
ದುಬೈ: ದಾಖಲೆಗಳ ಸರದಾರ ವಿರಾಟ್ ಕೊಹ್ಲಿಯ ಮುಕುಟಕ್ಕೆ ಮತ್ತೊಂದು ಗರಿ ಮೂಡಿದೆ. ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 2025 ಚಾಂಪಿಯನ್ಸ್ ಟ್ರೋಫಿಯ 'ಎ'' ಗುಂಪಿನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 158 ಕ್ಯಾಚ್‌ಗಳನ್ನು ಪಡೆಯುವ ಮೂಲಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ಅತಿ ಹೆಚ್ಚು ಕ್ಯಾಚ್ ಪಡೆದ ಫೀಲ್ಡರ್ ಎನಿಸಿಕೊಂಡರು.
ಈ ಮೂಲಕ ಮೊಹಮ್ಮದ್ ಅಜರುದ್ದೀನ್ ಅವರ ದಾಖಲೆಯನ್ನು ಹಿಂದಿಕ್ಕಿದರು. 47ನೇ ಓವರ್‌ನಲ್ಲಿ ಕುಲದೀಪ್ ಯಾದವ್ ಅವರ ಬೌಲಿಂಗ್ ನಲ್ಲಿ ನಸೀಮ್ ಶಾ ಅವರ ಕ್ಯಾಚ್ ಪಡೆಯುವ ಮೂಲಕ ಕೊಹ್ಲಿ ಈ ದಾಖಲೆ ಮಾಡಿದರು.
ಅಂತಿಮ ಓವರ್‌ನಲ್ಲಿ ಖುಶ್ದಿಲ್ ಷಾ ಅವರ ಕ್ಯಾಚ್ ಪಡೆದು ಕ್ಯಾಚ್ ಗಳ ಸಂಖ್ಯೆಯನ್ನು ಹಿಗ್ಗಿಸಿಕೊಂಡರು.
ಮೊಹಮ್ಮದ್ ಅಜರುದ್ದೀನ್ (156) ಸಚಿನ್ ತೆಂಡೂಲ್ಕರ್ (140), ರಾಹುಲ್ ದ್ರಾವಿಡ್ (124) ಮತ್ತು ಸುರೇಶ್ ರೈನಾ (102) ಕ್ಯಾಚ್ ಪಡೆದಿರುವ ಭಾರತದ ಇತರ ಆಟಗಾರರು. ಅಲ್ಲದೇ ಏಕದಿನ ಕ್ರಿಕೆಟ್ ನಲ್ಲಿ 14,000 ರನ್ ಮೈಲುಗಲ್ಲು ತಲುಪಿದ ಮೂರನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು.
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಇಂದಿನ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ 241 ರನ್ ಗಳಿಸಿ ಭಾರತಕ್ಕೆ ಗೆಲ್ಲಲು 242 ರನ್ ಗಳ ಗುರಿ ನೀಡಿದೆ.
Advertisement