IPL 2026: ಡೆವಾಲ್ಡ್ ಬ್ರೆವಿಸ್ ಬಗ್ಗೆ ಆರ್. ಅಶ್ವಿನ್ ಹೇಳಿಕೆ; CSK ಸ್ಪಷ್ಟನೆ!

ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಬ್ರೆವಿಸ್ ಯಾವ ತಂಡಕ್ಕೂ ಬಿಕರಿಯಾಗಿರಲಿಲ್ಲ ಆದರೆ, ಸಿಎಸ್‌ಕೆ ಖರೀದಿಸಿದ್ದ ಆಟಗಾರ ಗಾಯಗೊಂಡಿದ್ದರಿಂದಾಗಿ ಅವರ ಬದಲಿಗೆ ಬ್ರೆವಿಸ್ ಅವರನ್ನು ಮೂಲಬೆಲೆಗೆ ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿತ್ತು.
Dewald Brevis
ಡೆವಾಲ್ಡ್ ಬ್ರೆವಿಸ್
Updated on

ಐಪಿಎಲ್ 2025ನೇ ಆವೃತ್ತಿಯ ಮಧ್ಯದಲ್ಲಿ ಬದಲಿ ಆಟಗಾರನಾಗಿ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್ ಅವರನ್ನು ಸಿಎಸ್‌ಕೆಗೆ ಸೇರಿಸಿಕೊಂಡ ಬಗ್ಗೆ ಆರ್ ಅಶ್ವಿನ್ ಅವರ ಹೇಳಿಕೆಗಳ ಕುರಿತು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಸ್ಪಷ್ಟನೆ ನೀಡಿದ್ದು, ಒಪ್ಪಂದವನ್ನು ಐಪಿಎಲ್ ನಿಯಮಗಳ ಅಡಿಯಲ್ಲಿಯೇ ಮಾಡಿಕೊಳ್ಳಲಾಗಿದೆ ಎಂದಿದೆ. ಕಳೆದ ಆವೃತ್ತಿಯಲ್ಲಿ ಚೆನ್ನೈ ತಂಡದ ಪರ ಆಡಿದ್ದ ಅಶ್ವಿನ್ ಯುಟ್ಯೂಬ್ ವಿಡಿಯೋದಲ್ಲಿ, ಬ್ರೆವಿಸ್ ತಂಡವು ನೀಡಬಹುದಾದ ಹಣಕ್ಕಿಂತ ಹೆಚ್ಚಿನ ಹಣವನ್ನು ಬಯಸಿದ್ದರು, ಆದರೆ ಮ್ಯಾನೇಜ್‌ಮೆಂಟ್ ಅಂತಿಮವಾಗಿ ಅವರ ಬೇಡಿಕೆಗೆ ಒಪ್ಪಿಕೊಂಡಿತು ಎಂದು ಹೇಳಿದರು.

ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಬ್ರೆವಿಸ್ ಯಾವ ತಂಡಕ್ಕೂ ಬಿಕರಿಯಾಗಿರಲಿಲ್ಲ ಆದರೆ, ಸಿಎಸ್‌ಕೆ ಖರೀದಿಸಿದ್ದ ಆಟಗಾರ ಗಾಯಗೊಂಡಿದ್ದರಿಂದಾಗಿ ಅವರ ಬದಲಿಗೆ ಬ್ರೆವಿಸ್ ಅವರನ್ನು ಮೂಲಬೆಲೆಗೆ ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿತ್ತು.

ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸಿಎಸ್‌ಕೆ, 'ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಸಮಯದಲ್ಲಿ ಬದಲಿ ಆಟಗಾರನಾಗಿ ಡೆವಾಲ್ಡ್ ಬ್ರೆವಿಸ್ ಅವರನ್ನು ಕರೆತರುವ ಪ್ರಕ್ರಿಯೆಯಲ್ಲಿ ಫ್ರಾಂಚೈಸಿ ತೆಗೆದುಕೊಂಡ ಎಲ್ಲ ಕ್ರಮಗಳು ಐಪಿಎಲ್‌ನ ನಿಯಮಗಳು ಮತ್ತು ನಿಬಂಧನೆಗಳನ್ನು ಸಂಪೂರ್ಣವಾಗಿ ಅನುಸರಿಸಿವೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಸ್ಪಷ್ಟವಾಗಿ ಸ್ಪಷ್ಟಪಡಿಸುತ್ತದೆ' ಎಂದಿದೆ.

'2025ರ ಏಪ್ರಿಲ್‌ನಲ್ಲಿ, ಡೆವಾಲ್ಡ್ ಬ್ರೆವಿಸ್ ಅವರನ್ನು ಲೀಗ್ ಶುಲ್ಕ 2.2 ಕೋಟಿ ರೂ.ಗೆ ಗಾಯಗೊಂಡಿದ್ದ ಗುರ್ಜಪ್‌ನೀತ್ ಸಿಂಗ್ ಅವರ ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಸೌದಿ ಅರೇಬಿಯಾದ ಜೆಡ್ಡಾದ ಅಬಾದಿ ಎಐ ಜೋಹರ್ ಅರೆನಾದಲ್ಲಿ ನಡೆದ ಐಪಿಎಲ್ 2025 ಮೆಗಾ ಹರಾಜಿನಲ್ಲಿ ಸಿಂಗ್ ಅವರನ್ನು 2.2 ಕೋಟಿ ರೂ. ಬೆಲೆಗೆ ಖರೀದಿಸಲಾಗಿತ್ತು. ಬ್ರೆವಿಸ್ ಅವರನ್ನು 2025-27ರ ಐಪಿಎಲ್ ಆಟಗಾರರ ನಿಯಮಗಳಿಗೆ ಅನುಗುಣವಾಗಿ ತಂಡಕ್ಕೆ ಕರೆತರಲಾಗಿದೆ.

ನಿರ್ದಿಷ್ಟವಾಗಿ 'ಬದಲಿ ಆಟಗಾರರು' ಅಡಿಯಲ್ಲಿ ಷರತ್ತು 6.6 ರ ಪ್ರಕಾರ, 'ಪ್ಯಾರಾಗ್ರಾಫ್ 6.1 ಅಥವಾ 6.2ರ ಪ್ರಕಾರ, ಬದಲಿ ಆಟಗಾರನನ್ನು ಲೀಗ್ ಶುಲ್ಕದಲ್ಲಿ ನೇಮಿಸಿಕೊಳ್ಳಬಹುದು. ಗಾಯಗೊಂಡ/ಲಭ್ಯವಿಲ್ಲದ ಆಟಗಾರನಿಗೆ ಈ ಆವೃತ್ತಿಯಲ್ಲಿ ಪಾವತಿಸಿದ್ದಕ್ಕಿಂತ ಹೆಚ್ಚಿನ ಶುಲ್ಕವನ್ನು ಬದಲಿ ಆಟಗಾರನಿಗೆ ಪಾವತಿಸುವಂತಿಲ್ಲ. ಬದಲಿ ಆಟಗಾರನು ಆವೃತ್ತಿಯ ಮಧ್ಯದಲ್ಲಿ ತಂಡವನ್ನು ಸೇರಿಕೊಂಡರೆ, ಆತನ ಪಾವತಿಯನ್ನು ಸರಿಹೊಂದಿಸಲಾಗುತ್ತದೆ. ಆತ ಅಧಿಕೃತವಾಗಿ ತಂಡಕ್ಕೆ ಸೇರಿದ ನಂತರ ನಡೆಯುವ ಪಂದ್ಯಗಳಿಗೆ ಮಾತ್ರ ಆತನಿಗೆ ಪಾವತಿಸಲಾಗುತ್ತದೆ. ಆಟಗಾರನ ಒಪ್ಪಂದದಲ್ಲಿ ಉಲ್ಲೇಖಿಸಲಾದ ಯಾವುದೇ ಇತರ ಕಡಿತಗಳನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗುತ್ತದೆ'.

ಆರ್ ಅಶ್ವಿನ್ ಹೇಳಿದ್ದೇನು?

ತಮ್ಮ ಚಾನೆಲ್‌ನಲ್ಲಿ ಮಾತನಾಡಿದ್ದ ಅಶ್ವಿನ್, 'ಬ್ರೆವಿಸ್ ಬಗ್ಗೆ ನಾನು ನಿಮಗೆ ಸ್ವಲ್ಪ ಹೇಳುತ್ತೇನೆ. ಕಳೆದ ಐಪಿಎಲ್‌ನಲ್ಲಿ ಅವರು ಸಿಎಸ್‌ಕೆ ಪರ ಉತ್ತಮವಾಗಿ ಆಡಿದರು. ವಾಸ್ತವವಾಗಿ, ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಕೆಲವು ತಂಡಗಳು ಅವರೊಂದಿಗೆ ಮಾತನಾಡುತ್ತಿದ್ದವು. ಕೆಲವು ತಂಡಗಳು ಬೆಲೆಯ ಕಾರಣದಿಂದಾಗಿ ಅವರನ್ನು ಕೈಬಿಟ್ಟವು. ಏಕೆಂದರೆ, ಬ್ರೆವಿಸ್ ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಳ್ಳಲು ಮೂಲ ಬೆಲೆಗೆ ಖರೀದಿಸಬೇಕಿತ್ತು. ಇದಕ್ಕೆ ಆಟಗಾರರು ಒಪ್ಪುವುದಿಲ್ಲ. ಆಗ ಏಜೆಂಟರ ಮೂಲಕ ಮಾತುಕತೆ ನಡೆಸಬೇಕಾಗುತ್ತದೆ. ಆ ಸಮಯದಲ್ಲಿ ಆಟಗಾರ ನೀವು ನನಗೆ ಹೆಚ್ಚುವರಿ ಮೊತ್ತವನ್ನು ನೀಡಿದರೆ, ನಾನು ನಿಮ್ಮ ತಂಡಕ್ಕಾಗಿ ಆಡುತ್ತೇನೆ ಎಂದು ಹೇಳುತ್ತಾರೆ' ಎಂದು ಅಶ್ವಿನ್ ಹೇಳಿದರು.

'ಮುಂದಿನ ಆವೃತ್ತಿಗೂ ಮುನ್ನ ತಂಡದಿಂದ ರಿಲೀಸ್ ಆದರೆ, ನಂತರದ ಹರಾಜಿನಲ್ಲಿ ಹೆಚ್ಚಿನ ಮೊತ್ತ ಸಿಗುತ್ತದೆ ಎಂಬುದು ಆಟಗಾರನಿಗೆ ತಿಳಿದಿರುತ್ತದೆ. ಆದ್ದರಿಂದ, ಅವರು ನೀವು ಈಗ ನನಗೆ ಉತ್ತಮ ಹಣ ಕೊಡಿ ಇಲ್ಲದಿದ್ದರೆ ಮುಂದಿನ ವರ್ಷ ನಾನು ಹೆಚ್ಚಿನ ಹಣಕ್ಕೆ ಆಯ್ಕೆಯಾಗುತ್ತೇನೆ ಎನ್ನುತ್ತಾರೆ. ಅದರಂತೆ ನಿಗದಿತ ಮೊತ್ತಕ್ಕೂ ಅಧಿಕ ಹಣ ನೀಡಿ ಸಿಎಸ್​ಕೆ ಬ್ರೆವಿಸ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು' ಎಂದಿದ್ದರು.

Dewald Brevis
RCB ಈ ಆಟಗಾರನನ್ನು ಖರೀದಿಸಿದ್ದು 'ಬುದ್ಧಿವಂತ ನಡೆ', ಕೆಲ ತಂಡಗಳು ನನ್ನ ಮಾತನ್ನು ಕೇಳಲಿಲ್ಲ: ಆರ್ ಅಶ್ವಿನ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com