
ಮುಂಬೈ: ಮುಂಬೈ ರಣಜಿ ಕ್ರಿಕೆಟ್ ತಂಡದ ಮಾಜಿ ನಾಯಕ ಮಿಲಿಂದ್ ರೇಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇತ್ತೀಚಿಗೆಷ್ಟೇ ತಮ್ಮ 76 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಬುಧವಾರ ನಿಧನರಾಗಿರುವುದಾಗಿ BCCI ಅಧಿಕೃತ ಮಾಹಿತಿ ನೀಡಿದೆ. 1966-67 ಮತ್ತು 1977-78 ರ ನಡುವೆ 52 ಪ್ರಥಮ ದರ್ಜೆ ಪಂದ್ಯಗಳಲ್ಲಿ ತನ್ನ ಆಫ್-ಸ್ಪಿನ್‌ನೊಂದಿಗೆ 126 ವಿಕೆಟ್‌ಗಳನ್ನು ಗಳಿಸಿದ ರೇಗೆ, 23.56ರ ಸರಾಸರಿಯಲ್ಲಿ 1,532 ರನ್ ಗಳಿಸಿದ್ದರು.
ನಿವೃತ್ತಿಯ ನಂತರ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (MCA)ನಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡಿದ್ದ ಅವರು, ಆಯ್ಕೆಗಾರರಾಗಿ ಮತ್ತು ಮುಖ್ಯ ಆಯ್ಕೆಗಾರರಾಗಿ ಸೇರಿದಂತೆ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು.
BCCI ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಿಲಿಂದ್ ರೇಗೆ ಸಂತಾಪ ವ್ಯಕ್ತಪಡಿಸಿದೆ. ಸಚಿನ್ ತೆಂಡೂಲ್ಕರ್‌ನಿಂದ ಹಿಡಿದು ಯಶಸ್ವಿ ಜೈಸ್ವಾಲ್‌ವರೆಗೆ, ತಮ್ಮ ಪ್ರತಿಭೆಯನ್ನು ಗುರುತಿಸಿ ಅವರನ್ನು ಉನ್ನತ ಮಟ್ಟದಲ್ಲಿ ಉತ್ತೇಜಿಸಿದ ಮೊದಲ ಮಾಜಿ ಕ್ರಿಕೆಟಿಗರಲ್ಲಿ ಅವರು ಒಬ್ಬರು. ಕಳೆದ ನಾಲ್ಕು ವರ್ಷಗಳಿಂದ, ಅವರನ್ನು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಸಲಹೆಗಾರರಾಗಿ ನೇಮಿಸಿತ್ತು.
ರೇಗೆ ಸುನಿಲ್ ಗವಾಸ್ಕರ್ ಅವರೊಂದಿಗೆ ದೀರ್ಘಕಾಲದ ಗೆಳೆತನ ಹೊಂದಿದ್ದರು. ಇಬ್ಬರೂ ಒಂದೇ ಶಾಲೆ ಮತ್ತು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು.ದಾದರ್ ಯೂನಿಯನ್ ಸ್ಪೋರ್ಟಿಂಗ್ ಕ್ಲಬ್‌ನಲ್ಲಿ ಒಟ್ಟಿಗೆ ಆಡಿದ್ದರು. ರೇಗೆ ಅವರ ಪತ್ನಿ ರಾಜ್, ಪುತ್ರರಾದ ಸಿದ್ಧಾರ್ಥ್ ಮತ್ತು ಆದಿತ್ಯ ಮತ್ತು ಅವರ ಕುಟುಂಬ ಸದಸ್ಯರು ಅಗಲಿದ್ದಾರೆ. ಗುರುವಾರ ಮುಂಬೈನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
Advertisement