

ಕ್ರಿಕೆಟ್ ನಲ್ಲಿ ಮತ್ತೆ ಫಾರ್ಮ್ ಗೆ ಮರಳಿರುವ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ, ಕ್ರೀಡಾ ವ್ಯವಹಾರದ ಜಗತ್ತಿನಲ್ಲಿ ಹೊಸ ಉದ್ಯಮ ಪ್ರಾರಂಭಿಸಲು ಸಜ್ಜಾಗಿದ್ದಾರೆ.
ಎಂಟು ವರ್ಷಗಳ ಕಾಲ ಅಥ್ಲೆಟಿಕ್ ಉಡುಪುಗಳ ಬ್ರ್ಯಾಂಡ್ ಪೂಮಾದ ರಾಯಭಾರಿಯಾಗಿದ್ದ ಕೊಹ್ಲಿ ಇದೀಗ, ಕ್ರೀಡಾ ಉಡುಪುಗಳ ಬ್ರ್ಯಾಂಡ್ ಅಗಿಲಿಟಾಸ್ ಸ್ಪೋರ್ಟ್ಸ್‌ನೊಂದಿಗೆ( Agilitas Sports) ಪಾಲುದಾರಿಕೆಯನ್ನು ಘೋಷಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ವಿರಾಟ್ ಕೊಹ್ಲಿ, ತನ್ನದೇ ಆದ 'one8' ಸ್ಪೋರ್ಟ್ಸ್ ಬ್ರ್ಯಾಂಡ್' ಅಗಿಲಿಟಾಸ್‌ನೊಂದಿಗೆ ಕೈಜೋಡಿಸಿದೆ ಎಂದು ಖಚಿತಪಡಿಸಿದ್ದಾರೆ. ಪೂಮಾ ಅವರೊಂದಿಗಿನ ತನ್ನ ಎಂಟು ವರ್ಷಗಳ ಒಪ್ಪಂದದ ಮುಕ್ತಾಯದ ನಂತರ ಕೊಹ್ಲಿ 300 ಕೋಟಿ ರೂ. ಆಫರ್ ಕೈಬಿಟ್ಟಿದ್ದು, ಅಜಿಲಿಟಾಸ್ ( Agilitas Sports)ಜೊತೆಗಿನ one8 ಪಾಲುದಾರಿಕೆಯಲ್ಲಿ ಸ್ವತಃ 40 ಕೋಟಿ ರೂ. ಹೂಡಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ.
"ಇಂದು ನನ್ನ ಹೃದಯದಿಂದ ನೇರವಾಗಿ ಎಕ್ಸೈಟಿಂಗ್ ನೀಡುವ ಹೊಸ ಅಧ್ಯಯನದ ದಿನವಾಗಿದೆ. ಉದ್ದೇಶ ಮತ್ತು ಮಹತ್ವಾಕಾಂಕ್ಷೆಯಿಂದ one 8 ಮತ್ತು Agilitas ನ ಹೊಸ ಪ್ರಯಾಣ ಪ್ರಾರಂಭವಾಗುತ್ತದೆ. ಒನ್ 8 ಅನ್ನು ಅಗಿಲಿಟಾಸ್‌ಗೆ ಕಂಪನಿ ಮಾರಾಟ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಪೂಮಾ ಇಂಡಿಯಾದ ಮಾಜಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಅಭಿಷೇಕ್ ಗಂಗೂಲಿ ಸಹ-ಸಂಸ್ಥಾಪಕರಾಗಿರುವ ಅಜಿಲಿಟಾಸ್ ಸ್ಪೋರ್ಟ್ಸ್ ಕ್ರೀಡಾ ಉಡುಪುಗಳ ಸ್ಟಾರ್ಟಪ್ ಆಗಿದೆ.
ಆಫರ್ ಬಂದಾಗ ಅದರ ಹಿಂದಿನ ಶಕ್ತಿ, ಉತ್ಪಾದನಾ ಸಾಮರ್ಥ್ಯಗಳ ಬಗ್ಗೆ ಗಂಗೂಲಿ ತಿಳಿಸಿದ್ದರು. ಅವರಲ್ಲಿರುವ ಪರಿಣತಿ ಮತ್ತು ಅಂತಹವರು ನನಗೆ ಅರ್ಥಮಾಡಿಸಿದಾಗ ಇದು ಏನಾದರೂ ದೊಡ್ಡದಾಗಬಹುದು ಎಂದು ಭಾವಿಸಿದೆ ಮತ್ತು ಸಹಜವಾಗಿ ನಾನು ಅದರ ಭಾಗವಾಗಲು ಬಯಸುತ್ತೇನೆ ಎಂದು ಕೊಹ್ಲಿ ತಮ್ಮ ನಿರ್ಧಾರವನ್ನು ವಿವರಿಸಿದ್ದಾರೆ.
ಈ ಮಧ್ಯೆ ಕೊಹ್ಲಿ ಅಗಿಲಿಟಾಸ್‌ನ ಷೇರುದಾರರಾಗುತ್ತಾರೆ ಎಂದು ಗಂಗೂಲಿ ಖಚಿತಪಡಿಸಿದ್ದಾರೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ. ಕ್ರಿಕೆಟ್ ನಲ್ಲಿ ಮತ್ತೆ ಫಾರ್ಮ್ ಗೆ ಮರಳಿರುವ 37 ವರ್ಷದ ಕೊಹ್ಲಿ, ಇತ್ತೀಚಿನ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲಿ ಎರಡು ಶತಕ ಸೇರಿದಂತೆ 302 ರನ್‌ಗಳನ್ನು ಸಿಡಿಸಿ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದಾರೆ.
Advertisement