

ಜೈಪುರ: ವಿಜಯ್ ಹಜಾರೆ ಟ್ರೋಫಿಯ ಇಂದಿನ ಉತ್ತರಾಖಂಡ್ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡದ ಸ್ಟಾರ್ ಆಟಗಾರ ಅಂಗ್‌ಕ್ರಿಶ್ ರಘುವಂಶಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಮುಂಬೈ ನೀಡಿದ್ದ 332 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಉತ್ತರಾಖಂಡ ನಿಗಧಿತ 50 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 331 ರನ್ ಕಲೆಹಾಕಿ 51 ರನ್ ಗಳ ಅಂತರದ ಹೀನಾಯ ಸೋಲು ದಾಖಲಿಸಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಪರ ಬ್ಯಾಟಿಂಗ್ ಮಾಡಿದ್ದ ರೋಹಿತ್ ಶರ್ಮಾ ಮೊದಲ ಎಸೆತದಲ್ಲೇ ಗೋಲ್ಡನ್ ಡಕೌಟ್ ಆಗಿದ್ದರು.
ಕೆಕೆಆರ್ ಸ್ಟಾರ್ ಗೆ ಗಂಭೀರ ಗಾಯ
ಈ ಪಂದ್ಯದ ವೇಳೆ ಮುಂಬೈ ತಂಡದ ಬ್ಯಾಟ್ಸ್‌ಮನ್ ಅಂಗ್‌ಕ್ರಿಶ್ ರಘುವಂಶಿ ಅವರಿಗೆ ಗಂಭೀರ ಗಾಯವಾಗಿದೆ. ಫೀಲ್ಡಿಂಗ್ ಮಾಡುವಾಗ 21 ವರ್ಷದ ರಘುವಂಶಿಗೆ ಗಾಯವಾಗಿದ್ದು, ಅವರನ್ನು ಸ್ಟ್ರೆಚರ್ ಮೂಲಕ ಹೊರಗೆ ಕರೆದೊಯ್ಯಬೇಕಾಯಿತು.
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಾರೆಯನ್ನು ಮೌಲ್ಯಮಾಪನಕ್ಕಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಆಗಿದ್ದೇನು?
ಉತ್ತರಾಖಂಡ ಚೇಸಿಂಗ್ ವೇಳೆ ಆಫ್-ಸ್ಪಿನ್ನರ್ ತನುಷ್ ಕೋಟಿಯನ್ ಎಸೆದ 30 ನೇ ಓವರ್‌ನಲ್ಲಿ ರಘುವಂಶಿಗೆ ಗಾಯವಾಯಿತು. ಉತ್ತರಖಾಂಡ್ ನ ಬಲಗೈ ಬ್ಯಾಟ್ಸ್‌ಮನ್ ಸೌರಭ್ ರಾವತ್ ಸ್ಲಾಗ್-ಸ್ವೀಪ್ ಮಾಡಲು ಪ್ರಯತ್ನಿಸಿದರು.
ಈ ವೇಳೆ ಚೆಂಡು ನೇರವಾಗಿ ಡೀಪ್ ಮಿಡ್-ವಿಕೆಟ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರಘುವಂಶಿಯತ್ತ ಸಾಗಿತು. ಈ ವೇಳೆ ಅದನ್ನು ಕ್ಯಾಚ್ ಪಡೆಯಲು ರಘುವಂಶಿ ಮಿಡ್-ವಿಕೆಟ್ ಕಡೆಗೆ ವೇಗವಾಗಿ ಓಡಿ ಮೇಲ್ಭಾಗವಾಗಿ ಚೆಂಡು ಹಿಡಿಯಲೆತ್ನಿಸಿದರು.
ಈ ವೇಳೆ ರುಘವಂಶಿ ಕೆಳಕ್ಕೆ ತೀವ್ರವಾಗಿ ಬಿದ್ದು ಭುಜಕ್ಕೆ ಮಾಡಿಕೊಂಡರು. ಅಲ್ಲದೆ ಅವರ ತಲೆ ಕೂಡ ನೆಲ್ಲಕ್ಕೆ ಅಪ್ಪಳಿಸಿತು.
ರಘುವಂಶಿ ಕೆಲವು ಸೆಕೆಂಡುಗಳ ಮೈದಾನದಲ್ಲೇ ನೋವಿನಿಂದ ಒದ್ದಾಡಿದರು. ಈ ವೇಳೆ ಫಿಸಿಯೋಗಳು ಧಾವಿಸಿ ಅವರುನ್ನು ಪರೀಕ್ಷಿಸಿ ಬಳಿಕ ಮೈದಾನದಿಂದ ಹೊರಕ್ಕೆ ಕರೆದೊಯ್ಯುವ ನಿರ್ಧಾರ ಮಾಡಿದರು.
ರಘುವಂಶಿ ನಡೆಯಲೂ ಆಗದ ಸ್ಥಿತಿಯಲ್ಲಿದ್ದರಿಂದ ಅವರನ್ನು ಸ್ಟ್ರೆಚರ್ ಮೇಲೆ ಮಲಗಿಸಿಕೊಂಡು ಕರೆದೊಯ್ಯಲಾಯಿತು. ಬಳಿಕ ಅವರನ್ನು ಆಂಬ್ಯುಲೆನ್ಸ್ ಮೂಲಕ ಹತ್ತಿರದ SDMH ಆಸ್ಪತ್ರೆಗೆ ಕರೆದೊಯ್ಯಿತು.
ಅಲ್ಲಿ ಅಗತ್ಯವಿರುವ ಎಲ್ಲಾ ಸ್ಕ್ಯಾನ್‌ಗಳನ್ನು ಮಾಡುವುದರ ಜೊತೆಗೆ ಅವರನ್ನು ವೀಕ್ಷಣೆಯಲ್ಲಿ ಇರಿಸಲಾಗುತ್ತದೆ ಎಂದು ತಂಡದ ಮೂಲಗಳು ತಿಳಿಸಿವೆ.
Advertisement