Delhi Capitals: KL Rahul ಬದಲು ಹೊಸ ನಾಯಕತ್ವ?: ಯಾರಾಗಲಿದ್ದಾರೆ captain?

ರಾಹುಲ್ ಎಲ್‌ಎಸ್‌ಜಿಯನ್ನು ತಮ್ಮ ಮೊದಲ ಎರಡು ಸೀಸನ್‌ಗಳಲ್ಲಿ ಎರಡು ಪ್ಲೇಆಫ್ ಫಿನಿಶ್‌ಗಳಿಗೆ ಮುನ್ನಡೆಸಿದರು, 2024 ರಲ್ಲಿ ಏಳನೇ ಸ್ಥಾನ ಪಡೆದರು.
KL Rahul
ಕೆಎಲ್ ರಾಹುಲ್ online desk
Updated on

ಮುಂಬೈ: IPL 2025 ಸರಣಿ ಆರಂಭವಾಗಲು ಇನ್ನು ಕೆಲವೇ ದಿನಗಳಿದ್ದು, ಡೆಲ್ಲಿ ಕ್ಯಾಪಿಟಲ್ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಸಹಜ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ.

ಡೆಲ್ಲಿ ಕ್ಯಾಪಿಟಲ್ (Delhi Capitals) ತಂಡ ಬ್ಯಾಟ್ಸ್ಮನ್ ಕೆಎಲ್ ರಾಹುಲ್ (KL Rahul) ಅವರನ್ನು 14 ಕೋಟಿ ರೂಪಾಯಿಗಳಿಗೆ ಖರೀದಿಸಿದೆ.

ಈ ಹಿಂದಿನ ಐಪಿಎಲ್ ಗಳಲ್ಲಿ ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ (PBKS) ಹಾಗೂ ಲಖನೌ ಸೂಪರ್ ಜೈಂಟ್ಸ್ (LSG) ತಂಡವನ್ನು ಮುನ್ನಡೆಸಿರುವ ಅನುಭವ ಹೊಂದಿದ್ದು, ಡೆಲ್ಲಿ ತಂಡವನ್ನೂ ಇವರೇ ಮುನ್ನಡೆಸಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ತಂಡವನ್ನು ಹೊಸ ನಾಯಕನೋರ್ವ ಮುನ್ನಡೆಸುವುದು ನಿಚ್ಚಳವಾಗಿದೆ.

ಕ್ರಿಕ್ ಬಜ್ ನೊಂದಿಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್, ಕೆಎಲ್ ರಾಹುಲ್ ಬದಲು all-rounder ಅಕ್ಷರ್ ಪಟೇಲ್ (Axar Patel) ಡೆಲ್ಲಿ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಜನವರಿ 22 ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಗೆ ಭಾರತದ ಉಪನಾಯಕನಾಗಿ ಅಕ್ಷರ್ ಅವರನ್ನು ಆಯ್ಕೆ ಮಾಡಿದ ನಂತರ ಕಾರ್ತಿಕ್ ಈ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ. "ಅಕ್ಷರ್ ಪಟೇಲ್ ಅವರಿಗೆ ಶುಭ ಹಾರೈಕೆಗಳು. ಅವರಿಗೆ ಇದೊಂದು ಒಳ್ಳೆಯ ಅವಕಾಶ. ಅವರು ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಲಿದ್ದಾರೆ ಎಂದು ಕೇಳಿದ್ದೇನೆ. ಮುನ್ನಡೆಸಲು ಮತ್ತು ದಾರಿ ತೋರಿಸಲು ಅವರಿಗೆ ಇದೊಂದು ಒಳ್ಳೆಯ ಅವಕಾಶ, ಗುಜರಾತ್‌ಗೂ ಅವರು ಅದನ್ನೇ ಮಾಡುತ್ತಿದ್ದಾರೆ. ಅವರಿಗೆ ಶುಭ ಹಾರೈಸುತ್ತೇನೆ" ಎಂದು ಕಾರ್ತಿಕ್ ಹೇಳಿದ್ದಾರೆ.

ಐಪಿಎಲ್ 2025 ಮೆಗಾ ಹರಾಜಿನ ಮೊದಲು 16.5 ಕೋಟಿ ರೂ. ಬೆಲೆಗೆ ಅಕ್ಷರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಉಳಿಸಿಕೊಳ್ಳಲ್ಪಟ್ಟ ಅತ್ಯಂತ ಪ್ರಮುಖ ಆಟಗಾರರಾಗಿದ್ದಾರೆ. ಟೀಮ್ ಇಂಡಿಯಾ ಪರ, ಇಂಗ್ಲೆಂಡ್ ವಿರುದ್ಧದ ಸರಣಿಗೆ ಅಕ್ಷರ್ ಪಟೇಲ್ ಸೂರ್ಯಕುಮಾರ್ ಯಾದವ್ ಅವರ ಉಪನಾಯಕರಾಗಿರಲಿದ್ದಾರೆ.

KL Rahul
Champions Trophy 2025: ಭಾರತ ತಂಡ ಪ್ರಕಟ; ರೋಹಿತ್ ನಾಯಕ; KL Rahul, Kohli, Shami ತಂಡಕ್ಕೆ ವಾಪಸ್

ಮತ್ತೊಂದೆಡೆ, ರಾಹುಲ್ ಫ್ರಾಂಚೈಸಿಯ ನಾಯಕನಾಗಿ ಮೂರು ವರ್ಷಗಳ ನಂತರ ಎಲ್‌ಎಸ್‌ಜಿಯಿಂದ ಬೇರೆ ತಂಡಕ್ಕೆ ಬಂದಿದ್ದಾರೆ. ರಾಹುಲ್ ಎಲ್‌ಎಸ್‌ಜಿಯನ್ನು ತಮ್ಮ ಮೊದಲ ಎರಡು ಸೀಸನ್‌ಗಳಲ್ಲಿ ಎರಡು ಪ್ಲೇಆಫ್ ಫಿನಿಶ್‌ಗಳಿಗೆ ಮುನ್ನಡೆಸಿದರು, 2024 ರಲ್ಲಿ ಏಳನೇ ಸ್ಥಾನ ಪಡೆದರು. ರಾಹುಲ್ ಅದಕ್ಕೂ ಮೊದಲು 2020 ಮತ್ತು 2021 ರಲ್ಲಿ ಪಂಜಾಬ್ ಕಿಂಗ್ಸ್‌ನ ಎರಡು ಸೀಸನ್‌ಗಳಿಗೆ ನಾಯಕತ್ವ ವಹಿಸಿದ್ದರು, ಆದರೆ ಆ ಸೀಸನ್‌ಗಳಲ್ಲಿ ಪ್ಲೇಆಫ್ ತಲುಪಲು ತಂಡ ವಿಫಲವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com