
ಲಾಹೋರ್: ಪಾಕಿಸ್ತಾನದಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಆಟಗಾರರು ಸದಾಕಾಲಾ ಪ್ರಾಣಭೀತಿಯಲ್ಲೇ ಸಮಯ ಕಳೆಯುತ್ತಿದ್ದು, ಇದಕ್ಕೆ ನಿನ್ನೆ ನಡೆದ ಟೂರ್ನಿ ಉದ್ಗಾಟನಾ ಪಂದ್ಯ ಸಾಕ್ಷಿಯಾಯಿತು.
ಹೌದು.. ಪಾಕಿಸ್ತಾನದಲ್ಲಿ ಆಯೋಜನೆಯಾಗಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಜಾಗತಿಕವಾಗಿ ಕ್ರಿಕೆಟ್ ಆಡುವ ವಿವಿಧ ದೇಶಗಳು ಒಲ್ಲದ ಮನಸ್ಸಿನಿಂದಲೇ ಒಪ್ಪಿಗೆ ನೀಡಿ ಆ ದೇಶಕ್ಕೆ ಪ್ರಯಾಣ ಬೆಳೆಸಿವೆ. ಪಾಕಿಸ್ತಾನ ಸರ್ಕಾರ ಸ್ವತಃ ಈ ಐಸಿಸಿ ಟೂರ್ನಿಯನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ಭದ್ರತೆ ನೀಡುತ್ತಿದೆ. ಆದಾಗ್ಯೂ ಆಟಗಾರರ ಮನಸ್ಸಿನಲ್ಲಿ ಪ್ರಾಣಭೀತಿ ಕಾಡುತ್ತಿದೆ.
ಇನ್ನು ಈ ಟೂರ್ನಿ ಪಾಕಿಸ್ತಾನದಲ್ಲಿ ಆಯೋಜನೆಯಾಗುತ್ತಿದೆ ಎನ್ನುವ ಸುದ್ದಿ ಬೆನ್ನಲ್ಲೇ ಜಾಗತಿಕ ಸ್ಟಾರ್ ಆಟಗಾರರು ಒಂದಿಲ್ಲೊಂದು ಕಾರಣ ನೀಡಿ ಟೂರ್ನಿ ತಪ್ಪಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್, ಜಾಶ್ ಹೇಡಲ್ ವುಡ್, ಮಿಚೆಲ್ ಮಾರ್ಶ್, ವೇಗಿ ಮೆಚೆಲ್ ಸ್ಟಾರ್ಕ್, ನೂಜಿಲೆಂಡ್ ಸ್ಟಾರ್ ಆಟಗಾರ ಲಾಕಿ ಫರ್ಗೂಸನ್, ದಕ್ಷಿಣ ಆಫ್ರಿಕಾದ ಎನ್ರಿಚ್ ನಾರ್ಚ್ಜೆ, ಗೆರಾಲ್ಟ್ ಕೊಯಿಟ್ಜಿ, ಇಂಗ್ಲೆಂಡ್ ನ ಜೇಕಬ್ ಬೆಥೆಲ್ ಸೇರಿದಂತೆ ಹಲವು ಆಟಗಾರರು ವಿವಿಧ ಕಾರಣಗಳಿಂದಾಗಿ ಟೂರ್ನಿ ಮಿಸ್ ಮಾಡಿಕೊಂಡಿದ್ದಾರೆ.
ಇನ್ನು ಟೂರ್ನಿಯಲ್ಲಿ ಪಾಲ್ಗೊಂಡಿರುವ ಆಟಗಾರರು ಸದಾಕಾಲ ಪ್ರಾಣಭೀತಿಯಲ್ಲಿ ಸಮಯ ಕಳೆಯುತ್ತಿದ್ದು, ಯಾವಾಗ ಯಾವ ಕಡೆ ಏನಾಗುತ್ತದೋ ಎಂಬ ಭೀತಿಯಲ್ಲಿರುವಂತಾಗಿದೆ. ಇದಕ್ಕೆ ಇಂಬು ನೀಡುವಂತೆ ಅತಿಥೇಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ಆಟಗಾರರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದು, ನ್ಯೂಜಿಲೆಂಡ್ ಆಟಗಾರರು ಮಾತ್ರವಲ್ಲ.. ಸ್ವತಃ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳೂ ಕೂಡ ಬೆಚ್ಚಿಬಿದ್ದಿದ್ದಾರೆ.
ಆಗಿದ್ದೇನು?
ಕರಾಚಿಯ ನ್ಯಾಷನಲ್ ಕ್ರೀಡಾಂಗಣದಲ್ಲಿ ನಿನ್ನೆ ನ್ಯೂಜಿಲೆಂಡ್-ಪಾಕಿಸ್ತಾನ ನಡುವೆ ಮೊದಲ ಪಂದ್ಯ ನಡೆಯಿತು. ಈ ಪಂದ್ಯದ ಆರಂಭದ ವೇಳೆ ಪಾಕಿಸ್ತಾನ ವಾಯು ಸೇನೆಯ ಜೆಟ್ ಫೈಟರ್ ಗಳು ಆಗಸದಲ್ಲಿ ತಮ್ಮ ದೇಶದ ಧ್ವಜ ವರ್ಣವನ್ನು ಬಿಡಿಸಿತು. ಫೈಟರ್ ಜೆಟ್ ಗಳು ಮೈದಾನಕ್ಕೆ ಆಗಮಿಸುತ್ತಲೇ ದೊಡ್ಡ ಶಬ್ದ ಕೇಳಿಬಂತು. ಈ ಶಬ್ದ ಕೇಳುತ್ತಲೇ ಆಟಕ್ಕೆ ಸಿದ್ದರಾಗುತ್ತಿದ್ದ ನ್ಯೂಜಿಲೆಂಡ್ ಆಟಗಾರರು ಮತ್ತು ಪೆವಿಲಿಯನ್ ನಲ್ಲಿ ಕುಳಿತಿದ್ದ ಪ್ರೇಕ್ಷಕರು ಇಬ್ಬರೂ ಬೆಚ್ಚಿ ಬಿದ್ದರು. ಈ ಕುರಿತ ವಿಡಿಯೋ ಇದೀಗ ಸಾಮಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
Advertisement