WPL 2025: RCBಗೆ ಹ್ಯಾಟ್ರಿಕ್ ಸೋಲು; ಸೆಮಿಸ್ ಪ್ರವೇಶಿಸಲು ಆರ್​ಸಿಬಿ ಮುಂದಿರುವ ಸವಾಲುಗಳೇನು?

ಡಬ್ಲ್ಯೂಪಿಎಲ್ 5 ಪಂದ್ಯಗಳ ಪೈಕಿ 2 ಪಂದ್ಯಗಳಲ್ಲಿ ಆರ್ ಸಿಬಿ ಗೆಲುವು ಸಾಧಿಸಿದ್ದು ಮೂರು ಪಂದ್ಯಗಳಲ್ಲಿ ಸೋತಿದೆ.
WPL 2025: RCBಗೆ ಹ್ಯಾಟ್ರಿಕ್ ಸೋಲು; ಸೆಮಿಸ್ ಪ್ರವೇಶಿಸಲು ಆರ್​ಸಿಬಿ ಮುಂದಿರುವ ಸವಾಲುಗಳೇನು?
Updated on

ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ (WPL) ಮೂರನೇ ಆವೃತ್ತಿಯ 12ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಗುರುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರ್‌ಸಿಬಿ 7 ವಿಕೆಟ್ ಕಳೆದುಕೊಂಡು 125 ರನ್ ಗಳಿಸಿತ್ತು. ಜಿಜಿ ತಂಡ 17 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 126 ಪೇರಿಸಿ ಗೆಲುವು ಸಾಧಿಸಿದೆ.

ಗುಜರಾತ್ ಪರ ನಾಯಕಿ ಆಶ್ಲೇ ಗಾರ್ಡ್ನರ್ 58 ಮತ್ತು ಫೋಬೆ ಲಿಚ್‌ಫೀಲ್ಡ್ 30 ರನ್ ಗಳಿಸಿದರು. ಬೌಲಿಂಗ್‌ನಲ್ಲಿ ಡಿಯಾಂಡ್ರಾ ಡಾಟಿನ್ ಮತ್ತು ತನುಜಾ ಕನ್ವರ್ ತಲಾ 2 ವಿಕೆಟ್ ಪಡೆದರು. ಆರ್‌ಸಿಬಿ ಪರ ರೇಣುಕಾ ಠಾಕೂರ್ ಮತ್ತು ಜಾರ್ಜಿಯಾ ವೇರ್‌ಹ್ಯಾಮ್ ತಲಾ 2 ವಿಕೆಟ್ ಪಡೆದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಆರಂಭ ಕೆಟ್ಟದಾಗಿತ್ತು. ತಂಡವು 25 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ನಾಯಕಿ ಸ್ಮೃತಿ ಮಂಧಾನ 10 ರನ್ ಗಳಿಸಿ ಔಟಾದರು. ಡ್ಯಾನಿ ವ್ಯಾಟ್ ಹಾಡ್ಜ್ 4 ರನ್ ಗಳಿಸಿ ಔಟಾದರು. ಆಲಿಸ್ ಪೆರ್ರಿ ಖಾತೆ ತೆರೆಯಲು ಸಹ ಸಾಧ್ಯವಾಗಲಿಲ್ಲ. ರಾಘವಿ ಬಿಶ್ತ್ 22 ಮತ್ತು ಕನಿಕಾ ಅಹುಜಾ 33 ರನ್ ಗಳಿಸಿ ತಂಡದ ಸ್ಕೋರ್ ಅನ್ನು 70ರ ಆಚೆಗೆ ಕೊಂಡೊಯ್ದರು.

ರಿಚಾ ಘೋಷ್ ಕೇವಲ 9 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಜಾರ್ಜಿಯಾ ವೇರ್‌ಹ್ಯಾಮ್ 20 ಮತ್ತು ಕಿಮ್ ಗಾರ್ತ್ 14 ರನ್ ಗಳಿಸಿ ತಂಡದ ಮೊತ್ತವನ್ನು 125ಕ್ಕೆ ಏರಿಸಿದರು. ಗುಜರಾತ್ ಪರ ಡಿಯಾಂಡ್ರಾ ಡಾಟಿನ್ ಮತ್ತು ತನುಜಾ ಕನ್ವರ್ ತಲಾ 2 ವಿಕೆಟ್ ಪಡೆದರು. ಆಶ್ಲೀ ಗಾರ್ಡ್ನರ್ ಮತ್ತು ಕಾಶ್ವಿ ಗೌತಮ್ ತಲಾ 1 ವಿಕೆಟ್ ಪಡೆದರು.

ಡಬ್ಲ್ಯೂಪಿಎಲ್ 5 ಪಂದ್ಯಗಳ ಪೈಕಿ 2 ಪಂದ್ಯಗಳಲ್ಲಿ ಆರ್ ಸಿಬಿ ಗೆಲುವು ಸಾಧಿಸಿದ್ದು ಮೂರು ಪಂದ್ಯಗಳಲ್ಲಿ ಸೋತಿದೆ. ಇನ್ನು ಮೂರು ಪಂದ್ಯಗಳು ಉಳಿದಿದ್ದು ಈ ಮೂರು ಪಂದ್ಯಗಳಲ್ಲಿ ಆರ್ ಸಿಬಿ ಗೆಲ್ಲಲೇಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com