

ಸಾಮಾನ್ಯವಾಗಿ ಹರಾಜಿನಲ್ಲಿ ತರಬೇತುದಾರರು ಮತ್ತು ಫ್ರಾಂಚೈಸಿಯ ಆಡಳಿತ ಮಂಡಳಿ ಮಾತ್ರ ಇರುತ್ತದೆ. ಆದರೆ, ಕ್ರಿಕ್‌ಬಜ್‌ನ ವರದಿ ಪ್ರಕಾರ, ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ನಾಯಕ ಶ್ರೇಯಸ್ ಅಯ್ಯರ್ ಅಬುಧಾಬಿಯಲ್ಲಿ ಡಿಸೆಂಬರ್ 16 ರಂದು ನಡೆಯಲಿರುವ 2026ರ ಐಪಿಎಲ್ ಹರಾಜಿನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. 359 ಆಟಗಾರರು ಹರಾಜಿನಲ್ಲಿ ಭಾಗವಹಿಸಲಿದ್ದಾರೆ.
ಡಿಸೆಂಬರ್ 10 ಹರಾಜಿಗೆ ಪ್ರತಿನಿಧಿಗಳನ್ನು ಹೆಸರಿಸಲು ಕೊನೆಯ ದಿನಾಂಕವಾಗಿತ್ತು ಮತ್ತು ಪಂಜಾಬ್ ತಂಡ ಶ್ರೇಯಸ್ ಅಯ್ಯರ್ ಅವರನ್ನು ಆ ಪಟ್ಟಿಯಲ್ಲಿ ಸೇರಿಸಿದೆ ಎನ್ನಲಾಗಿದೆ. ಶ್ರೇಯಸ್ ಸದ್ಯ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಬಿಸಿಸಿಐ ಹರಾಜು ಮಾರ್ಗಸೂಚಿಗಳ ಪ್ರಕಾರ, ಗರಿಷ್ಠ ಎಂಟು ಸದಸ್ಯರು ಹರಾಜಿನ ಕೋಷ್ಟಕದ ಭಾಗವಾಗಬಹುದು.
2025-26ರ ಆಶಸ್ ಸರಣಿಗೆ ವೀಕ್ಷಕ ವಿವರಣೆ ನೀಡುವ ಸಲುವಾಗಿ ಆಸ್ಟ್ರೇಲಿಯಾದ ಸೆವೆನ್ ನೆಟ್‌ವರ್ಕ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಕೋಚ್ ರಿಕಿ ಪಾಂಟಿಂಗ್ ಐಪಿಎಲ್ 2026ರ ಹರಾಜಿನಲ್ಲಿ ಭಾಗವಹಿಸಲು ಸಾಧ್ಯವಾಗದಿರಬಹುದು. ಪಂಜಾಬ್ ಕಿಂಗ್ಸ್ ತಂಡದ ಪರ್ಸ್‌ನಲ್ಲಿ 11.50 ಕೋಟಿ ರೂ. ಉಳಿದಿದ್ದು, ಹೆಚ್ಚಿನ ಆಟಗಾರರನ್ನು ಖರೀದಿಸುವ ಅಗತ್ಯವಿಲ್ಲ.
ಆಶಸ್ ಸರಣಿಯಲ್ಲಿ ನಿರತರಾಗಿದ್ದರೂ, ಕಿವೀಸ್‌ನ ಡೇನಿಯಲ್ ವೆಟ್ಟೋರಿ ಹರಾಜಿನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಅವರು ಸದ್ಯ ಆಸ್ಟ್ರೇಲಿಯಾದ ಸಹಾಯಕ ಕೋಚ್ ಆಗಿದ್ದು, ಕ್ರಿಕೆಟ್ ಆಸ್ಟ್ರೇಲಿಯಾದಿಂದ ಅನುಮತಿ ಪಡೆದಿದ್ದಾರೆ ಎನ್ನಲಾಗಿದೆ. ಎಲ್‌ಎಸ್‌ಜಿಗೆ ಸಂಬಂಧಿಸಿದಂತೆ, ಟಾಮ್ ಮೂಡಿ ಮತ್ತು ಜಸ್ಟಿನ್ ಲ್ಯಾಂಗರ್ ಭಾಗವಹಿಸುವ ನಿರೀಕ್ಷೆಯಿದೆ.
ಐಪಿಎಲ್ ಹರಾಜಿನಲ್ಲಿ ಕೆಕೆಆರ್ ಮತ್ತು ಸಿಎಸ್‌ಕೆ ಕ್ರಮವಾಗಿ ಪರ್ಸ್‌ನಲ್ಲಿ 64 ಕೋಟಿ ಮತ್ತು 43 ಕೋಟಿ ರೂ. ಹೊಂದಿದ್ದು, ಹೆಚ್ಚಿನ ಆಟಗಾರರನ್ನು ಖರೀದಿಸಬೇಕಿದೆ. ಇತ್ತ ಮುಂಬೈ ಇಂಡಿಯನ್ಸ್ ಬಳಿ ಕನಿಷ್ಠ ಹಣ ಉಳಿದಿದೆ. ಕೇವಲ 2.75 ಕೋಟಿ ರೂ. ಪರ್ಸ್‌ನಲ್ಲಿದೆ. ಏಕೆಂದರೆ ಅವರು ಐಪಿಎಲ್ 2025ನೇ ಆವೃತ್ತಿಯ ತಮ್ಮ ಆಟಗಾರರೊಂದಿಗೆ ಮುಂದುವರಿದಿದ್ದಾರೆ.
Advertisement