ಟಿ20 ಪಂದ್ಯ ರದ್ದು
ಕ್ರಿಕೆಟ್
ತೀವ್ರ ಮಂಜು, ಭಾರತ-ದ.ಆಫ್ರಿಕಾ ನಡುವಿನ 4ನೇ ಟಿ20 ಪಂದ್ಯ ರದ್ದು!
ಹವಾಮಾನ ವೈಪರಿತ್ಯ, ದಟ್ಟ ಮಂಜು ಕ್ರೀಡಾಂಗಣವನ್ನು ಆವರಿಸಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲು ಅಂಪೈರ್ಗಳು ನಿರ್ಧರಿಸಿದರು.
ಲಖನೌ: ಇಂದು ನಡೆಯಬೇಕಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ ಟಿ20 ಪಂದ್ಯ ದಟ್ಟ ಮಂಜಿನಿಂದಾಗಿ ರದ್ದಾಗಿದೆ.
ಉತ್ತರ ಪ್ರದೇಶದ ಲಖನೌನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ 4ನೇ ಟಿ20 ಪಂದ್ಯ ಟಾಸ್ ಕೂಡ ಇಲ್ಲದೇ ದಟ್ಟ ಮಂಜಿನಿಂದಾಗಿ ರದ್ದಾಗಿದೆ.
ಹವಾಮಾನ ವೈಪರಿತ್ಯ, ದಟ್ಟ ಮಂಜು ಕ್ರೀಡಾಂಗಣವನ್ನು ಆವರಿಸಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲು ಅಂಪೈರ್ಗಳು ನಿರ್ಧರಿಸಿದರು.
ಭಾರೀ ಮಂಜಿನ ಮುಸುಕು ಹಾಗೂ ದಟ್ಟ ಮಂಜು ಮೈದಾನದ ತುಂಬಾ ಹರಡಿದ್ದರಿಂದ ಅಂಪೈರ್ಗಳು ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ.
ಹೀಗಾಗಿ ಈ ಪಂದ್ಯ ಟಾಸ್ ಕೂಡ ನಡೆಯದೆ ರದ್ದಾಗಿದೆ. ವಾಸ್ತವವಾಗಿ ಪೂರ್ವನಿಗದಿಯಂತೆ ಈ ನಾಲ್ಕನೇ ಪಂದ್ಯದ ಟಾಸ್ ಭಾರತೀಯ ಕಾಲಮಾನ ಸಂಜೆ 6:30 ಕ್ಕೆ ನಡೆಯಬೇಕಿತ್ತು.
ಆ ಬಳಿಕ ಸಂಜೆ 7 ಗಂಟೆಗೆ ಆಟ ಆರಂಭವಾಗಬೇಕಿತ್ತು. ಆದರೆ ರಾತ್ರಿ 9:30 ರವರೆಗೂ ಕಾದರೂ ಮಂಜು ಕಡಿಮೆಯಾಗದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು.

