
ನವದೆಹಲಿ: ಆಸ್ಟ್ರೇಲಿಯಾದಲ್ಲಿ ಕಳೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮಧ್ಯದಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟಿಗೆ ದಿಢೀರ್ ವಿದಾಯ ಹೇಳಿದ್ದ ಭಾರತದ ಸ್ಪಿನ್ ದಂತಕಥೆ ಆರ್. ಅಶ್ವಿನ್ ಕೂನೆಗೂ ಮೌನ ಮುರಿದಿದ್ದಾರೆ.
ಅನಿಲ್ ಕುಂಬ್ಳೆ ನಂತರ ಟೆಸ್ಟ್ ನಲ್ಲಿ 500 ವಿಕೆಟ್ ಪಡೆದ ಎರಡನೇ ಭಾರತೀಯ ಬೌಲರ್ ಎಂಬ ಖ್ಯಾತಿಗೆ ಪಾತ್ರರಾಗಿರುವ ಆರ್. ಅಶ್ವಿನ್ ಕಳೆದ ಡಿಸೆಂಬರ್‌ನಲ್ಲಿ ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನ ನಂತರ ಹಠಾತ್ ನಿವೃತ್ತಿ ಘೋಷಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು.
ಈ ಕುರಿತು ತನ್ನ ಯು ಟ್ಯೂಬ್ ಚಾನೆಲ್ ನಲ್ಲಿ ಟೀಂ ಇಂಡಿಯಾ ಮಾಜಿ ತರಬೇತುದಾರ ರಾಹುಲ್ ದ್ರಾವಿಡ್ ಅವರಿಗೆ ಪ್ರತಿಕ್ರಿಯಿಸಿದ್ದಾರೆ.
"ನನಗೆ ಸಾಕಷ್ಟು ವಯಸ್ಸಾಗಿತ್ತು, ನಾನು ಒಪ್ಪಿಕೊಳ್ಳಲೇಬೇಕಾಗಿತ್ತು. ಆದರೆ ಪ್ರವಾಸಗಳಿಗೆ ಹೋದಾಗ ಹೆಚ್ಚು ಹೊತ್ತು ಕುಳಿತುಕೊಳ್ಳಬೇಕಾಗಿತ್ತು. ಅಂತಿಮವಾಗಿ ನಿವೃತ್ತಿ ತೆಗೆದುಕೊಂಡೆ ಎಂದು ತಿಳಿಸಿದ್ದಾರೆ.
"ಅಂದರೆ, ತಂಡಕ್ಕೆ ನೆರವಾಗಲು ಆಗುತ್ತಿರಲಿಲ್ಲ ಎಂದರ್ಥ. ಮನೆಯಲ್ಲಿಯೇ ಇದ್ದು, ಮಕ್ಕಳೊಂದಿಗೆ ಸಮಯ ಕಳೆಯುತ್ತೇನೆ ಎಂದು ನೀವು ಯೋಚಿಸಿರುತ್ತೀರಾ! ಅವರೂ ಬೆಳೆಯುತ್ತಿದ್ದಾರೆ. ನಾನು ನಿಜವಾಗಿ ಏನು ಮಾಡುತ್ತಿದ್ದೇನೆ? ಎಂದು ಯೋಚಿಸಿದಾಗ ನನಗೆ ಸರಿ ಅನಿಸಿತು. 34-35 ಕ್ಕೆ ನಿವೃತ್ತಿ ಹೊಂದುತ್ತೇನೆ ಎಂದು ನಾನು ನಿರ್ಧರಿಸಿದೆ. ಆದರೆ ಈ ನಡುವೆ ನಾನು ಹೆಚ್ಚು ಆಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
2011ರ ನವೆಂಬರ್‌ನಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಅಶ್ವಿನ್, ಭಾರತದಲ್ಲಿ 65 ಟೆಸ್ಟ್ ಪಂದ್ಯಗಳನ್ನಾಡಿದ್ದು, 383 ವಿಕೆಟ್‌ಗಳನ್ನು ಪಡೆದಿದ್ದಾರೆ. ವಿದೇಶಗಳಲ್ಲಿ ಆಡಿದ 40 ಪಂದ್ಯಗಳಲ್ಲಿ 150 ವಿಕೆಟ್‌ಗಳನ್ನು ಪಡೆದಿದ್ದಾರೆ. ವಿರುದ್ಧ 2019-21ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದಿದ್ದರು.
Advertisement