3 ಕೋಟಿ ರೂ ಚೆಕ್ ಬೌನ್ಸ್ ಪ್ರಕರಣ: ಬಾಂಗ್ಲಾದ ಖ್ಯಾತ ಆಟಗಾರ ಶಕೀಬ್ ವಿರುದ್ಧ ಬಂಧನ ವಾರಂಟ್!

ಐಸಿಐಸಿಐ ಬ್ಯಾಂಕ್‌ಗೆ ಸಂಬಂಧಿಸಿದ ಚೆಕ್ ಬೌನ್ಸ್ ಪ್ರಕರಣದಲ್ಲಿ ಬಾಂಗ್ಲಾದೇಶದ ಆಲ್‌ರೌಂಡರ್ ಮತ್ತು ರಾಜಕಾರಣಿ ಶಕೀಬ್ ಅಲ್ ಹಸನ್ ವಿರುದ್ಧ ಢಾಕಾ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದೆ.
shakib al hasan
ಶಕೀಬ್ ಅಲ್ ಹಸನ್
Updated on

ಬಾಂಗ್ಲಾದೇಶದ ಅನುಭವಿ ಆಲ್‌ರೌಂಡರ್ ಶಕೀಬ್ ಅಲ್ ಹಸನ್‌ಗೆ ಟೈಮ್ ಸರಿಯಿಲ್ಲ. ಸೆಪ್ಟೆಂಬರ್ 2024ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಕೌಂಟಿ ಪಂದ್ಯದ ಸಮಯದಲ್ಲಿ ಶಕೀಬ್ ಅವರ ಬೌಲಿಂಗ್ ಶೈಲಿಯು ಕಾನೂನುಬಾಹಿರವೆಂದು ಕಂಡುಬಂದಿದ್ದು ಅವರನ್ನು ನಿಷೇಧಿಸಲಾಗಿತ್ತು. ಇಲ್ಲಿಯವರೆಗೆ ಎರಡು ಬಾರಿ ಬೌಲಿಂಗ್ ಆಕ್ಷನ್ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ. ಇದರಿಂದಾಗಿ ಅವರನ್ನು ಚಾಂಪಿಯನ್ಸ್ ಟ್ರೋಫಿಗೆ ಬಾಂಗ್ಲಾದೇಶ ತಂಡದಲ್ಲಿ ಆಯ್ಕೆ ಮಾಡಲಾಗಿಲ್ಲ. ಇದೆಲ್ಲದರ ನಡುವೆ, ಶಕೀಬ್ ಅಲ್ ಹಸನ್ ಮತ್ತೊಂದು ದೊಡ್ಡ ಹಿನ್ನಡೆಯನ್ನು ಅನುಭವಿಸಿದ್ದಾರೆ. ಚೆಕ್ ಬೌನ್ಸ್ ಪ್ರಕರಣದಲ್ಲಿ ಶಕೀಬ್ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ.

ವಾಸ್ತವವಾಗಿ, ಐಸಿಐಸಿಐ ಬ್ಯಾಂಕ್‌ಗೆ ಸಂಬಂಧಿಸಿದ ಚೆಕ್ ಬೌನ್ಸ್ ಪ್ರಕರಣದಲ್ಲಿ ಬಾಂಗ್ಲಾದೇಶದ ಆಲ್‌ರೌಂಡರ್ ಮತ್ತು ರಾಜಕಾರಣಿ ಶಕೀಬ್ ಅಲ್ ಹಸನ್ ವಿರುದ್ಧ ಢಾಕಾ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದೆ. ವಾರಂಟ್‌ನಲ್ಲಿ ಇತರ ಮೂವರು ವ್ಯಕ್ತಿಗಳ ಹೆಸರುಗಳೂ ಸೇರಿವೆ. ಢಾಕಾದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಜಿಯಾದೂರ್ ರೆಹಮಾನ್ ಭಾನುವಾರ ಈ ಆದೇಶ ಹೊರಡಿಸಿದ್ದಾರೆ. ಡಿಸೆಂಬರ್ 15ರಂದು, ಚೆಕ್ ವಂಚನೆ ಪ್ರಕರಣದಲ್ಲಿ ಶಕೀಬ್ ಹೆಸರು ಕೇಳಿಬಂದಿತ್ತು. ಇದಾದ ನಂತರ, ಡಿಸೆಂಬರ್ 18ರಂದು, ಆರಂಭಿಕ ವಿಚಾರಣೆಯ ನಂತರ, ನ್ಯಾಯಾಲಯವು ಜನವರಿ 19ರಂದು ಹಾಜರಾಗಲು ಆದೇಶಿಸಿತು. ಈ ಪ್ರಕರಣದಲ್ಲಿ ಶಕೀಬ್ ಅವರ ಕಂಪನಿ ಅಲ್ ಹಸನ್ ಆಗ್ರೋ ಫಾರ್ಮ್ ಲಿಮಿಟೆಡ್, ಅದರ ವ್ಯವಸ್ಥಾಪಕ ನಿರ್ದೇಶಕ ಗಾಜಿ ಶಹಗೀರ್ ಹುಸೇನ್ ಮತ್ತು ನಿರ್ದೇಶಕರಾದ ಇಮ್ದಾದುಲ್ ಹಕ್ ಮತ್ತು ಮಲೈಕರ್ ಬೇಗಂ ಕೂಡ ಭಾಗಿಯಾಗಿದ್ದಾರೆ.

ಐಎಫ್‌ಐಸಿ ಬ್ಯಾಂಕಿನ ಸಂಬಂಧ ಅಧಿಕಾರಿ ಶಾಹಿಬುರ್ ರೆಹಮಾನ್ ಅವರು ಬ್ಯಾಂಕಿನ ಪರವಾಗಿ ಪ್ರಕರಣ ದಾಖಲಿಸಿದ್ದರು. ಅದರ ಪ್ರಕಾರ, ಶಕೀಬ್ ಅಲ್ ಹಸನ್ ಮತ್ತು ಇತರ ಮೂವರು ಎರಡು ಪ್ರತ್ಯೇಕ ಚೆಕ್‌ಗಳ ಮೂಲಕ ಸುಮಾರು 41.4 ಮಿಲಿಯನ್ ಟಕಾ ಅಂದರೆ ಸುಮಾರು 3 ಕೋಟಿ ಭಾರತೀಯ ರೂಪಾಯಿಗಳನ್ನು ಪಾವತಿಸಬೇಕಾಗಿತ್ತು. ಆದರೆ ಅದರಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಯಿತು. ಶಕೀಬ್ ಕಂಪನಿಯು ಐಸಿಐಸಿಐ ಬ್ಯಾಂಕಿನ ಬನಾನಿ ಶಾಖೆಯಿಂದ ಹಲವಾರು ಬಾರಿ ಸಾಲ ಪಡೆದಿತ್ತು.

shakib al hasan
Vijay Hazare Trophy: ಕರ್ನಾಟಕ ಕ್ರಿಕೆಟ್ ತಂಡಕ್ಕೆ ಮತ್ತೊಂದು ಗರಿ; ದಾಖಲೆಯ 5ನೇ ವಿಜಯ್ ಹಜಾರೆ ಟ್ರೋಫಿ ಗೆದ್ದ ಮಾಯಾಂಕ್ ಪಡೆ!

ಬಾಂಗ್ಲಾದೇಶದಲ್ಲಿ ರಾಜಕೀಯ ಅಶಾಂತಿಯ ಸಂದರ್ಭದಲ್ಲಿ ಶಕೀಬ್ ಅಲ್ ಹಸನ್ ಮೇಲೆ ಕೊಲೆ ಆರೋಪ ಹೊರಿಸಲಾಗಿತ್ತು. ಇದಾದ ನಂತರ, ಭದ್ರತಾ ಕಾಳಜಿ ಮತ್ತು ಕಾನೂನು ಜಾರಿ ಸಂಸ್ಥೆಗಳು ಪ್ರಶ್ನಿಸುವ ಸಾಧ್ಯತೆಯನ್ನು ಉಲ್ಲೇಖಿಸಿ ಅವರು ದೇಶಕ್ಕೆ ಮರಳಲು ನಿರಾಕರಿಸಿದರು. ಅಂದಿನಿಂದ ಅವರು ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಶಕೀಬ್ ಕುಟುಂಬವು ಪ್ರಸ್ತುತ ಅಮೆರಿಕದಲ್ಲಿ ನೆಲೆಸಿರುವುದರಿಂದ ಅವರು ಶೀಘ್ರದಲ್ಲೇ ಬಾಂಗ್ಲಾದೇಶಕ್ಕೆ ಮರಳುವುದು ಇನ್ನೂ ಅಸಂಭವವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com