'The Greatest Rivalry – India vs Pakistan' ಸಾಕ್ಷ್ಯಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ

'ದಿ ಗ್ರೇಟೆಸ್ಟ್ ರೈವಲ್ರಿ' ಅನ್ನು ಗ್ರೇ ಮ್ಯಾಟರ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದೆ.
ದಿ ಗ್ರೇಟೆಸ್ಟ್ ರೈವಲ್ರಿ - ಭಾರತ-ಪಾಕಿಸ್ತಾನ' ಸ್ಟಿಲ್
ದಿ ಗ್ರೇಟೆಸ್ಟ್ ರೈವಲ್ರಿ - ಭಾರತ-ಪಾಕಿಸ್ತಾನ' ಸ್ಟಿಲ್
Updated on

ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್‌ ಪಂದ್ಯಗಳ ಐತಿಹಾಸಿಕ ಕ್ಷಣಗಳನ್ನು ಒಳಗೊಂಡ ಸಾಕ್ಷ್ಯಚಿತ್ರ ಸರಣಿಯಾದ 'The Greatest Rivalry – India vs Pakistan' ಫೆಬ್ರುವರಿ 7 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನ ಕಾಣಲಿದೆ ಎಂದು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಸೋಮವಾರ ತಿಳಿಸಿದೆ.

ಪತ್ರಿಕಾ ಪ್ರಕಟಣೆ ಪ್ರಕಾರ, ಸರಣಿಯು ಉಭಯ ರಾಷ್ಟ್ರಗಳ ತವರು ನೆಲದಲ್ಲಿನ ಪೈಪೋಟಿ, ಉತ್ಸಾಹ ಮತ್ತು ಹೆಚ್ಚಿನ ತೀವ್ರತೆಯ ಮನಸ್ಥಿತಿಯನ್ನು ಅನ್ವೇಷಿಸುವ ಗುರಿಯನ್ನು ಹೊಂದಿದೆ. ಸಾಕ್ಷ್ಯಚಿತ್ರ ಸರಣಿಯನ್ನು ಚಂದ್ರದೇವ್ ಭಗತ್ ಮತ್ತು ಸ್ಟೀವರ್ಟ್ ಸುಗ್ ನಿರ್ದೇಶಿಸಿದ್ದಾರೆ.

'ದಿ ಗ್ರೇಟೆಸ್ಟ್ ರೈವಲ್ರಿ' ಭಾರತ-ಪಾಕಿಸ್ತಾನದ ಮೊದಲ ಏಕದಿನ ಪಂದ್ಯದ ಅನೇಕ ಹೇಳಲಾಗದ ಕಥೆಗಳನ್ನು ಮತ್ತು ಉಭಯ ದೇಶಗಳ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಸೌರವ್ ಗಂಗೂಲಿ, ಸುನೀಲ್ ಗವಾಸ್ಕರ್, ವಕಾರ್ ಯೂನಿಸ್, ಜಾವೇದ್ ಮಿಯಾಂದಾದ್, ರವಿಚಂದ್ರನ್ ಅಶ್ವಿನ್, ಇಂಜಮಾಮ್-ಉಲ್-ಹಕ್ ಮತ್ತು ಶೋಯೆಬ್ ಅಖ್ತರ್ ಅವರು ಸಂದರ್ಶನದಲ್ಲಿ ತಮ್ಮ ಅನುಭವಗಳನ್ನು ಮತ್ತು ರಹಸ್ಯಗಳನ್ನು ಅನಾವರಣಗೊಳಿಸಿದ್ದಾರೆ ಎಂದು ಅದು ಹೇಳಿದೆ.

'ಆಟದಲ್ಲಿ ರೋಚಕತೆ, ಮರೆಯಲಾಗದ ಸಿಕ್ಸರ್‌ಗಳು ಮತ್ತು ನೀವು ಖುರ್ಚಿಗೆ ಅಂಟಿಕೊಂಡು ಕೂತೇ ನೋಡುವಂತೆ ನಿಮ್ಮನ್ನು ಪ್ರೇರೇಪಿಸುತ್ತವೆ. ಈ ಸಾಕ್ಷ್ಯಚಿತ್ರವು ಕ್ರೀಡೆ ಮತ್ತು ಇತಿಹಾಸದ ರೋಮಾಂಚಕ ಸಾಹಸಗಾಥೆಯನ್ನು ತೆರೆಮುಂದಿಡುವುದಲ್ಲದೆ, ಮುಂದೆ ಏನಾಗುತ್ತದೆ ಎಂಬುದನ್ನು ನೋಡಲು ಉತ್ಸಾಹ ಹೆಚ್ಚುವಂತೆ ಮಾಡುತ್ತದೆ. ಕಾಲಾತೀತವಾಗಿ ಇಂದಿಗೂ ಇದು ಪ್ರಸ್ತುತವಾಗಿದೆ... ಸಾಕ್ಷ್ಯಚಿತ್ರ ಸರಣಿಯು ಪಿಚ್‌ನ ಅನ್ನು ಮೀರಿ ವೈಯಕ್ತಿಕ ಕಥೆಗಳು, ಸಾಂಸ್ಕೃತಿಕ ಒಳನೋಟಗಳು ಮತ್ತು ಕಚ್ಚಾ ಭಾವನೆಗಳನ್ನು ಬಹಿರಂಗಪಡಿಸುತ್ತದೆ ಮತ್ತು ಇದು ವಿಶ್ವದ ಅತಿದೊಡ್ಡ ಪೈಪೋಟಿಗೆ ಉತ್ತೇಜನ ನೀಡುತ್ತದೆ' ಎಂದು ತಯಾರಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

'ದಿ ಗ್ರೇಟೆಸ್ಟ್ ರೈವಲ್ರಿ' ಅನ್ನು ಗ್ರೇ ಮ್ಯಾಟರ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com