Year Ender 2025: ವಿರಾಟ್ ಕೊಹ್ಲಿಯಿಂದ ರೋಹಿತ್ ಶರ್ಮಾವರೆಗೆ, ಈ ವರ್ಷ ನಿವೃತ್ತಿ ಘೋಷಿಸಿದ ಭಾರತೀಯ ಆಟಗಾರರು

2025ರಲ್ಲಿ, ಹಲವಾರು ಭಾರತೀಯ ಕ್ರಿಕೆಟಿಗರು ನಿವೃತ್ತಿ ಘೋಷಿಸಿದ್ದಾರೆ. ಕೆಲವರು ಒಂದೇ ಸ್ವರೂಪದಿಂದ, ಇತರರು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟೆಸ್ಟ್‌ನಿಂದ ಹಿಂದೆ ಸರಿದಿದ್ದಾರೆ.
Virat Kohli and Rohit Sharma
ವಿರಾಟ್ ಕೊಹ್ಲಿ - ರೋಹಿತ್ ಶರ್ಮಾ

2025ರಲ್ಲಿ ಅನೇಕ ಭಾರತೀಯ ಕ್ರಿಕೆಟಿಗರು ನಿವೃತ್ತಿ ಘೋಷಿಸಿದ್ದಾರೆ. ಕೆಲವರು ಕೇವಲ ಒಂದು ಸ್ವರೂಪದಿಂದ ಮಾತ್ರ, ಉಳಿದವರು ತಮ್ಮ ವೃತ್ತಿಜೀವನವನ್ನು ಒಟ್ಟಾರೆಯಾಗಿ ಕೊನೆಗೊಳಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರೆ, ದೇಶೀಯ ಅನುಭವಿಗಳಾದ ವೃದ್ಧಿಮಾನ್ ಸಾಹಾ ಮತ್ತು ಮೋಹಿತ್ ಶರ್ಮಾ ಸೇರಿದಂತೆ ಹಲವರು, ಭವಿಷ್ಯದ ಪೀಳಿಗೆಗೆ ದಾರಿ ಮಾಡಿಕೊಡಲು ತೀರ್ಮಾನಿಸಿದ್ದಾರೆ. 2025ರಲ್ಲಿ ನಿವೃತ್ತಿ ಘೋಷಿಸಿದ ಭಾರತೀಯ ಕ್ರಿಕೆಟಿಗರ ಪಟ್ಟಿ ಇಲ್ಲಿದೆ...

1. ವಿರಾಟ್ ಕೊಹ್ಲಿ

Virat Kohli
ವಿರಾಟ್ ಕೊಹ್ಲಿ

2024ರ ವಿಶ್ವಕಪ್ ಗೆಲುವಿನ ನಂತರ ಟಿ20ಐ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದ ವಿರಾಟ್ ಕೊಹ್ಲಿ, ಜೂನ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಗೂ ಮುನ್ನ ಟೆಸ್ಟ್ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾದರು.

2. ರೋಹಿತ್ ಶರ್ಮಾ

Rohit Sharma
ರೋಹಿತ್ ಶರ್ಮಾ

ಹಿಟ್‌ಮ್ಯಾನ್ ಕೂಡ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಮೂಲಕ ಕ್ರಿಕೆಟ್ ಜಗತ್ತಿಗೆ ಆಘಾತ ನೀಡಿದರು. ರೋಹಿತ್ ಕೂಡ 2024ರ ವಿಶ್ವಕಪ್ ಗೆಲುವಿನ ನಂತರ ಟಿ20ಐ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು.

3. ಚೇತೇಶ್ವರ ಪೂಜಾರ

Cheteshwar Pujara
ಚೇತೇಶ್ವರ ಪೂಜಾರ

ಭಾರತದ ಟೆಸ್ಟ್ ತಂಡದ ಅತ್ಯುತ್ತಮ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಹೇಳಲಾಗುತ್ತಿದ್ದ, ಹಲವು ವರ್ಷಗಳಿಂದ ಭಾರತೀಯ ತಂಡದಿಂದ ದೂರ ಉಳಿದಿದ್ದ ಚೇತೇಶ್ವರ ಪೂಜಾರ ಆಗಸ್ಟ್‌ನಲ್ಲಿ ಎಲ್ಲ ಸ್ವರೂಪದ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು.

4. ವರುಣ್ ಆ್ಯರನ್

Varun Aaron
ವರುಣ್ ಆ್ಯರನ್

ಭಾರತದ ಅನುಭವಿ ವೇಗಿ ವರುಣ್ ಆ್ಯರನ್, ಜಾರ್ಖಂಡ್ ತಂಡ ವಿಜಯ್ ಹಜಾರೆ ಟ್ರೋಫಿಯಿಂದ (VHT) ಹೊರಬಿದ್ದ ಸ್ವಲ್ಪ ಸಮಯದ ನಂತರ, ಜನವರಿಯಲ್ಲಿ ನಿವೃತ್ತಿ ಘೋಷಿಸಿದರು.

5. ವೃದ್ಧಿಮಾನ್ ಸಾಹ

Wriddhiman Saha
ವೃದ್ದಿಮಾನ್ ಸಾಹ

ಪಶ್ಚಿಮ ಬಂಗಾಳದ ಕೀಪರ್-ಬ್ಯಾಟರ್ 2025/26 ದೇಶೀಯ ಆವೃತ್ತಿಯ ಆರಂಭಕ್ಕೂ ಮುನ್ನ ಎಲ್ಲ ಸ್ವರೂಪಗಳಿಂದ ನಿವೃತ್ತಿ ಹೊಂದುವ ನಿರ್ಧಾರವನ್ನು ಪ್ರಕಟಿಸಿದರು.

6. ಅಮಿತ್ ಮಿಶ್ರಾ

Amit Mishra bids adieu to international cricket
ಅಮಿತ್ ಮಿಶ್ರಾ

ಭಾರತದ ಮಾಜಿ ಸ್ಪಿನ್ನರ್ ಅಮಿತ್ ಮಿಶ್ರಾ ಸೆಪ್ಟೆಂಬರ್‌ನಲ್ಲಿ ನಿವೃತ್ತಿ ಘೋಷಿಸಿದರು. ಭಾರತ ಮತ್ತು ಐಪಿಎಲ್‌‌ನಲ್ಲಿ ಫ್ರಾಂಚೈಸಿಗಳಿಗೆ ಅತ್ಯಂತ ಗಮನಾರ್ಹ ಬೌಲರ್‌ಗಳಲ್ಲಿ ಒಬ್ಬರಾಗಿ ಸ್ಥಾನ ಪಡೆದಿದ್ದರು.

7. ಪಿಯೂಷ್ ಚಾವ್ಲಾ

Piyush Chawla
ಪಿಯೂಷ್ ಚಾವ್ಲಾ

ಎಲ್ಲ ಸ್ವರೂಪಗಳು ಮತ್ತು ಐಪಿಎಲ್‌ಗೆ ನಿವೃತ್ತಿ ಘೋಷಿಸಿದ ಮತ್ತೊಬ್ಬ ಅನುಭವಿ ಭಾರತೀಯ ಸ್ಪಿನ್ನರ್ ಪಿಯೂಷ್ ಚಾವ್ಲಾ. ಬಳಿಕ ಇಂಟರ್‌ನ್ಯಾಷನಲ್‌ ಲೀಗ್ (ಐಎಲ್‌ಟಿ20) ನಲ್ಲಿ ಭಾಗವಹಿಸಿದರು.

8. ಮೋಹಿತ್ ಶರ್ಮಾ

Mohit Sharma
ಮೋಹಿತ್ ಶರ್ಮಾ

ಮಾಜಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವೇಗಿ ಮಿನಿ-ಹರಾಜಿಗೂ ಮುನ್ನ ಎಲ್ಲ ರೀತಿಯ ಕ್ರಿಕೆಟ್ ಮತ್ತು ಐಪಿಎಲ್‌ಗೆ ವಿದಾಯ ಹೇಳಿದರು.

9. ರಿಷಿ ಧವನ್

Rishi Dhawan
ರಿಷಿ ಧವನ್

ಹಿಮಾಚಲ ಪ್ರದೇಶದ 34 ವರ್ಷದ ಕ್ರಿಕೆಟಿಗ ರಿಷಿ ಧವನ್, ಈ ವರ್ಷದ ಆರಂಭದಲ್ಲಿ ವಿಜಯ್ ಹಜಾರೆ ಟ್ರೋಫಿಯ ಗುಂಪು ಹಂತ ಮುಗಿದ ತಕ್ಷಣವೇ ಸೀಮಿತ ಓವರ್‌ಗಳ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು.

10. ಕೃಷ್ಣಪ್ಪ ಗೌತಮ್

Former India all-rounder Krishnappa Gowtham announces retirement
ಕೃಷ್ಣಪ್ಪ ಗೌತಮ್

ಕರ್ನಾಟಕದ ತಾರೆ 2025 ರಲ್ಲಿ ಅಂತರರಾಷ್ಟ್ರೀಯ ಮತ್ತು ದೇಶೀಯ ಎರಡೂ ರೀತಿಯ ಕ್ರಿಕೆಟ್‌ನಿಂದ ಇತ್ತೀಚೆಗೆ ನಿವೃತ್ತರಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com