ICC Champions Trophy 2025: ಮೈದಾನಗಳ ಅಧ್ವಾನ; ಇಡೀ ಟೂರ್ನಿಯೇ UAE ಗೆ ಶಿಫ್ಟ್?; ಸಂಕಷ್ಟದಲ್ಲಿ ಪಾಕಿಸ್ತಾನ

ಅಚ್ಚರಿಯಾದರೂ ಇದು ಸತ್ಯ.. ಈ ಹಿಂದೆ ಭಾರತದ ಪಂದ್ಯಗಳನ್ನೂ ಪಾಕಿಸ್ತಾನದಲ್ಲೇ ಆಯೋಜಿಸಬೇಕು ಎಂದು ಪಟ್ಟು ಹಿಡಿದಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ಇಡೀ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಸರಣಿ ಆಯೋಜನೆಯನ್ನೇ ಕಳೆದುಕೊಳ್ಳುವ ಭೀತಿಯಲ್ಲಿದೆ.
Entire Champions Trophy May shifted from Pakistan to UAE
ಪಾಕಿಸ್ತಾನ ಕ್ರಿಕೆಟ್ ಮೈದಾನಗಳ ಪರಿಸ್ಥಿತಿ
Updated on

ನವದೆಹಲಿ: ಐಸಿಸಿ ICC ಚಾಂಪಿಯನ್ಸ್ ಟ್ರೋಫಿ 2025ರ ವಿಚಾರವಾಗಿ ಭಾರತದ ವಿರುದ್ಧ ತೊಡೆ ತಟ್ಟಿದ್ದ ಪಾಕಿಸ್ತಾನ ಇದೀಗ ಭಾರತದ ಪಂದ್ಯಗಳು ಮಾತ್ರವಲ್ಲ ಇಡೀ ಟೂರ್ನಿ ಆಯೋಜನೆ ಅವಕಾಶವನ್ನೇ ಕಳೆದುಕೊಳ್ಳುವ ಅಪಾಯದಲ್ಲಿದೆ.

ಅಚ್ಚರಿಯಾದರೂ ಇದು ಸತ್ಯ.. ಈ ಹಿಂದೆ ಭಾರತದ ಪಂದ್ಯಗಳನ್ನೂ ಪಾಕಿಸ್ತಾನದಲ್ಲೇ ಆಯೋಜಿಸಬೇಕು ಎಂದು ಪಟ್ಟು ಹಿಡಿದಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ಇಡೀ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಸರಣಿ ಆಯೋಜನೆಯನ್ನೇ ಕಳೆದುಕೊಳ್ಳುವ ಭೀತಿಯಲ್ಲಿದೆ.

ಕಾರಣ ಈ ಹಿಂದಿನ ವೇಳಾಪಟ್ಟಿಯಂತೆ ಪಾಕಿಸ್ತಾನದ ಕರಾಚಿಯಲ್ಲಿ ಫೆಬ್ರವರಿ 19 ರಂದು ಪ್ರಾರಂಭವಾಗಬೇಕು. ಅಂದರೆ ಸುಮಾರು 40 ದಿನಗಳಲ್ಲಿ ಮಹತ್ವ ಕ್ರಿಕೆಟ್ ಟೂರ್ನಿ ಆರಂಭವಾಗಬೇಕಿದೆ. ಈ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಡಲಾಗುತ್ತಿದ್ದು, ಭಾರತವು ತನ್ನ ಎಲ್ಲಾ ಪಂದ್ಯಗಳನ್ನು (ಅರ್ಹತೆ ಪಡೆದರೆ ನಾಕೌಟ್ ಸುತ್ತುಗಳನ್ನು ಒಳಗೊಂಡಿರುತ್ತದೆ) ದುಬೈನಲ್ಲಿ ಆಡುತ್ತದೆ.

ಆದಾಗ್ಯೂ, ಬಾಕಿ ಪಂದ್ಯಗಳು ಪಾಕಿಸ್ತಾನದ ಮೂರು ಕ್ರೀಡಾಂಗಣಗಳಾದ ಲಾಹೋರ್, ಕರಾಚಿ ಮತ್ತು ರಾವಲ್ಪಿಂಡಿ ಮೈದಾನದಲ್ಲಿ ನಡೆಯಲಿದೆ. ಆದರೆ ಪಂದ್ಯಾವಳಿ ಆರಂಭಕ್ಕೆ ಕ್ಷಣಗನೆ ಆರಂಭವಾಗಿದ್ದರೂ ಪಾಕಿಸ್ತಾನ ಕ್ರಿಕೆಟ್ ಮೈದಾನಗಳ ಸ್ಥಿತಿ ಮಾತ್ರ ಅದ್ವಾನವಾಗಿದೆ. ಮೈದಾನಗಳಲ್ಲಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.

Entire Champions Trophy May shifted from Pakistan to UAE
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025: ದುಬೈನಲ್ಲಿ ಟೀಂ ಇಂಡಿಯಾ ಪಂದ್ಯಗಳ ಆಯೋಜನೆ?

ಇನ್ನೂ ಕಾಂಕ್ರೀಟ್ ಕಾಮಗಾರಿಗಳೇ ನಡೆಯುತ್ತಿದ್ದು, ಇನ್ನು ಬಾಕಿ ಉಳಿದಿರುವ ಸಮಯದಲ್ಲಿ ಮೈದಾನದ ಎಲ್ಲ ಇತರೆ ಸಿದ್ಧತೆಗಳು ಪೂರ್ಣಗೊಳ್ಳುತ್ತವೆಯೇ ಎಂಬುದು ಇದೀಗ ಪ್ರಶ್ನೆಯಾಗಿದೆ. ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳಾದರೂ ವೇಗವಾಗಿ ನಡೆಯುತ್ತಿವೆಯೇ ಎಂದು ನೋಡಿದರೆ ಅದೂ ಇಲ್ಲ. ಹೀಗಾಗಿ ಇದೀಗ ಇಡೀ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯೇ ಯುಎಇಗೆ ಶಿಫ್ಟ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಖಾಸಗಿ ಸುದ್ದಿವಾಹಿನಿ ವರದಿ ಮಾಡಿದ್ದು, ಪಾಕಿಸ್ತಾನದಲ್ಲಿ ನಡೆಯುತ್ತಿರುವ ಕ್ರೀಡಾಂಗಣಗಳ ನವೀಕರಣ ಕಾರ್ಯ ಅತ್ಯಂತ ನಿರಾಶಾದಾಯಕವಾಗಿದೆ. ಎಲ್ಲಾ ಮೂರು ಕ್ರೀಡಾಂಗಣಗಳು ಟೂರ್ನಿಗೆ ಸಿದ್ಧವಾಗಿಲ್ಲ ಮತ್ತು ಇದು ನವೀಕರಣದ ವಿಚಾರ ಮಾತ್ರವಲ್ಲ, ಆದರೆ ಕನಿಷ್ಟ ಪ್ರಮಾಣದ ನಿರ್ಮಾಣ ಕಾರ್ಯಗಳೂ ಕೂಡ ಪೂರ್ಣಗೊಂಡಿಲ್ಲ. ಆಸನಗಳು, ಫ್ಲಡ್‌ಲೈಟ್‌ಗಳು, ಇತರೆ ಸೌಲಭ್ಯಗಳು ಮತ್ತು ಔಟ್‌ಫೀಲ್ಡ್, ಪಿಚ್ ಗಳು ಮತ್ತು ಆಟದ ಮೇಲ್ಮೈ ಸೇರಿದಂತೆ ತುಂಬಾ ಕೆಲಸ ಬಾಕಿ ಉಳಿದಿದೆ ಎಂದು ಹೇಳಿದೆ.

ಇದಲ್ಲದೆ ಪಾಕಿಸ್ತಾನಕ್ಕೆ ಹವಾಮಾನ ಕೂಡ ಸಹಕರಿಸುತ್ತಿಲ್ಲ. ಹವಾಮಾನವು ನಿರ್ಮಾಣ ಮತ್ತು ಪೂರ್ಣಗೊಳಿಸುವ ಕೆಲಸಗಳು ತ್ವರಿತ ಗತಿಯಲ್ಲಿ ನಡೆಯಲು ಪೂರಕವಾಗಿಲ್ಲ. ಗಡಾಫಿ ಕ್ರೀಡಾಂಗಣದಲ್ಲಿ ಪ್ಲ್ಯಾಸ್ಟರ್ ಕೆಲಸವು ಇನ್ನೂ ಪೂರ್ಣಗೊಂಡಿಲ್ಲ. ಸಾಮಾನ್ಯವಾಗಿ, ಯಾವುದೇ ಅಂತರಾಷ್ಟ್ರೀಯ ಈವೆಂಟ್‌ನ ಆತಿಥೇಯ ರಾಷ್ಟ್ರಗಳು ಪಂದ್ಯದ ಸ್ಥಳಗಳನ್ನು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಗೆ ಮುಂಚಿತವಾಗಿ ಹಸ್ತಾಂತರಿಸುತ್ತವೆ, ಇದರಿಂದಾಗಿ ಅವರು ಗುಣಮಟ್ಟವನ್ನು ಪರಿಶೀಲಿಸುತ್ತಾರೆ ಮತ್ತು ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತಾರೆ. ಪಿಸಿಬಿ ಈ ವರೆಗೂ ಈ ಕೆಲಸ ಮಾಡಿಲ್ಲ.

ಡೆಡ್ ಲೈನ್ ತಪ್ಪಿದರೆ ಟೂರ್ನಿ ಶಿಫ್ಟ್

ಇನ್ನು ಒಂದು ವೇಳೆ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳ್ಳದೇ ಹೋದರೆ ಅಥವಾ PCB ಡೆಡ್‌ಲೈನ್‌ಗಳನ್ನು ತಪ್ಪಿಸಿಕೊಂಡರೆ ಮತ್ತು ಸ್ಥಳಗಳು ICC ಪರಿಶೀಲನಾಪಟ್ಟಿಯನ್ನು ಪೂರೈಸದಿದ್ದರೆ ಆಗ ಇಡೀ ಟೂರ್ನಿಯೇ 2ನೇ ಪ್ರಶಸ್ತಸ್ಥಳದ ಪಟ್ಟಿಯಲ್ಲಿರುವ ಯುಎಇಗೆ ಶಿಫ್ಚ್ ಆಗುತ್ತದೆ. ಈ ಭೀತಿ ನಡುವೆಯೇ ಮುಂಬರುವ ಪುರುಷರ ODI ತ್ರಿಕೋನ ಸರಣಿಯನ್ನು ಲಾಹೋರ್ ಮತ್ತು ಕರಾಚಿಗೆ ಸ್ಥಳಾಂತರಿಸಲು ಪಿಸಿಬಿ ನಿರ್ಧರಿಸಿದೆ. ಏಕೆಂದರೆ 2025 ರ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯ ವಹಿಸುವ ಮೊದಲು ಸ್ಥಳಗಳು ಗಮನಾರ್ಹ ನವೀಕರಣಗಳನ್ನು ಪೂರ್ಣಗೊಳಿಸುತ್ತಿವೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತಿಳಿಸಿದೆ.

ಪಾಕಿಸ್ತಾನದ ಜೊತೆಗೆ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾವನ್ನು ಒಳಗೊಂಡ ತ್ರಿಕೋನ ಸರಣಿಯನ್ನು ಮೂಲತಃ ಮುಲ್ತಾನ್‌ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಗಡಾಫಿ ಸ್ಟೇಡಿಯಂ ಮತ್ತು ನ್ಯಾಷನಲ್ ಬ್ಯಾಂಕ್ ಸ್ಟೇಡಿಯಂನಲ್ಲಿ ಸುಧಾರಿತ ಹಂತದ ಸಿದ್ಧತೆಗಳನ್ನು ನಡೆಸಲಾಗಿದ್ದು, ಈ ಎರಡು ಸ್ಥಳಗಳಲ್ಲಿ ತ್ರಿಕೋನ ಸರಣಿಯನ್ನು ಆಯೋಜಿಸಲಿದೆ ಎಂದು ಪಿಸಿಬಿ ಹೇಳಿದೆ.

ಮುಂದಿನ ವಾರ ಪಾಕಿಸ್ತಾನದ ಭವಿಷ್ಯ

ಐಸಿಸಿಯ ಪಂದ್ಯಾವಳಿಯನ್ನು ಅರೆ-ಸಿದ್ಧ ಸ್ಥಳಗಳಲ್ಲಿ ಆಡಲಾಗುವುದಿಲ್ಲ. ಮುಂದಿನ ವಾರ ಭವಿಷ್ಯದ ಬಗ್ಗೆ ಹೆಚ್ಚಿನ ಸ್ಪಷ್ಟತೆ ನೀಡುತ್ತದೆ. ಆದರೆ PCB ಮತ್ತು ICC ಒಟ್ಟಾಗಿ ಒಂದು ಪವಾಡ ಮಾಡಬೇಕಾಗಿದೆ. ಆದಾಗ್ಯೂ ಈ ಬಗ್ಗೆ ಅಪ್ಡೇಟ್ ನೀಡಿರುವ ಪಿಸಿಬಿ, 'ಎಲ್ಲಾ ನವೀಕರಣ ಕಾರ್ಯಗಳು ಎರಡೂ ಸ್ಥಳಗಳಲ್ಲಿ ವೇಳಾಪಟ್ಟಿಯಲ್ಲಿರುವಂತೆಯೇ ಪ್ರಗತಿಯಲ್ಲಿದೆ ಮತ್ತು ನಿಗದಿತ ಗಡುವಿನ ಒಳಗೆ ಪೂರ್ಣಗೊಳ್ಳುತ್ತವೆ ಎಂದು ಭರವಸೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com