ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಏಳು ವಿಕೆಟ್ ಜಯ: ಟ್ರೋಲ್ ಆಗ್ತಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು!

ಕಳೆದ ವರ್ಷ ನವೆಂಬರ್‌ನಲ್ಲಿ ಜೆಡ್ಡಾದಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್‌ಸಿಬಿ 18 ಹೊಸ ಆಟಗಾರರನ್ನು ಆಯ್ಕೆ ಮಾಡಿತು.
ಆರ್‌ಸಿಬಿ
ಆರ್‌ಸಿಬಿ
Updated on

ಕೋಲ್ಕತ್ತಾ: ಇಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲನೇ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಭಾರತ, ಇಂಗ್ಲೆಂಡ್ ತಂಡವನ್ನು ನಿಗದಿತ 20 ಓವರ್ ಗಳಲ್ಲಿ 132 ರನ್‌ಗಳಿಗೆ ಕಟ್ಟಿಹಾಕಿತು. ಇಂಗ್ಲೆಂಡ್ ನೀಡಿದ 132 ರನ್ ಗುರಿ ಬೆನ್ನಟ್ಟಿದ ಭಾರತ 12.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 133 ರನ್‌ಗಳಿಸಿತು. ಆದರೆ, ಇದೀಗ ಮುಂಬರುವ ಐಪಿಎಲ್ 2025ನೇ ಆವೃತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಆಯ್ಕೆಯನ್ನು ನೆಟ್ಟಿಗರು ಟೀಕಿಸುತ್ತಿದ್ದಾರೆ.

ಇಂಗ್ಲೆಂಡ್ ವಿರುದ್ಧ ಭಾರತ ಜಯ ಸಾಧಿಸಿದ ನಂತರ ಆರ್‌ಸಿಬಿ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಆರ್‌ಸಿಬಿಯು ಮುಂಬರುವ ಐಪಿಎಲ್ ಆವೃತ್ತಿಗಾಗಿ ಮೆಗಾ ಹರಾಜಿನಲ್ಲಿ ಖರೀದಿಸಿರುವ ಮೂವರು ಪ್ರಮುಖ ಆಟಗಾರರು ಇಂಗ್ಲೆಂಡ್ ತಂಡದವರಾಗಿರುವುದು ಇದಕ್ಕೆ ಕಾರಣವಾಗಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಜೆಡ್ಡಾದಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್‌ಸಿಬಿ 18 ಹೊಸ ಆಟಗಾರರನ್ನು ಆಯ್ಕೆ ಮಾಡಿತು ಮತ್ತು ರೈಟ್ ಟು ಮ್ಯಾಚ್ ಕಾರ್ಡ್ ಅನ್ನು ಇನ್ನೊಬ್ಬರಿಗೆ ಬಳಸಿತು. ಇವರಲ್ಲಿ ಎಂಟು ಮಂದಿ ವಿದೇಶಿ ಆಟಗಾರರಾಗಿದ್ದು, ಅದರಲ್ಲಿ ಮೂವರು ಇಂಗ್ಲೆಂಡ್‌ನವರಾಗಿದ್ದಾರೆ. ಈ ಎಲ್ಲ ಆಟಗಾರರು ಬುಧವಾರ ಭಾರತ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಆರಂಭಿಕ ಪಂದ್ಯದಲ್ಲಿ ಕಾಣಿಸಿಕೊಂಡರು ಮತ್ತು ಮೂವರಿಂದ ಕೇವಲ ಏಳು ರನ್ ಗಳಿಸಲಷ್ಟೇ ಯಶಸ್ವಿಯಾದರು. ಇದರಿಂದಾಗಿ ಆರ್‌ಸಿಬಿಯನ್ನು ಮತ್ತೊಮ್ಮೆ ಗೇಲಿ ಮಾಡಲಾಗಿದೆ.

₹ 11.50 ಕೋಟಿಗೆ ಖರೀದಿಸಿರುವ ಇಂಗ್ಲೆಂಡ್ ಆರಂಭಿಕ ಆಟಗಾರ ಫಿಲ್ ಸಾಲ್ಟ್, ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿಸಿದ್ದಾರೆ. ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಪಂದ್ಯದ ಮೊದಲ ಓವರ್‌ನಲ್ಲಿ ಅರ್ಷ್‌ದೀಪ್ ಸಿಂಗ್ ಅವರ ಮೂರು ಎಸೆತಗಳಲ್ಲಿ ಶೂನ್ಯಕ್ಕೆ ನಿರ್ಗಮಿಸಿದರು. ಹರಾಜಿನಲ್ಲಿ ₹ 8.75 ಕೋಟಿಗೆ ಖರೀದಿಸಲಾಗಿರುವ ಲಿಯಾಮ್ ಲಿವಿಂಗ್‌ಸ್ಟನ್, ವರುಣ್ ಚಕ್ರವರ್ತಿಯವರ ಬೌಲಿಂಗ್‌ನಲ್ಲಿ ಡಕ್‌ ಔಟಾದರು. ಆದರೆ, ಸ್ಪಿನ್ನರ್ ವಿರುದ್ಧ ಹೋರಾಡಿದ ಜಾಕೋಬ್ ಬೆಥೆಲ್ ಅವರು ಹಾರ್ದಿಕ್ ಪಾಂಡ್ಯ ಅವರ 14 ಎಸೆತಗಳಲ್ಲಿ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬೆಥೆಲ್ ಅವರನ್ನು ಆರ್‌ಸಿಬಿ ₹ 2.6 ಕೋಟಿಗೆ ಖರೀದಿಸಿದೆ.

ಆರ್‌ಸಿಬಿ
England vs India T20: ಭಾರತಕ್ಕೆ 7 ವಿಕೆಟ್ ಜಯ!

ಆರ್‌ಸಿಬಿ ಈ ಬಾರಿ ಮೂವರು ಆಟಗಾರರನ್ನು ಉಳಿಸಿಕೊಂಡಿತ್ತು. ಯಶ್ ದಯಾಳ್, ರಜತ್ ಪಾಟೀದಾರ್ ಮತ್ತು ವಿರಾಟ್ ಕೊಹ್ಲಿ ಅವರನ್ನು ಹೊರತುಪಡಿಸಿ ಉಳಿದ ಆಟಗಾರರನ್ನು ತಂಡದಿಂದ ಕೈಬಿಟ್ಟಿತ್ತು. ಬಹುತೇಕ ಹೊಸಬರೇ ಇರುವ ತಂಡವನ್ನು ಈ ಬಾರಿ ಕಟ್ಟಿತ್ತು. ಇನ್ನೇನು ಐಪಿಎಲ್ ಆವೃತ್ತಿ ಆರಂಭಕ್ಕೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ ಆರ್‌ಸಿಬಿ ಖರೀದಿಸಿರುವ ಇಂಗ್ಲೆಂಡ್ ಆಟಗಾರರ ಕಳಪೆ ಪ್ರದರ್ಶನ ಇದೀಗ ತಂಡದ ಕಳವಳಕ್ಕೆ ಕಾರಣವಾಗಿದೆ. ನೆಟ್ಟಿಗರು ಆರ್‌ಸಿಬಿ ಅಭಿಮಾನಿಗಳನ್ನು ಅಣಕಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com