ಆಕಾಶಕ್ಕೆ ರಾಕೆಟ್ ಬಿಟ್ಟಂತೆ: ನಾನು ವೃತ್ತಿಜೀವನದಲ್ಲಿ ಸಿಡಿಸಿದ ಸಿಕ್ಸ್‌ಗಳನ್ನು ಅಭಿಷೇಕ್ 2 ಗಂಟೆಯಲ್ಲೇ ಸಿಡಿಸಿದ್ರು: Alastair Cook Video!

ಇನ್ನು ಇಂಗ್ಲೆಂಡ್ ದಂತಕಥೆ ಅಲಸ್ಟೈರ್ ಕುಕ್ ಅವರು ತಮ್ಮ ವೃತ್ತಿ ಜೀವನದಲ್ಲಿ ಒಟ್ಟಾರೆ 25 ಸಿಕ್ಸರ್ ಗಳನ್ನು ಹೊಡೆದಿದ್ದಾರೆ. 161 ಟೆಸ್ಟ್ ಪಂದ್ಯಗಳಲ್ಲಿ 11 ಸಿಕ್ಸ್, ಏಕದಿನ ಪಂದ್ಯದಲ್ಲಿ 10 ಮತ್ತು ಟಿ20 ಕ್ರಿಕೆಟ್ ನಲ್ಲಿ ನಾಲ್ಕು ಸಿಕ್ಸ್ ಗಳನ್ನು ಮಾತ್ರ ಸಿಡಿಸಿದ್ದಾರೆ.
ಆಕಾಶಕ್ಕೆ ರಾಕೆಟ್ ಬಿಟ್ಟಂತೆ: ನಾನು ವೃತ್ತಿಜೀವನದಲ್ಲಿ ಸಿಡಿಸಿದ ಸಿಕ್ಸ್‌ಗಳನ್ನು ಅಭಿಷೇಕ್ 2 ಗಂಟೆಯಲ್ಲೇ ಸಿಡಿಸಿದ್ರು: Alastair Cook Video!
Updated on

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಪಂದ್ಯದಲ್ಲಿ ಟಿ20 ಚಾಂಪಿಯನ್ ಯುವರಾಜ್ ಸಿಂಗ್ ಅವರ ಶಿಷ್ಯ ಅಭಿಷೇಕ್ ಶರ್ಮಾ ಇಂಗ್ಲೆಂಡ್ ಬೌಲರ್‌ಗಳನ್ನು ದಂಡಿಸಿದರು. ಟಿ20 ಕ್ರಿಕೆಟ್‌ನಲ್ಲಿ ಎರಡನೇ ಶತಕ ಬಾರಿಸಿದ ಅಭಿಷೇಕ್ ಶರ್ಮಾ, 15 ಪಂದ್ಯಗಳ ನಂತರ ಮತ್ತೊಂದು ದಾಖಲೆಯ ಶತಕ ಗಳಿಸಿದರು. ಅಲ್ಲದೆ ಅಂತರರಾಷ್ಟ್ರೀಯ ಟಿ20 ಪಂದ್ಯಾವಳಿಯಲ್ಲಿ ಅಭಿಷೇಕ್ ಭಾರತೀಯ ಕ್ರಿಕೆಟ್ ತಂಡದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ಅವರ ಪಟಾಕಿಯಂತಹ ಸಿಕ್ಸರ್ ಗಳನ್ನು ನೋಡಿ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಅಲಸ್ಟೈರ್ ಕುಕ್ ಮೂಕವಿಸ್ಮಿತರಾದರು.

ಇಂಗ್ಲೆಂಡ್‌ನ ದಂತಕಥೆ ಕ್ರಿಕೆಟಿಗ ಸರ್ ಅಲಸ್ಟೈರ್ ಕುಕ್, ಅಭಿಷೇಕ್ ಶರ್ಮಾ ಅವರ ಬ್ಯಾಟಿಂಗ್ ಪ್ರತಿಭೆಗೆ ಅಭಿಮಾನಿ. ಅಭಿಷೇಕ್ ಶರ್ಮಾ ದೊಡ್ಡ ಹೊಡೆತಗಳನ್ನು ಸಿಡಿಸಿದ್ದಾರೆ. ನನ್ನ ವೃತ್ತಿಜೀವನದಲ್ಲಿ ನಾನು ಯಾವುದೇ ದೊಡ್ಡ ಹೊಡೆತಗಳನ್ನು ಗಳಿಸಲು ಸಾಧ್ಯವಾಗಿಲ್ಲ ಎಂದು ಇಂಗ್ಲಿಷ್ ದಂತಕಥೆ ಭಾರತದ ಯುವ ಬ್ಯಾಟ್ಸ್‌ಮನ್ ಅನ್ನು ಹೊಗಳಿದ್ದಾರೆ. ಅಭಿಷೇಕ್ ಶರ್ಮಾ 54 ಚೆಂಡುಗಳಲ್ಲಿ 135 ರನ್‌ಗಳನ್ನು ಬಾರಿಸಿದ್ದು ಅದರಲ್ಲಿ 13 ಸಿಕ್ಸರ್ ಗಳು ಸೇರಿವೆ. ಈ ದಾಖಲೆ ಮೂಲಕ ಅಭಿಷೇಕ್ ಶರ್ಮಾ ಭಾರತೀಯ T20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇನ್ನು ಅಲಸ್ಟೈರ್ ಕುಕ್ ಅವರು ತಮ್ಮ ವೃತ್ತಿ ಜೀವನದಲ್ಲಿ ಒಟ್ಟಾರೆ 25 ಸಿಕ್ಸರ್ ಗಳನ್ನು ಹೊಡೆದಿದ್ದಾರೆ. 161 ಟೆಸ್ಟ್ ಪಂದ್ಯಗಳಲ್ಲಿ 11 ಸಿಕ್ಸ್, ಏಕದಿನ ಪಂದ್ಯದಲ್ಲಿ 10 ಮತ್ತು ಟಿ20 ಕ್ರಿಕೆಟ್ ನಲ್ಲಿ ನಾಲ್ಕು ಸಿಕ್ಸ್ ಗಳನ್ನು ಮಾತ್ರ ಸಿಡಿಸಿದ್ದಾರೆ.

ಅಭಿಷೇಕ್ ಶರ್ಮಾನ್ 17 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಅವರು ಭಾರತೀಯ ಟಿ20 ಕ್ರಿಕೆಟ್‌ನಲ್ಲಿ ಎರಡನೇ ವೇಗದ ಅರ್ಧಶತಕ ಗಳಿಸಿದರು. ಇನ್ನು 37ನೇ ಎಸೆತದಲ್ಲಿ ವೇಗದ ಶತಕ ಗಳಿಸಿದರು. ಇದಲ್ಲದೆ ಇಂಗ್ಲೆಂಡ್ ವಿರುದ್ಧ ಅತಿ ವೇಗದ ಶತಕ ಗಳಿಸಿದ ಕ್ರಿಕೆಟ್ ಜಗತ್ತಿನ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೆ ಟಿ20ಯಲ್ಲಿ ಟೀಂ ಇಂಡಿಯಾದಲ್ಲಿ ಅತಿ ಹೆಚ್ಚು ವೈಯಕ್ತಿಕ (135) ರನ್ ಗಳಿಸಿದ ದಾಖಲೆಯನ್ನು ಸಹ ಸ್ಥಾಪಿಸಿದರು.

ಆಕಾಶಕ್ಕೆ ರಾಕೆಟ್ ಬಿಟ್ಟಂತೆ: ನಾನು ವೃತ್ತಿಜೀವನದಲ್ಲಿ ಸಿಡಿಸಿದ ಸಿಕ್ಸ್‌ಗಳನ್ನು ಅಭಿಷೇಕ್ 2 ಗಂಟೆಯಲ್ಲೇ ಸಿಡಿಸಿದ್ರು: Alastair Cook Video!
Ranji Trophy: ಬ್ಯಾಟರ್ ಶಾಟ್ ಗೆ ಹೆದರಿದ ಡೆಲ್ಲಿ ನಾಯಕ Ayush Badoni; ಮೈದಾನದಲ್ಲೇ ಬಿದ್ದುಬಿದ್ದು ನಕ್ಕ Virat Kohli

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com