

ಈವರೆಗೂ.. ಎಂದೂ ನೋಡಿರದ ಸ್ಪಿನ್ನರ್ ಒಬ್ಬರ ವಿಚಿತ್ರದ ಬೌಲಿಂಗ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಎಡಗೈ ಬೌಲರ್ ಆಕ್ಷನ್ ಮಾಡುತ್ತಾ, ಮಾಡುತ್ತಾ ಬಂದು ಅಂತಿಮವಾಗಿ ಬಲಗೈಯಲ್ಲಿ ಬೌಲಿಂಗ್ ಮಾಡುವುದು ವಿಡಿಯೋದಲ್ಲಿದೆ.
ಎಕ್ಸ್ ನಲ್ಲಿ ವೈರಲ್ ಆಗಿರುವ ಈ ಸ್ಟನಿಂಗ್ ವಿಡಿಯೋಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಬೌಲರ್ ಎಡಗೈ ಸ್ಪಿನ್ನರ್‌ನಂತೆ ಬಾಲ್ ತೆಗೆದುಕೊಂಡು ಓಡಲು ಶುರು ಮಾಡ್ತಾರೆ. ಆದರೆ ಇದ್ದಕ್ಕಿದ್ದಂತೆ ಬಾಲ್ ನ್ನು ಬಲಗೈಗೆ ಬದಲಾಯಿಸಿ, ಬೌಲಿಂಗ್ ಮಾಡುತ್ತಾರೆ. ಇದರಿಂದ ಗೊಂದಲಕ್ಕೊಳಗಾಗುವ ಬ್ಯಾಟರ್ ಸ್ಟಂಪ್ ಯಿಂದ ಮುಂದೆ ಬಂದು ಹೊಡೆತಕ್ಕೆ ಮುಂದಾದಾಗ ವಿಕೆಟ್ ಕೀಪರ್ ಸ್ಟಂಪ್ ಔಟ್ ಮಾಡ್ತಾರೆ.
ಒಂದು ರೀತಿಯಲ್ಲಿ ತಮಾಷೆಯಾಗಿ ಕಾಣುವ ಈ ಚಿತ್ರ ವಿಚಿತ್ರದ ಬೌಲಿಂಗ್ ಶೈಲಿಯ ವೀಡಿಯೊ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಕೆಲವರು ಇದನ್ನು "ಅತ್ಯುತ್ತಮ ಬೌಲಿಂಗ್ ಎನ್ನುತ್ತಿದ್ದಾರೆ.
ಟ್ವಿಟರ್ ನಲ್ಲಿ ಈ ವಿಡಿಯೋ ಹಂಚಿಕೊಂಡಿರುವ ಡಾ. ಪ್ರಶಾಂತ್ ನಾಯರ್ ಎಂಬ ಬಳಕೆದಾರರು, ತಂದೆ ಆತನನ್ನು ಕ್ರಿಕೆಟ್ ಆಟಗಾರನ್ನಾಗಿ ಮಾಡಲು ಬಯಸಿದ್ದರು ಆದರೆ, ತಾಯಿ ಡ್ಯಾನ್ಸರ್ ಮಾಡಲು ಬಯಸಿದ್ದರು. ಇದೇ ಕಾರಣದಿಂದ ಆತ ಹೀಗಾಗಿದ್ದಾನೆ ಎಂದು ಪೋಸ್ಟ್ ಮಾಡಿದ್ದಾರೆ. ಆದರೆ ಇದು ಯಾವ ಪಂದ್ಯದಲ್ಲಿ ನಡೆಯಿತು ಎಂಬ ಬಗ್ಗೆ ಮಾಹಿತಿ ನಿಖರವಾಗಿ ಸಿಕ್ಕಿಲ್ಲ.
Advertisement