ಅತ್ಯಾಚಾರ ಪ್ರಕರಣ; ಆರ್‌ಸಿಬಿ ಆಟಗಾರ ಯಶ್ ದಯಾಳ್ ಜಾಮೀನು ಅರ್ಜಿ ತಿರಸ್ಕೃತ; ಐಪಿಎಲ್ 2026ರಲ್ಲಿ ಆಡೋದು ಡೌಟ್!

ಜೈಪುರದ ಸಂಗನೇರ್ ಸದರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ದೂರುದಾರೆ ಯಶ್ ದಯಾಳ್ ಅವರು ತನ್ನ ಕ್ರಿಕೆಟ್ ವೃತ್ತಿಜೀವನಕ್ಕೆ ಸಹಾಯ ಮಾಡುವುದಾಗಿ ಆಮಿಷವೊಡ್ಡಿದ್ದಾರೆ ಮತ್ತು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
Yash Dayal
ಕ್ರಿಕೆಟರ್ ಯಶ್ ದಯಾಳ್
Updated on

ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಕ್ರಿಕೆಟಿಗ ಯಶ್ ದಯಾಳ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜೈಪುರ ಪೋಕ್ಸೊ ನ್ಯಾಯಾಲಯ ತಿರಸ್ಕರಿಸಿದ್ದು, ಕ್ರಿಕೆಟಿಗನಿಗೆ ಇದೀಗ ದೊಡ್ಡ ಹಿನ್ನಡೆಯಾಗಿದೆ.

ಜೈಪುರ ಮೆಟ್ರೋಪಾಲಿಟನ್ ನ್ಯಾಯಾಲಯದ (ಪೋಕ್ಸೊ ಕೋರ್ಟ್ -3) ನ್ಯಾಯಾಧೀಶೆ ಅಲ್ಕಾ ಬನ್ಸಾಲ್ ಅವರ ಆದೇಶದ ಪ್ರಕಾರ, ದಾಖಲೆಯಲ್ಲಿರುವ ವಿಷಯಗಳು ಯಶ್ ದಯಾಳ್ ಅವರನ್ನು ತಪ್ಪಾಗಿ ಆರೋಪಿಸಲಾಗಿದೆ ಎಂದು ಸೂಚಿಸುವುದಿಲ್ಲ ಮತ್ತು ಇದುವರೆಗಿನ ತನಿಖೆಯು ಅವರ ಸಂಭಾವ್ಯ ಭಾಗಿಯಾಗುವಿಕೆಯನ್ನು ಸೂಚಿಸುತ್ತದೆ. ಆದ್ದರಿಂದ ಈ ಹಂತದಲ್ಲಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಲಾಗುವುದಿಲ್ಲ ಎಂದಿದ್ದಾರೆ.

ಜೈಪುರದ ಸಂಗನೇರ್ ಸದರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಅಪ್ರಾಪ್ತ ದೂರುದಾರೆ ಯಶ್ ದಯಾಳ್ ಅವರು ತನ್ನ ಕ್ರಿಕೆಟ್ ವೃತ್ತಿಜೀವನಕ್ಕೆ ಸಹಾಯ ಮಾಡುವುದಾಗಿ ಆಮಿಷವೊಡ್ಡಿದ್ದಾರೆ, ಭಾವನಾತ್ಮಕವಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಮತ್ತು ಜೈಪುರ ಮತ್ತು ಕಾನ್ಪುರದ ಹೋಟೆಲ್‌ಗಳು ಸೇರಿದಂತೆ ಹಲವಾರು ಕಡೆ ಸುಮಾರು ಎರಡೂವರೆ ವರ್ಷಗಳಿಂದ ತನ್ನ ಮೇಲೆ ಪದೇ ಪದೆ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಹುಡುಗಿಯ ಮೊಬೈಲ್‌ನಿಂದ ವಶಪಡಿಸಿಕೊಂಡ ಚಾಟ್‌ಗಳು, ಫೋಟೊಗಳು ಮತ್ತು ವಿಡಿಯೋಗಳು, ಕರೆ ದಾಖಲೆಗಳು ಮತ್ತು ಹೋಟೆಲ್ ವಾಸ್ತವ್ಯ ದಾಖಲೆಗಳನ್ನು ಪೋಕ್ಸೊ ನಿಬಂಧನೆಗಳ ಅಡಿಯಲ್ಲಿ ಪೊಲೀಸರು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸುತ್ತಿದ್ದಾರೆ.

Yash Dayal
IPL 2025 ಸಮಯದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ; RCB ವೇಗಿ ಯಶ್ ದಯಾಳ್ ವಿರುದ್ಧ FIR ದಾಖಲು

ದಯಾಳ್ ಅವರ ವಕೀಲ ಕುನಾಲ್ ಜೈಮನ್, ದಯಾಳ್ ಅವರು ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರ ಹುಡುಗಿಯನ್ನು ಭೇಟಿಯಾಗಿದ್ದರು. ಆಕೆ, ತನ್ನನ್ನು ತಾನು ವಯಸ್ಕಳಂತೆ ತೋರಿಸಿಕೊಂಡಿದ್ದಾಳೆ. ಹಣಕಾಸಿನ ಸಮಸ್ಯೆಗಳನ್ನು ಉಲ್ಲೇಖಿಸಿ ಅವರಿಂದ ಹಣ ಪಡೆದಿದ್ದಾಳೆ ಮತ್ತು ನಂತರ ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಲೇ ಇದ್ದಳು. "ಗೌರವಾನ್ವಿತ ಕ್ರಿಕೆಟಿಗ"ನಿಗೆ ಕಿರುಕುಳ ಮತ್ತು ಸುಲಿಗೆ ಮಾಡಲು ಈ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ವಾದಿಸಿದ್ದಾರೆ.

ಗಾಜಿಯಾಬಾದ್‌ನಲ್ಲಿ ಸಂಬಂಧಿತ ಪ್ರಕರಣವು ಅದೇ ಆಪಾದಿತ ಸುಲಿಗೆ ಪಿತೂರಿಯ ಭಾಗವಾಗಿದೆ ಎಂದು ಪ್ರತಿವಾದಿಯು ಹೇಳಿದ್ದಾರೆ. ಆದರೆ, ಜೈಪುರ ನ್ಯಾಯಾಲಯವು ಅವರಿಗೆ ನಿರೀಕ್ಷಣಾ ಜಾಮೀನಿನ ರಕ್ಷಣೆಯನ್ನು ನಿರಾಕರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com