SP ಸಂಸದೆ ಜೊತೆಗೆ ಕ್ರಿಕೆಟಿಗ ರಿಂಕು ಸಿಂಗ್ ಮದುವೆ ದಿನಾಂಕ ಫಿಕ್ಸ್? ಲಖನೌನಲ್ಲಿ ನಿಶ್ಚಿತಾರ್ಥ!

ಫೆಬ್ರವರಿ 16ರಂದು ಆಲಿಗಢದ ರಿಂಕು ಸಿಂಗ್ ಅವರ ಕುಟುಂಬದವರೊಂದಿಗೆ ಮದುವೆ ಮಾತುಕತೆ ನಡೆಯಲಿದೆ ಎಂದು ಎಂದು ಪ್ರಿಯಾ ಸರೋಜ್ ಅವರ ತಂದೆ ತುಪಾನಿ ಸರೋಜ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
Rinku Singh -Priya Saroj
ರಿಂಕು ಸಿಂಗ್- ಪ್ರಿಯಾ ಸರೋಜ್
Updated on

ಜಾನ್ಪುರ್ : ಭಾರತೀಯ ಕ್ರಿಕೆಟ್ ಆಟಗಾರ ರಿಂಕು ಸಿಂಗ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಜೊತೆಗೆ ವಿವಾಹವಾಗುವುದು ಖಚಿತವಾಗಿದೆ. ಫೆಬ್ರವರಿ 16ರಂದು ಆಲಿಗಢದ ರಿಂಕು ಸಿಂಗ್ ಅವರ ಕುಟುಂಬದವರೊಂದಿಗೆ ಮದುವೆ ಮಾತುಕತೆ ನಡೆಯಲಿದೆ ಎಂದು ಎಂದು ಪ್ರಿಯಾ ಸರೋಜ್ ಅವರ ತಂದೆ ತುಪಾನಿ ಸರೋಜ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಇಲ್ಲಿಯವರೆಗೂ ನಿಶ್ಚಿತಾರ್ಥ ಅಥವಾ ವಿವಾಹ ಪೂರ್ವ ಕಾರ್ಯಕ್ರಮಗಳು ನಡೆದಿಲ್ಲ. ಸುಮಾರು ಒಂದು ವರ್ಷದಿಂದ ರಿಂಕು ಸಿಂಗ್ ಹಾಗೂ ಪ್ರಿಯಾ ಪರಸ್ಪರ ಇಷ್ಟಪಟ್ಟಿದ್ದಾರೆ. ಆದರೆ ಅವರ ಸಂಬಂಧಕ್ಕೆ ಇಬ್ಬರ ಕುಟುಂಬಸ್ಥರ ಒಪ್ಪಿಗೆ ಅಗತ್ಯವಾಗಿದೆ. ಈ ವಿವಾಹಕ್ಕೆ ಇಬ್ಬರ ಕುಟುಂಬಸ್ಥರೂ ಒಪ್ಪಿಗೆ ನೀಡಿದ್ದಾರೆ. ಸಂಸತ್ ಅಧಿವೇಶನ ಬಳಿಕ ನಿಶ್ಚಿತಾರ್ಥ ಮತ್ತು ವಿವಾಹ ದಿನಾಂಕವನ್ನು ನಿಗದಿಪಡಿಸಲಾಗುವುದು, ಲಖನೌನಲ್ಲಿ ಎಂಗೇಜ್ ಮೆಂಟ್ ನಡೆಯಲಿದೆ ಎಂದು ಸಮಾಜವಾದಿ ಪಕ್ಷದ ಶಾಸಕರು ಆಗಿರುವ ತುಪಾನಿ ಹೇಳಿದ್ದಾರೆ.

ಜನವರಿ 22ರಿಂದ ಟಿ20 ಸರಣಿಗಾಗಿ ಇಂಗ್ಲೆಂಡ್‌ಗೆ ತೆರಳಲಿರುವ ರಿಂಕ್ ಸಿಂಗ್, ಐಪಿಎಲ್‌ನಲ್ಲೂ ಆಡಲಿದ್ದಾರೆ. ಮದುವೆಯ ಕಾರ್ಯಕ್ರಮಗಳು ಅವರ ಆಟದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲಾಗುವುದು ಎಂದು ಅವರು ಹೇಳಿದರು. ಎರಡು ಕುಟುಂಬಗಳು ಅಲಿಘಡದಲ್ಲಿರುವ ಸಿಂಗ್ ಅವರ ಮನೆಯಲ್ಲಿ ಭೇಟಿಯಾಗಿ ಉಡುಗೊರೆ ವಿನಿಮಯ ಮಾಡಿಕೊಳ್ಳುವ ಮೂಲಕ ಮದುವೆಯನ್ನು ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Rinku Singh -Priya Saroj
ಸಮಾಜವಾದಿ ಪಕ್ಷದ ಸಂಸದೆಯೊಂದಿಗೆ ಕ್ರಿಕೆಟಿಗ Rinku Singh ನಿಶ್ಚಿತಾರ್ಥ? ಯಾರು ಈ Priya Saroj?

ಪ್ರಿಯಾ ಸರೋಜ್ ವಾರಣಾಸಿಯ ಕಾರ್ಖಿಯಾನ್ ಗ್ರಾಮದ ನಿವಾಸಿಯಾಗಿದ್ದು, ಹಲವಾರು ವರ್ಷಗಳಿಂದ ಎಸ್‌ಪಿಯೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ಕಳೆದ ವರ್ಷ ಜೌನ್‌ಪುರ ಜಿಲ್ಲೆಯ ಮಚ್ಲಿಶಹರ್ ಕ್ಷೇತ್ರದಿಂದ 25 ನೇ ವಯಸ್ಸಿನಲ್ಲಿ ಲೋಕಸಭೆಗೆ ಚುನಾಯಿತರಾಗಿದ್ದರು.

ಸುಪ್ರೀಂ ಕೋರ್ಟ್‌ನ ಮಾಜಿ ವಕೀಲೆಯಾಗಿರುವ ಪ್ರಿಯಾ ಸರೋಜ್ 2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತನ್ನ ತಂದೆಯ ಪರವಾಗಿ ಪ್ರಚಾರ ಮಾಡುವಾಗ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. ನೋಯ್ಡಾದ ಅಮಿಟಿ ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿ ಪಡೆಯುವ ಮೊದಲು ಅವರು ದೆಹಲಿ ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com