
ನವದೆಹಲಿ: ಕಳೆದ 14 ತಿಂಗಳಿಂದ ಫಾರ್ಮ್ ಇಲ್ಲದೆ ಟೀಕೆಗಳಿಗೆ ಗುರಿಯಾಗಿದ್ದ ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧದ ಅಜೇಯ ಶತಕ ಸಿಡಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ಒಂದು ತಲೆಮಾರಿನ ಆಟಗಾರರಾಗಿರುವ ಕೊಹ್ಲಿ, ಇನ್ನೂ ಎರಡರಿಂದ ಮೂರು ವರ್ಷಗಳವರೆಗೆ ಕ್ರಿಕೆಟ್ ಆಡಲಿದ್ದಾರೆ ಎಂದು ಮಾಜಿ ಕ್ರಿಕೆಟ್ ಆಟಗಾರ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.
ಕೊಹ್ಲಿ ಮತ್ತೆ ಫಾರ್ಮ್ ಗೆ ಮರಳುವ ಮೂಲಕ 51 ನೇ ಏಕದಿನ ಶತಕವನ್ನು ಸಿಡಿಸುವ ಮೂಲಕ ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆರು ವಿಕೆಟ್‌ಗಳ ಗೆಲುವು ಸಾಧಿಸುವಲ್ಲಿ ನೆರವಾದರು.ಅಲ್ಲದೇ ಪಾಕಿಸ್ತಾನದ ಸೆಮಿಫೈನಲ್ ಕನಸನ್ನು ಮುಚ್ಚಿದ್ದಾರೆ.
ಈ ಶತಕದ ನಂತರ ಕೊಹ್ಲಿ ಮುಂದಿನ 2 ಅಥವಾ 3 ವರ್ಷಗಳವರೆಗೆ ಆಡಲಿದ್ದು, ಇನ್ನೂ 10 ಅಥವಾ 15 ಶತಕ ಗಳಿಸುತ್ತಾರೆ ಎಂದು ನಾನು ದೃಢವಾಗಿ ಹೇಳಬಲ್ಲೆ ಎಂದು ಸಿಧು JioHotstar ನಲ್ಲಿ ಹೇಳಿದರು.
2020 ರಿಂದ ಕೊಹ್ಲಿಯ ಟೆಸ್ಟ್ ಪ್ರದರ್ಶನಗಳು ಗಣನೀಯವಾಗಿ ಕುಸಿದಿವೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿ ಸೋಲಿನ ನಂತರ ರೆಡ್ ಬಾಲ್ ತಂಡದಲ್ಲಿ ಅವರ ಆಯ್ಕೆಯನ್ನು ಪ್ರಶ್ನಿಸಲಾಗುತಿತ್ತು. ಕಳೆದ ಆರು ತಿಂಗಳುಗಳಿಂದ ಅವರು ವೈಫಲ್ಯ ಎದುರಿಸುತ್ತಿದ್ದರು.
ಆದರೆ, ಪಾಕಿಸ್ತಾನದ ವಿರುದ್ಧ ರನ್ ಗಳಿಸಿದ್ದನ್ನು ಜನ 10 ವರ್ಷಗಳವರೆಗೆ ಮರೆಯಲ್ಲ. ಅವರ ಇನ್ನಿಂಗ್ಸ್ ನ ಆರಂಭಿಕ ಭಾಗ, ಡ್ರೈವ್ ಗಳನ್ನು ನೋಡಿದರೆ ಇದು ಇದು ಹಳೆಯ ವಿರಾಟ್ ಕೊಹ್ಲಿ ಅನಿಸುತ್ತದೆ. ಇವರು ಇಂದಿನ ಮಕ್ಕಳಿಗೆ ಸ್ಫೂರ್ತಿದಾಯಕರು. ವಿರಾಟ್ ಕೊಹ್ಲಿ ಒಂದು ತಲೆಮಾರಿನ ಕ್ರಿಕೆಟಿಗ, 'ಕೊಹಿನೂರ್'ಎಂದು ಸಿಧು ಶ್ಲಾಘಿಸಿದರು.
Advertisement