ಕ್ರಿಕೆಟಿನಲ್ಲೊಂದು ವಿಚಿತ್ರ ಘಟನೆ: ಥರ್ಡ್ ಅಂಪೈರ್ ಔಟ್ ನೀಡಿದ್ರೂ ಬ್ಯಾಟರ್‌ಗೆ ಜೀವದಾನ ಸಿಕ್ಕಿದ್ದೇಗೆ? ವಿಡಿಯೋ ವೈರಲ್

ಗಲ್ಫ್ ಜೈಂಟ್ಸ್ ಬ್ಯಾಟ್ಸ್‌ಮನ್ ಮಾರ್ಕ್ ಅಡೈರ್ ಲಾಂಗ್ ಆಫ್‌ನಲ್ಲಿ ಶಾಟ್ ಹೊಡೆದು ಒಂದು ರನ್ ಪಡೆದರು. ನಾನ್-ಸ್ಟ್ರೈಕರ್ ತುದಿಯಲ್ಲಿ ನಿಂತಿದ್ದ ಟಾಮ್ ಕರನ್, ಕ್ರೀಸ್‌ಗೆ ಬಂದ ನಂತರ ಒಂದು ಸಿಂಗಲ್ ತೆಗೆದುಕೊಂಡು ಎರಡು ಬಾರಿ ತಮ್ಮ ಬ್ಯಾಟ್ ಅನ್ನು ನೆಲಕ್ಕೆ ತಟ್ಟಿದರು.
ಕ್ರಿಕೆಟಿನಲ್ಲೊಂದು ವಿಚಿತ್ರ ಘಟನೆ: ಥರ್ಡ್ ಅಂಪೈರ್ ಔಟ್ ನೀಡಿದ್ರೂ ಬ್ಯಾಟರ್‌ಗೆ ಜೀವದಾನ ಸಿಕ್ಕಿದ್ದೇಗೆ? ವಿಡಿಯೋ ವೈರಲ್
Updated on

ಇಂಟರ್ನ್ಯಾಷನಲ್ ಲೀಗ್ ಟಿ20 (ILT20) ನಲ್ಲಿ ಎಂಐ ಎಮಿರೇಟ್ಸ್ ಮತ್ತು ಗಲ್ಫ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಈ ಪಂದ್ಯದ ಎರಡನೇ ಇನ್ನಿಂಗ್ಸ್‌ನ 18 ನೇ ಓವರ್‌ನ ಕೊನೆಯ ಎಸೆತದಲ್ಲಿ ಈ ಘಟನೆ ನಡೆದಿದ್ದು ಇದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಯಿತು.

ವಾಸ್ತವವಾಗಿ, ಗಲ್ಫ್ ಜೈಂಟ್ಸ್ ಬ್ಯಾಟ್ಸ್‌ಮನ್ ಮಾರ್ಕ್ ಅಡೈರ್ ಲಾಂಗ್ ಆಫ್‌ನಲ್ಲಿ ಶಾಟ್ ಹೊಡೆದು ಒಂದು ರನ್ ಪಡೆದರು. ನಾನ್-ಸ್ಟ್ರೈಕರ್ ತುದಿಯಲ್ಲಿ ನಿಂತಿದ್ದ ಟಾಮ್ ಕರನ್, ಕ್ರೀಸ್‌ಗೆ ಬಂದ ನಂತರ ಒಂದು ಸಿಂಗಲ್ ತೆಗೆದುಕೊಂಡು ಎರಡು ಬಾರಿ ತಮ್ಮ ಬ್ಯಾಟ್ ಅನ್ನು ನೆಲಕ್ಕೆ ತಟ್ಟಿದರು. ಆದರೆ ಸ್ವಲ್ಪ ಸಮಯದ ನಂತರ, ಅವರು ಅಡೈರ್ ಜೊತೆ ಮಾತನಾಡಲು ಕ್ರೀಸ್ ತೊರೆದರು. ಆಗ ವಿಕೆಟ್ ಕೀಪರ್ ನಿಕೋಲಸ್ ಪೂರನ್ ಸ್ಟಂಪ್‌ ಔಟ್ ಮಾಡಿ ಅಂಪೈರ್‌ಗೆ ಮನವಿ ಮಾಡಿದರು. ನಂತರ ಥರ್ಡ್ ಅಂಪೈರ್ ಗೆ ಮನವಿ ಮಾಡಲಾಯಿತು. ವಿಡಿಯೋ ಪರಿಶೀಲಿಸಿದ ನಂತರ ಅವರು ಸಹ ಔಟ್ ಎಂದು ಘೋಷಿಸಿದರು.

ಗಲ್ಫ್ ಜೈಂಟ್ಸ್ ತಂಡದ ಕೋಚ್ ಆಂಡಿ ಫ್ಲವರ್ ಅಂಪೈರ್ ನಿರ್ಧಾರದಿಂದ ಅಸಮಾಧಾನಗೊಂಡರು. ಡಗೌಟ್‌ನಿಂದ ಹೊರಬಂದು ಟಾಮ್‌ಗೆ ಮೈದಾನದಲ್ಲಿಯೇ ಇರುವಂತೆ ಸೂಚಿಸಿದರು. ಈ ವೇಳೆ ಪೂರಾನ್ ತಮ್ಮ ಮನವಿಯನ್ನು ಹಿಂತೆಗೆದುಕೊಂಡರು. ಹೀಗಾಗಿ ಕರನ್ ಬ್ಯಾಟಿಂಗ್‌ ಮುಂದುವರೆಸಿದರು. ಎಂಐ ಎಮಿರೇಟ್ಸ್‌ನ ಈ ನಿರ್ಧಾರವನ್ನು ಗಲ್ಫ್ ಜೈಂಟ್ಸ್ ತಂಡವು ಮೆಚ್ಚಿಕೊಂಡಿದ್ದು ಶ್ಲಾಘಿಸಿತು.

ಕ್ರಿಕೆಟಿನಲ್ಲೊಂದು ವಿಚಿತ್ರ ಘಟನೆ: ಥರ್ಡ್ ಅಂಪೈರ್ ಔಟ್ ನೀಡಿದ್ರೂ ಬ್ಯಾಟರ್‌ಗೆ ಜೀವದಾನ ಸಿಕ್ಕಿದ್ದೇಗೆ? ವಿಡಿಯೋ ವೈರಲ್
"ಸಾಲ ತೀರಿಸಲು, ಪೂರಿ ಸಬ್ಜಿ ಮಾರಾಟ": Dhoni, ಕೊಹ್ಲಿ, ಸಚಿನ್ ಜೊತೆ ಆಡಿದ್ದ ಭಾರತದ ಮಾಜಿ ಆಟಗಾರನ ಅಳಲು! ಯಾರೀತ?

ಪಂದ್ಯದ ನಂತರ ಘಟನೆಯ ಬಗ್ಗೆ ಮಾತನಾಡಿದ ಪೂರಾನ್, ಇದು ಕ್ರೀಡಾ ಮನೋಭಾವದ ಬಗ್ಗೆ. ನಿಯಮಗಳ ಪ್ರಕಾರ, ಬ್ಯಾಟ್ಸ್‌ಮನ್ ಓವರ್‌ ಮುಕ್ತಾಯದ ಕರೆಯನ್ನು ಕೇಳಿದಂತೆ ತೋರುತ್ತಿತ್ತು. ಆದರೆ ನನಗೆ ಖಂಡಿತವಾಗಿಯೂ ಕೆೇಳಿಸಲಿಲ್ಲ, ಅದಕ್ಕಾಗಿಯೇ ನಾನು ಮೇಲ್ಮನವಿ ಸಲ್ಲಿಸಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com