IPL 2025: ಐಪಿಎಲ್ ಆರಂಭಕ್ಕೂ ಮುನ್ನ ಮಹತ್ವದ ನಿರ್ಧಾರ; ಕಡಿಮೆ ತೂಕದ ಬ್ಯಾಟ್ ಬಳಸಲಿದ್ದಾರೆ ಧೋನಿ?

ಧೋನಿ ಅಂಡರ್ 19 ಕ್ರಿಕೆಟ್ ಆಡುವಾಗ ಸುಮಾರು 1200 ಗ್ರಾಂ ತೂಕದ ಬ್ಯಾಟ್‌ಗಳನ್ನು ಬಳಸುತ್ತಿದ್ದರು. ಅವರ ಸಹ ಆಟಗಾರರು ಹಗುರವಾದ ಬ್ಯಾಟ್‌ಗಳನ್ನು ಬಳಸುತ್ತಿದ್ದರು.
ಎಂಎಸ್ ಧೋನಿ
ಎಂಎಸ್ ಧೋನಿ
Updated on

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ನಲ್ಲಿ ಆಡಲು ಟೀಂ ಇಂಡಿಯಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮಾಜಿ ನಾಯಕ ಎಂಎಸ್ ಧೋನಿ ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ. ಐಪಿಎಲ್ ಆರಂಭಕ್ಕೂ ಮುನ್ನ ಧೋನಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ತಮ್ಮ ಬ್ಯಾಟ್ ಭಾರವನ್ನು ಇಳಿಸಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಧೋನಿ ಅಂಡರ್ 19 ಕ್ರಿಕೆಟ್ ಆಡುವಾಗ ಸುಮಾರು 1200 ಗ್ರಾಂ ತೂಕದ ಬ್ಯಾಟ್‌ಗಳನ್ನು ಬಳಸುತ್ತಿದ್ದರು. ಅವರ ಸಹ ಆಟಗಾರರು ಹಗುರವಾದ ಬ್ಯಾಟ್‌ಗಳನ್ನು ಬಳಸುತ್ತಿದ್ದರು. ಅವರ ವೃತ್ತಿಜೀವನ ಏರುತ್ತಾ ಸಾಗಿದಂತೆ ಅವರ ಬ್ಯಾಟ್ ತೂಕವೂ ಹೆಚ್ಚಾಗುತ್ತಲೇ ಸಾಗಿತ್ತು. ಆದರೆ, ತಮ್ಮ 43 ನೇ ವಯಸ್ಸಿನಲ್ಲಿ ಧೋನಿ ಅವರು ತಮ್ಮ ಬ್ಯಾಟ್ ತೂಕವನ್ನು ಸುಮಾರು 10-20 ಗ್ರಾಂಗಳಷ್ಟು ಕಡಿಮೆ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಮೀರತ್‌ನ ಕ್ರಿಕೆಟ್ ಉಪಕರಣಗಳ ಕಂಪನಿಯಾದ Sanspareils Greenlands Pvt. Ltd ಇತ್ತೀಚೆಗೆ ಧೋನಿಗೆ ನಾಲ್ಕು ಬ್ಯಾಟ್‌ಗಳನ್ನು ನೀಡಿದೆ. ಪ್ರತಿ ಬ್ಯಾಟ್‌ಗಳು 1230 ಗ್ರಾಂ ತೂಕ ಹೊಂದಿವೆ ಎಂದು ಮೂಲಗಳು ತಿಳಿಸಿವೆ. ಭಾರತದ ಮಾಜಿ ಆಲ್‌ರೌಂಡರ್ ಮತ್ತು ಧೋನಿ ಅವರ ಸಿಎಸ್‌ಕೆ ತಂಡದ ಸಹ ಆಟಗಾರ ಸುರೇಶ್ ರೈನಾ ಕೂಡ ಭಾನುವಾರ ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಇದನ್ನು ಖಚಿತಪಡಿಸಿದ್ದಾರೆ.

ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸಿಎಸ್‌ಕೆ ತಂಡದ ಅಭ್ಯಾಸವು ಮಾರ್ಚ್ 10ರ ಬಳಿಕ ಆರಂಭವಾಗಲಿದೆ. ಮಾರ್ಚ್‌ 9ಕ್ಕೆ ಮುನ್ನ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣವನ್ನು ಅಭ್ಯಾಸಕ್ಕೆ ಬಳಸಲು ಅನುಮತಿ ಇಲ್ಲ ಎಂದು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಸೂಚಿಸಿದೆ ಎಂದು ಸಿಎಸ್‌ಕೆ ಆಡಳಿತ ಮಂಡಳಿಯ ಮೂಲವೊಂದು ತಿಳಿಸಿದೆ.

ಎಂಎಸ್ ಧೋನಿ
IPL 2025: ಐಪಿಎಲ್ ಆರಂಭಕ್ಕೂ ಮುನ್ನ ಎಂಎಸ್ ಧೋನಿ ಮಹತ್ವದ ಹೇಳಿಕೆ!

ಈ ಮಧ್ಯೆ, ಧೋನಿ ಚೆನ್ನೈಗೆ ಆಗಮಿಸಿದ್ದು, ಅವರ ತರಬೇತಿಯ ವೇಳಾಪಟ್ಟಿಯನ್ನು ಇನ್ನೂ ಅಂತಿಮಗೊಳಿಸಿಲ್ಲ. ಕ್ರೀಡಾಂಗಣವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ಬಿಸಿಸಿಐ ಕಟ್ಟುನಿಟ್ಟಿನ ಸೂಚನೆ ನೀಡಿರುವುದರಿಂದ ಮಾರ್ಚ್ 9ರವರೆಗೂ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುವಂತಿಲ್ಲ.

ನಗರದ ಹೊರವಲಯದಲ್ಲಿರುವ ಸಿಎಸ್‌ಕೆ ಹೈ ಪರ್ಫಾರ್ಮೆನ್ಸ್ ಸೆಂಟರ್‌ನಲ್ಲಿ ಫ್ರಾಂಚೈಸಿಯ ಆಟಗಾರರು ಅಭ್ಯಾಸ ನಡೆಸುವ ಸಾಧ್ಯತೆ ಇದೆ. ಕೆಲವು ವಾರಗಳ ಹಿಂದೆ ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಶನಲ್ ಸ್ಟೇಡಿಯಂ ಕಾಂಪ್ಲೆಕ್ಸ್‌ನ ಒಳಾಂಗಣ ಸೌಲಭ್ಯದಲ್ಲಿ ಧೋನಿ ಬೌಲಿಂಗ್ ಮೆಷಿನ್‌ನೊಂದಿಗೆ ಅಭ್ಯಾಸ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿ ಪಡೆದಿರುವ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿದು ಸುಮಾರು ಆರು ವರ್ಷ ಕಳೆದಿದ್ದರೂ, ಐಪಿಎಲ್‌ನಿಂದ ಅವರು ನಿವೃತ್ತಿ ಪಡೆದಿಲ್ಲ. ಕಳೆದ ವರ್ಷ ಮೆಗಾ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಅವರನ್ನು 4 ಕೋಟಿ ರೂಪಾಯಿಗೆ ಅನ್‌ಕ್ಯಾಪ್ಡ್ ಪ್ಲೇಯರ್ ಆಗಿ ಉಳಿಸಿಕೊಂಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com