೊಸ ನಾಯಕನನ್ನು ಆಯ್ಕೆ ಮಾಡುವ ಸವಾಲು ಇರುವುದಿಲ್ಲ. ತಂಡದ ಬ್ಯಾಟಿಂಗ್ ಕೂಡ ಬಲಗೊಳ್ಳುತ್ತದೆ. ಬಿಸಿಸಿಐ ಮೂಲವನ್ನು ಉಲ್ಲೇಖಿಸಿ ವರದಿಯಲ್ಲಿ, ಫಿಟ್ ಆಗಿ ಮರಳುತ್ತಿರುವ ಸೂರ್ಯ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ ಮತ್ತು ಅವರು ಆಯ್ಕೆ ಸಮಿತಿ ಸಭೆಯಲ್ಲೂ ಭಾಗವಹಿಸುತ್ತಾರೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com