
ಕೆಲವು ಆಟಗಾರರು, ತಮ್ಮ ವಯಸ್ಸನ್ನು ಲೆಕ್ಕಿಸದೆ, ಅದ್ಭುತ ಪರಿಣಾಮವನ್ನು ಬೀರಿದರು. ಅನುಭವಿ ಆಟಗಾರರಿಗಿಂತ ಕೆಲವು ಹೊಸ ಅನ್‌ಕ್ಯಾಪ್ಡ್ ಪ್ರತಿಭೆಗಳು ಬಿಡ್ಡಿಂಗ್ ಯುದ್ಧವನ್ನು ಸೃಷ್ಟಿಸಿದ್ದನ್ನು ನಾವು ನೋಡಿದ್ದೇವೆ. ಈ ಲೇಖನದಲ್ಲಿ ಐಪಿಎಲ್ 2025ರಲ್ಲಿ ಸುದ್ದಿಯಾದ ಪ್ರತಿಭೆಗಳ ಬಗ್ಗೆ ತಿಳಿಯೋಣ.
ಐಪಿಎಲ್ 2025ನೇ ಆವೃತ್ತಿಯಲ್ಲಿ ಎಲ್ಲರ ಗಮನ ಸೆಳೆದಿದ್ದು 14 ವರ್ಷದ ವೈಭವ್ ಸೂರ್ಯವಂಶಿ. ತಮ್ಮ ಚೊಚ್ಚಲ ಐಪಿಎಲ್ ಪಂದ್ಯದಲ್ಲಿಯೇ ಅವರು 35 ಎಸೆತಗಳಲ್ಲಿ ಶತಕ ಗಳಿಸಿ ದಾಖಲೆ ಬರೆದರು. ಐಪಿಎಲ್‌ನಲ್ಲಿ ತಾವು ಎದುರಿಸಿದ ಶಾರ್ದೂಲ್ ಠಾಕೂರ್ ಅವರ ಮೊದಲ ಎಸೆತದಲ್ಲಿಯೇ ಸಿಕ್ಸರ್ ಬಾರಿಸಿ ತಮ್ಮನ್ನು ತಾವು ಸಾಭೀತುಪಡಿಸಿಕೊಂಡರು.
ಹರಾಜಿಗೆ ಕೆಲವೇ ತಿಂಗಳಿಗೂ ಮುನ್ನ, ಪ್ರಿಯಾಂಶ್ ಆರ್ಯ ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಬಾರಿಸುವ ಮೂಲಕ ಸ್ಕೌಟ್‌ಗಳ ಗಮನ ಸೆಳೆದರು. ಬಳಿಕ ಪಂಜಾಬ್ ಕಿಂಗ್ಸ್ ತಂಡವು ಅವರಿಗೆ ₹3.8 ಕೋಟಿ ಖರ್ಚು ಮಾಡಿತು. ಐಪಿಎಲ್ 2025ನೇ ಆವೃತ್ತಿಯಲ್ಲಿ ಆರ್ಯ 475 ರನ್ ಗಳಿಸಿದರು. CSK ವಿರುದ್ಧ ಅದ್ಭುತ ಶತಕದೊಂದಿಗೆ ತಂಡಕ್ಕೆ ನೆರವಾದರು.
SRH ನ ಮಧ್ಯಮ ಕ್ರಮಾಂಕವು ಅಂತಿಮವಾಗಿ ಅನಿಕೇತ್ ವರ್ಮಾ ಅವರನ್ನು ತನ್ನ ಪ್ರಮುಖ ಬ್ಯಾಟರ್ ಆಗಿ ಕಂಡುಕೊಂಡಿತು. ಅವರು ಆ ಆವೃತ್ತಿಯಲ್ಲಿ 20 ಸಿಕ್ಸರ್‌ಗಳನ್ನು ಬಾರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಸ್ಪಿನ್ ವಿರುದ್ಧ ವರ್ಮಾ ಅವರ ನಿರ್ಭಯತೆಯು SRH ನ ಅತಿದೊಡ್ಡ ಅಸ್ತ್ರವಾಯಿತು. ತಮ್ಮ ಪ್ರತಿಭೆಯಿಂದಲೇ ಅನಿಕೇತ್ ವರ್ಮಾ ಎಲ್ಲರ ಗಮನ ಸೆಳೆದರು.
ಲೆಗ್-ಸ್ಪಿನ್ನರ್ ದಿಗ್ವೇಶ್ ರಾಠಿ ಐಪಿಎಲ್ 2025ನೇ ಆವೃತ್ತಿಯಲ್ಲಿ 13 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದರು. ಪವರ್‌ಪ್ಲೇ ಮತ್ತು ಡೆತ್‌ನಲ್ಲಿ ಬೌಲಿಂಗ್ ಮಾಡಿದರು. ತಮ್ಮ ನಡವಳಿಕೆಯಿಂದ ಒಂದು ಪಂದ್ಯದಿಂದ ನಿಷೇಧಕ್ಕೊಳಗಾದರೂ ಸಹ ಅವರ ಪ್ರಭಾವ ಕುಗ್ಗಲಿಲ್ಲ. ಏಕೆಂದರೆ, ಅವರು ತಮ್ಮ ರಕ್ಷಣಾತ್ಮಕ ಬೌಲಿಂಗ್‌ನಲ್ಲಿ ಪ್ರಭಾವ ಬೀರುತ್ತಲೇ ಇದ್ದರು.
ದೆಹಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದು ವಿಪ್ರಜ್ ನಿಗಮ್. ಐಪಿಎಲ್ 2025ನೇ ಆವೃತ್ತಿಯಲ್ಲಿ 11 ವಿಕೆಟ್‌ಗಳು ಮತ್ತು 179.75 ಬ್ಯಾಟಿಂಗ್ ಸ್ಟ್ರೈಕ್ ರೇಟ್ ಮೂಲಕ ತಂಡಕ್ಕೆ ಅತ್ಯುತ್ತಮ ಆಸ್ತಿಯಾದರು. ಒತ್ತಡದಲ್ಲಿ ವಿಪ್ರಜ್ ಅವರ ಶಾಂತತೆಯು ಡಿಸಿಯ ಮಧ್ಯಮ ಓವರ್‌ಗಳನ್ನು ಮತ್ತೆ ಕ್ರಿಯಾತ್ಮಕಗೊಳಿಸಿತು. ನಿಗಮ್ ಈಗ ಭಾರತ ಎ ಪರವೂ ಆಡುತ್ತಿದ್ದಾರೆ.
ಐಪಿಎಲ್ 2025ನೇ ಆವೃತ್ತಿಯಲ್ಲಿ ಸಿಎಸ್‌ಕೆ ಪಾಲಿಗೆ ಆಯುಷ್ ಮ್ಹಾತ್ರೆ ಉತ್ತಮ ಆಟಗಾರರಾಗಿದ್ದರು. ಬದಲಿ ಆಟಗಾರನಾಗಿ ಸಿಎಸ್‌ಕೆಗೆ ಬಂದ ಅವರು, ಉತ್ತಮ ಪ್ರದರ್ಶನ ನೀಡಿದರು. 7 ಪಂದ್ಯಗಳಲ್ಲಿ 240 ರನ್‌ಗಳು, CSK ಪರ ಟಾಪ್-3 ರನ್ ಗಳಿಕೆದಾರನಾಗಿದ್ದರು. RCB ವಿರುದ್ಧ ಅವರ ಬ್ಯಾಟಿಂಗ್ ಅದ್ಭುತವಾಗಿತ್ತು.
Advertisement