

ಮುಂಬೈ: ಏಕದಿನ ಕ್ರಿಕೆಟ್ ನಲ್ಲಿ ಭವಿಷ್ಯದ ಕುರಿತು ಊಹಾಪೋಹಗಳು ಹರಿದಾಡುತ್ತಿರುವಂತೆಯೇ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಮಹತ್ವದ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
2023 ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಹೀನಾಯ ಸೋಲಿನ ನಿವೃತ್ತಿಯ ಬಗ್ಗೆ ಯೋಚಿಸಿದ್ದೆ ಎಂದು ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಭಾನುವಾರ ಹೇಳಿದ್ದಾರೆ.
ಸ್ವದೇಶದಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ನಾಯಕತ್ವ ತಂಡ ಟ್ರೋಫಿ ಮುಡಿಗೇರಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಸತತ ಒಂಬತ್ತು ಗೆಲುವುಗಳೊಂದಿಗೆ ಫೈನಲ್‌ಗೆ ಸಾಗಿತು. ಆದಾಗ್ಯೂ, ಟ್ರಾವಿಸ್ ಹೆಡ್ ಶತಕ ಗಳಿಸುವುದರೊಂದಿಗೆ ಆಸ್ಟ್ರೇಲಿಯಾ ಭಾರತದ ಟ್ರೋಫಿ ಕನಸಿಗೆ ಕೊಳ್ಳಿ ಇಟ್ಟಿತ್ತು.
ಈ ಕುರಿತು ಮಾಸ್ಟರ್ಸ್ ಯೂನಿಯನ್ ಈವೆಂಟ್‌ನಲ್ಲಿ ಮಾತನಾಡಿದ ರೋಹಿತ್ ಶರ್ಮಾ, "2023 ರ ವಿಶ್ವಕಪ್ ಫೈನಲ್‌ನ ನಂತರ, ಸಂಪೂರ್ಣವಾಗಿ ನಾನು ವಿಚಲಿತನಾಗಿದ್ದೆ. ಕ್ರಿಕೆಟ್ ನನ್ನಿಂದ ಎಲ್ಲವನ್ನೂ ಕಸಿದುಕೊಂಡಿದೆ. ಇನ್ನು ಮುಂದೆ ನಾನು ಇದನ್ನು ಆಡಬಾರದು. ನನ್ನಲ್ಲಿ ಏನೂ ಉಳಿದಿಲ್ಲ ಎಂದು ಭಾವಿಸಿದ್ದೆ ಎಂದು ತಿಳಿಸಿದರು.
ಆ ಸೋಲಿನಿಂದ ಹೊರಬರುವುದು ಅಗತ್ಯವಾಗಿತ್ತು. ಅದಕ್ಕಾಗಿ ಸ್ವಲ್ಪ ಸಮಯ ತೆಗೆದುಕೊಂಡೆ. ಸದ್ಯ ಈ ಸೋಲಿನ ನೋವಿನಿಂದ ಹೊರಬಂದು ಮತ್ತೆ ಚೈತ್ಯನ್ಯ ಪಡೆದುಕೊಂಡು, ಮೈದಾನದಲ್ಲಿ ಆಡಲು ಪ್ರಾರಂಭಿಸಿದ್ದೇನೆ ಎಂದು ತಿಳಿಸಿದರು.
ವಿಶ್ವಕಪ್ ಸೋಲು ಎಲ್ಲರಿಗೂ ನಿರಾಶೆ ಉಂಟು ಮಾಡಿತ್ತು. ವೈಯಕ್ತಿಕವಾಗಿ ಅದು ನನಗೆ ತುಂಬಾ ಕಠಿಣ ಸಮಯವಾಗಿತ್ತು, ಏಕೆಂದರೆ ನಾನು ವಿಶ್ವಕಪ್ ಗಾಗಿ ಕೇವಲ 2-3 ತಿಂಗಳು ಮಾತ್ರ ಅಭ್ಯಾಸ ನಡೆಸಿಲ್ಲ. ಬದಲಿಗೆ 2022ರಲ್ಲಿ ನಾಯಕತ್ವ ವಹಿಸಿಕೊಂಡಾಗಿನಿಂದಲೂ ವಿಶ್ವಕಪ್ ಗೆಲುವಿನ ಬಗ್ಗೆ ಯೋಚಿಸಿದ್ದೆ ಎಂದು ಹೇಳಿದರು.
Advertisement