Champions Trophy: ನಿರ್ಣಾಯಕ ಸಮಯದಲ್ಲಿ ತಂಡಕ್ಕೆ ಆಸರೆಯಾಗಬಲ್ಲ ಸಂಭಾವ್ಯ ಐವರು ಕ್ರಿಕೆಟಿಗರು!

ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19ರಿಂದ ಪಾಕಿಸ್ತಾನ ಮತ್ತು ದುಬೈನಲ್ಲಿ ಆರಂಭಗೊಳ್ಳಲಿದೆ. 50 ಓವರ್‌ಗಳ ಪಂದ್ಯಾವಳಿಯಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಲು ಬಯಸುವ ಐವರು ಯುವ ಪ್ರತಿಭೆಗಳ ಪಟ್ಟಿ ಇಲ್ಲಿದೆ.
Varun Chakravarthy
ವರುಣ್ ಚಕ್ರವರ್ತಿAFP
Updated on

ದುಬೈ: ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19ರಿಂದ ಪಾಕಿಸ್ತಾನ ಮತ್ತು ದುಬೈನಲ್ಲಿ ಆರಂಭಗೊಳ್ಳಲಿದೆ. 50 ಓವರ್‌ಗಳ ಪಂದ್ಯಾವಳಿಯಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಲು ಬಯಸುವ ಐವರು ಯುವ ಪ್ರತಿಭೆಗಳ ಪಟ್ಟಿ ಇಲ್ಲಿದೆ.

ವರುಣ್ ಚಕ್ರವರ್ತಿ (ಭಾರತ)

ಚಾಂಪಿಯನ್ಸ್ ಟೂರ್ನಿಗಾಗಿ ಭಾರತ ತಂಡಕ್ಕೆ ತಡವಾಗಿ ಸೇರಿಕೊಂಡಿರುವ ಮಣಿಕಟ್ಟಿನ ಸ್ಪಿನ್ನರ್ ವರುಣ್ ಚಕ್ರವರ್ತಿ ದುಬೈನಲ್ಲಿ ನಿರೀಕ್ಷಿತ ನಿಧಾನಗತಿಯ ಪಿಚ್‌ಗಳಲ್ಲಿ ತಮ್ಮ ಬೌಲಿಂಗ್ ಪ್ರದರ್ಶನ ತೋರುವ ಸಾಧ್ಯತೆ ಇದೆ. 33 ವರ್ಷದ ವರುಣ್ ಚಕ್ರವರ್ತಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 14 ವಿಕೆಟ್ ಗಳನ್ನು ಪಡೆದಿದ್ದು ಭಾರತ ಇಂಗ್ಲೆಂಡ್ ವಿರುದ್ಧ ಭಾರತದ 4-1 ಸರಣಿ ಕೈವಶ ಮಾಡಿಕೊಂಡಿದ್ದು ನಂತರ ಈ ತಿಂಗಳ ಇಂಗ್ಲೆಂಡ್ ಸರಣಿಯಲ್ಲಿ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಇಂಡಿಯನ್ ಪ್ರೀಮಿಯರ್ ಲೀಗ್ 20 ಓವರ್‌ಗಳ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಕಳೆದ ವರ್ಷ ಕೋಲ್ಕತ್ತಾ ನೈಟ್ ರೈಡರ್ಸ್ ಪ್ರಶಸ್ತಿ ಗೆಲುವಿನಲ್ಲಿ 21 ವಿಕೆಟ್‌ಗಳೊಂದಿಗೆ ಪ್ರಮುಖ ಪಾತ್ರ ವಹಿಸಿದ್ದರು. ಚಕ್ರವರ್ತಿ ಭಾರತೀಯ ಸ್ಪಿನ್ ದಾಳಿಯ ಭಾಗವಾಗಿದ್ದು ತಂಡಕ್ಕೆ ಆಸರೆಯಾಗಬಲ್ಲರು ಎಂದು ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ.

ತಯ್ಯಬ್ ತಾಹಿರ್ (ಪಾಕಿಸ್ತಾನ)

2023ರ ಏಷ್ಯಾ ಕಪ್‌ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ತಯ್ಯಬ್ ತಾಹಿರ್ ಪಾಕಿಸ್ತಾನದ ಪರ ಅದ್ಭುತ ಆಟ ಪ್ರದರ್ಶಿಸಿದ್ದರು. 31 ವರ್ಷದ ತಹೀರ್, ಕಳೆದ ವರ್ಷ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡುವ ಮೊದಲು ದೇಶೀಯ ಕ್ರಿಕೆಟ್ ನಲ್ಲಿ ಉತ್ತಮ ರನ್ ಗಳಿಸಿದ್ದರು. ನಂತರ ಪಾಕಿಸ್ತಾನ ಪರ ಕೆಲವು ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ನಿಗದಿತ ಓವರ್ ಗಳ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅವರು ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಟಿ20 ಪಂದ್ಯದಲ್ಲಿ ಅಜೇಯ 39 ರನ್ ಅತ್ಯಧಿಕ ಸ್ಕೋರ್ ಆಗಿದೆ. ಆದರೆ ತಯ್ಯಬ್ ವಿಶ್ಲೇಷಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ವೇಗದ ಬೌಲಿಂಗ್ ದಿಗ್ಗಜ ವಾಸಿಮ್ ಅಕ್ರಮ್ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಅವರ ಸ್ಫೋಟಕ ಬ್ಯಾಟಿಂಗ್ ನಂತರ ಅವರನ್ನು ಬಹಳ ರೋಮಾಂಚಕಾರಿ ಪ್ರತಿಭೆ ಎಂದು ಕರೆದಿದ್ದರು.

ಟಾಮ್ ಬ್ಯಾಂಟನ್ (ಇಂಗ್ಲೆಂಡ್)

ಸೋಮರ್‌ಸೆಟ್ ಬ್ಯಾಟ್ಸ್‌ಮನ್ ಟಾಮ್ ಬ್ಯಾಂಟನ್ ಈ ತಿಂಗಳ ಸರಣಿಯ ಕೊನೆಯ ಏಕದಿನ ಪಂದ್ಯಕ್ಕಾಗಿ ಭಾರತದಲ್ಲಿ ಇಂಗ್ಲೆಂಡ್ ಅನ್ನು ಸೇರಿಕೊಂಡಿದ್ದರು. ಈ ಪಂದ್ಯದಲ್ಲಿ ಇಂಗ್ಲೆಂಡ್ ಸೋತರು ಟಾಮ್ 38 ರನ್‌ಗಳ ಇನ್ನಿಂಗ್ಸ್‌ ಆಡಿದ್ದರು. ಅಹಮದಾಬಾದ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ್ದ 26 ವರ್ಷದ ಬ್ಯಾಂಟನ್, ಗಾಯಗೊಂಡ ಜಾಕೋಬ್ ಬೆಥೆಲ್ ಬದಲಿಗೆ ತಂಡವನ್ನು ಸೇರಿದ್ದು ಇದೀಗ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗಿದ್ದಾರೆ. ಆಗಸ್ಟ್ 2020ರ ನಂತರ ಮೊದಲ ಬಾರಿಗೆ ಏಕದಿನ ಪಂದ್ಯ ಆಡಿದ ಬ್ಯಾಂಟನ್, ಭಾರತೀಯ ಸ್ಪಿನ್ನರ್‌ಗಳನ್ನು ಎದುರಿಸಿ ವಾಷಿಂಗ್ಟನ್ ಸುಂದರ್ ಬೌಲಿಂಗ್‌ನಲ್ಲಿ ಅದ್ಭುತ ಸ್ವಿಚ್ ಹಿಟ್ ಮೂಲಕ ಸಿಕ್ಸರ್ ಗಳಿಸಿದರು. ಟಿ20 ಫ್ರಾಂಚೈಸ್ ಕ್ರಿಕೆಟ್‌ನಲ್ಲಿ ಬ್ಯಾಂಟನ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ ಪ್ರೀಮಿಯರ್ ಸ್ಪರ್ಧೆಯಲ್ಲಿ ಪ್ರಮುಖ ಬ್ಯಾಟ್ಸ್‌ಮನ್ ಆಗಿದ್ದಾರೆ. 11 ಇನ್ನಿಂಗ್ಸ್‌ಗಳಿಂದ ಎರಡು ಶತಕಗಳು ಸೇರಿದಂತೆ ಒಟ್ಟು 493 ರನ್ ಗಳಿಸಿದ್ದಾರೆ.

Varun Chakravarthy
IPL 2025: ಮುಂಬೈ ಇಂಡಿಯನ್ಸ್ ಗೆ ಆಘಾತ, Hardik Pandyaಗೆ ನಿಷೇಧ.. ಕಾರಣ ಏನು? ಏನಿದು ನಿಯಮ?

ಆರನ್ ಹಾರ್ಡಿ (ಆಸ್ಟ್ರೇಲಿಯಾ)

ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಮಾರ್ಕಸ್ ಸ್ಟೊಯಿನಿಸ್ ಅವರ ಹಠಾತ್ ನಿವೃತ್ತಿಯ ನಂತರ ಸೀಮ್-ಬೌಲಿಂಗ್ ಆಲ್‌ರೌಂಡರ್ 26 ವರ್ಷದ ಆರನ್ ಹಾರ್ಡಿಗೆ ಅವಕಾಶ ಸಿಕ್ಕಿತ್ತು. ಬಲಗೈ ವೇಗಿ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್ ಹಾರ್ಡಿ, ಶ್ರೀಲಂಕಾವನ್ನು ವಿರುದ್ಧ 32 ರನ್ ಗಳಿಸಿದ್ದರು. ಆದರೆ ಆಸ್ಟ್ರೇಲಿಯಾ ಕೊಲಂಬೊದಲ್ಲಿ ಪಂದ್ಯ ಸೋತಿತ್ತು. 2018ರಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ XI ಪರ ಪ್ರವಾಸ ಪಂದ್ಯದಲ್ಲಿ ಭಾರತದ ಅಗ್ರ ಗನ್ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿ ಬ್ಯಾಟಿಂಗ್ ನಲ್ಲಿ 86 ರನ್ ಗಳಿಸುವ ಮೂಲಕ ಗಮನ ಸೆಳೆದರು. ಹಾರ್ಡಿ 2023ರಲ್ಲಿ ಆಸ್ಟ್ರೇಲಿಯಾ ಪರ ವೈಟ್-ಬಾಲ್ ನಲ್ಲಿ ಪಾದಾರ್ಪಣೆ ಮಾಡಿದ್ದರು. ಆದರೆ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಪ್ರದರ್ಶನಕ್ಕಾಗಿ ಇನ್ನೂ ಕಾಯುತ್ತಿದ್ದಾರೆ.

ವಿಲ್ ಒ'ರೂರ್ಕ್ (ನ್ಯೂಜಿಲೆಂಡ್)

ಆರಡಿ ಕಟೌಟ್ ಈ ವೇಗದ ಬೌಲರ್ ತಮ್ಮ ಒಂಬತ್ತು ODI ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಇದೀಗ ಮೊದಲ ICC ಟೂರ್ನಮೆಂಟ್ ನಲ್ಲಿ ಆಡಲಿದ್ದಾರೆ. 23 ವರ್ಷದ ಒ'ರೂರ್ಕ್ 2023ರಲ್ಲಿ ODI ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಆದರೆ ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಒಂಬತ್ತು ವಿಕೆಟ್ ಕಬಳಿಸಿದ ನಂತರ ಗಮನ ಸೆಳೆದರು. ಇತ್ತೀಚೆಗೆ ಕರಾಚಿಯಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧದ ಗೆಲುವಿನಲ್ಲಿ ನ್ಯೂಜಿಲ್ಯಾಂಡ ಪರ 4 ವಿಕೆಟ್ ಹಾಗೂ 43 ರನ್ ಗಳಿಸುವ ಮೂಲಕ ಪ್ರಮುಖ ಪಾತ್ರ ವಹಿಸಿದರು. ವೇಗಿ ಬೆನ್ ಸಿಯರ್ಸ್ ಹೊರಗುಳಿದಿದ್ದು ಮತ್ತು ಲಾಕಿ ಫರ್ಗುಸನ್ ಸ್ನಾಯು ಸೆಳೆತದಿಂದ ಚೇತರಿಸಿಕೊಳ್ಳುತ್ತಿರುವುದರಿಂದ, ನ್ಯೂಜಿಲೆಂಡ್ ಓ'ರೂರ್ಕ್ ಮತ್ತು ಹಿರಿಯ ವೇಗಿ ಮ್ಯಾಟ್ ಹೆನ್ರಿ ಅವರನ್ನು ಅವಲಂಬಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com