
ಹೈದರಾಬಾದ್: ಕೌಲಾಲಂಪುರದಲ್ಲಿ ಇತ್ತೀಚೆಗೆ ನಡೆದ ಐಸಿಸಿ 19 ವರ್ಷದೊಳಗಿನ ಮಹಿಳೆಯರ T20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಮಹಿಳಾ ಕ್ರಿಕೆಟ್ ಆಟಗಾರ್ತಿ ಗೊಂಗಡಿ ತ್ರಿಶಾಗೆ ತೆಲಂಗಾಣ ಬಂಪರ್ ಬಹುಮಾನದ ಘೋಷಣೆ ಮಾಡಲಾಗಿದೆ. ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಬುಧವಾರ 1 ಕೋಟಿ ರೂ. ನಗದು ಬಹುಮಾನ ಘೋಷಿಸಿದ್ದಾರೆ.
ತೆಲಂಗಾಣದ ಭದ್ರಾಚಲಂ ಮೂಲದ ತ್ರಿಶಾ ಅವರು ಮುಖ್ಯಮಂತ್ರಿಯನ್ನು ಹೈದರಾಬಾದ್‌ನಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದರು. ತ್ರಿಷಾ ಅವರ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ರೆಡ್ಡಿ, ಭವಿಷ್ಯದಲ್ಲಿ ಅವರು ದೇಶಕ್ಕಾಗಿ ಉತ್ತಮ ಫಾರ್ಮ್ ಮುಂದುವರಿಸಲಿ ಎಂದು ಹಾರೈಸಿದರು.
ತೆಲಂಗಾಣದ 19 ವರ್ಷದೊಳಗಿನವರ ವಿಶ್ವಕಪ್ ತಂಡದ ಸದಸ್ಯೆ ಧೃತಿ ಕೇಸರಿ, ಅಂಡರ್ 19 ವಿಶ್ವಕಪ್ ತಂಡದ ಮುಖ್ಯ ಕೋಚ್ ನೌಶೀನ್ ಮತ್ತು ತರಬೇತುದಾರರಾದ ಶಾಲಿನಿ ಅವರಿಗೆ ತಲಾ 10 ಲಕ್ಷ ರೂಪಾಯಿ ನಗದು ಬಹುಮಾನವನ್ನು ಸಿಎಂ ಘೋಷಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ತ್ರಿಶಾ 19 ವರ್ಷದೊಳಗಿನ ಮಹಿಳೆಯರ ವಿಶ್ವಕಪ್‌ನಲ್ಲಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಗೆದ್ದುಕೊಂಡಿದ್ದರು.
Advertisement