
ಚೆನ್ನೈ: ಮಹೇಂದ್ರ ಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ (IPL)ತಮ್ಮ ಭವಿಷ್ಯದ ಬಗ್ಗೆ ಊಹಾಪೋಹಗಳಿಗೆ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದ್ದಾರೆ.
ಮೆಗಾ ಟೂರ್ನಿಯಲ್ಲಿ ಭಾಗವಹಿಸಲು ಬುಧವಾರ ಚೆನ್ನೈಗೆ ಆಗಮಿಸಿದ ಧೋನಿ, ‘ONE LAST TIME’ ಎಂದು ಬರೆದಿರುವ (Morse Code) ಟಿ-ಶರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರ ನಿವೃತ್ತಿಯ ಸೂಚಕವೇ ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.
ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿರುವ ಧೋನಿಗೆ ಈ ಬಾರಿಯ IPLಕೊನೆಯ ಟೂರ್ನಿ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆಯೇ ಎಂದು ಕ್ರಿಕೆಟ್ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.
43 ವರ್ಷದ ಲೆಜೆಂಡರಿ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಆಗಿರುವ ಧೋನಿ, ಐಪಿಎಲ್ ಆರಂಭವಾದಾಗಿನಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ನ ಬೆನ್ನೆಲುಬು ಆಗಿದ್ದಾರೆ. ಅವರ ನೇತೃತ್ವದ ತಂಡ ಅನೇಕ ಬಾರಿ ಚಾಂಪಿಯನ್ ಆಗಿದ್ದು, ಅಪಾರ ಪ್ರಮಾಣದ ಅಭಿಮಾನಿಗಳನ್ನು ಗಳಿಸಿದೆ.
ಕಳೆದ ಬಾರಿ CSK ನಾಯಕನ ಸ್ಥಾನದಿಂದ ಕೆಳಗಿಳಿದಿದ್ದ ಧೋನಿ, ರುತುರಾಜ್ ಗಾಯಕ್ವಾಡ್ ಅವರಿಗೆ ನಾಯಕತ್ವ ವಹಿಸಿದ್ದರು.
ಬದಲಾವಣೆ ಹೊರತಾಗಿಯೂ CSK ಸವಾಲುಗಳನ್ನು ಎದುರಿಸಿ ಐದನೇ ಸ್ಥಾನ ತಲುಪುವುದರೊಂದಿಗೆ ಪ್ಲೇಆಫ್ ಕಳೆದುಕೊಂಡಿತ್ತು. ಧೋನಿ ಅಧಿಕೃತವಾಗಿ ನಿವೃತ್ತಿ ಹೇಳದಿದ್ದರೂ, ಅವರು ಧರಿಸಿದ್ದ ಟಿ- ಶರ್ಟ್ ವಿದಾಯದ ಸುಳಿವು ನೀಡಿದೆ.
IPL2025 ಸಮೀಪಿಸುತ್ತಿದ್ದಂತೆಯೇ ಇದು ಧೋನಿಗೆ ಅಂತಿಮ ಟೂರ್ನಿಯಾಗಲಿದೆಯೇ ಎಂದು ಅಭಿಮಾನಿಗಳು ಮತ್ತು ವಿಶ್ಲೇಷಕರು ಬಹಳ ಕುತೂಹಲದಿಂದ ನೋಡುತ್ತಿದ್ದಾರೆ.
Advertisement