
ನವದೆಹಲಿ: ICC ಪುರುಷ ಬ್ಯಾಟರ್ ಗಳ ಟಿ-20 ಶ್ರೇಯಾಂಕ ಬುಧವಾರ ಬಿಡುಗಡೆಯಾಗಿದ್ದು, ಭಾರತೀಯ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 38ನೇ ಸ್ಥಾನದಿಂದ ನಂಬರ್ 2 ಸ್ಥಾನಕ್ಕೆ ಜಿಗಿದಿದ್ದಾರೆ.
ಇತ್ತೀಜಿಗೆ ಸ್ವದೇಶದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಅಭಿಷೇಕ್, ಮುಂಬೈ ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಅತಿ ವೇಗದಲ್ಲಿ 135 ರನ್ ಬಾರಿಸಿದ್ದರು. ಇದರೊಂದಿಗೆ ಟಿ-20 ಬ್ಯಾಟರ್ ಗಳ ಪಟ್ಟಿಯಲ್ಲಿ 38ನೇ ಸ್ಥಾನ ಗಳಿಸಿದ್ದರು.
ಟಿ-20ಯಲ್ಲಿ ಕೇವಲ 54 ಎಸೆತಗಳಲ್ಲಿ 135 ವೈಯಕ್ತಿಕ ರನ್ ಗಳಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಹೀಗಾಗಿ 24 ವರ್ಷದ ಬ್ಯಾಟರ್ ಐಸಿಸಿ ಬ್ಯಾಟರ್ ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನೂ ಆಸ್ಟ್ರೇಲಿಯಾದ ತ್ರಾವಿಸ್ ಹೆಡ್ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಆದರೆ ಅವರಿಗಿಂತ ಅಭಿಷೇಕ್ ಶರ್ಮಾ ಕೇವಲ 26 ರೇಟಿಂಗ್ ಪಾಯಿಂಟ್ ಗಳಿಂದ ಹಿಂದೆ ಬಿದಿದ್ದು, ಅವರ ದಾಖಲೆ ಮುರಿಯಲು ಪ್ರಯತ್ನಿಸುತ್ತಿದ್ದಾರೆ. ತಿಲಕ್ ವರ್ಮಾ 3, ನಾಯಕ ಸೂರ್ಯ ಕುಮಾರ್ ಯಾದವ್ 5ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನೂ ಹಾರ್ದಿಕ್ ಪಾಂಡ್ 51 ಮತ್ತು ಶಿವಂ ದುಬೆ 38 ರಿಂದ 58ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಇದೇ ರೀತಿ ICC ಬೌಲರ್ ಪಟ್ಟಿಯಲ್ಲಿ ವರುಣ್ ಚಕ್ರವರ್ತಿ ಮೂರು ಸ್ಥಾನಗಳ ಬಡ್ತಿ ಪಡೆದು ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ಭಾರತದವರೇ ಆದ ರವಿ ಬಿಷ್ಣೋಯಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಡ್ ವಿರುದ್ಧದ ಸರಣಿಯಲ್ಲಿ 14 ವಿಕೆಟ್ ಗಳಿಸಿದ್ದ ವರುಣ್, ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಅಲ್ಲದೇ ಭಾರತ ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿತ್ತು.
Advertisement