Smriti Mandhana: ICC ವರ್ಷದ ಮಹಿಳಾ ಏಕದಿನ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿ!

2024ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎಡಗೈ ಮಹಿಳಾ ಕ್ರಿಕೆಟ್ ಆಟಗಾರರ ಪೈಕಿ ಸ್ಮೃತಿ ಮಂಧಾನ ಅತಿ ಹೆಚ್ಚು ರನ್ ಗಳಿಸಿದ್ದಾರೆ.
Smriti Mandhana
ಸ್ಮೃತಿ ಮಂಧಾನ
Updated on

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧಾನ ಅವರು 2024ರ ICC ವರ್ಷದ ಮಹಿಳಾ ಏಕದಿನ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಳೆದ ವರ್ಷ ಏಕದಿನ ಕ್ರಿಕೆಟ್​ನಲ್ಲಿ 13 ಇನ್ನಿಂಗ್ಸ್​ಗಳನ್ನು ಆಡಿದ್ದ ಮಂಧಾನ ನಾಲ್ಕು ಭರ್ಜರಿ ಶತಕಗಳ ಸಹಿತ ಒಟ್ಟು 747 ರನ್ ಕಲೆಹಾಕಿದ್ದರು. 2024ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎಡಗೈ ಮಹಿಳಾ ಕ್ರಿಕೆಟ್ ಆಟಗಾರರ ಪೈಕಿ ಸ್ಮೃತಿ ಮಂಧಾನ ಅತಿ ಹೆಚ್ಚು ರನ್ ಗಳಿಸಿದ್ದಾರೆ.

ಉಳಿದಂತೆ ಲಾರಾ ವೊಲ್ವಾರ್ಡ್ (697), ಟ್ಯಾಮಿ ಬ್ಯೂಮಾಂಟ್ (554) ಮತ್ತು ಹೇಲಿ ಮ್ಯಾಥ್ಯೂಸ್ (469) ರನ್ ಕಲೆ ಹಾಕಿದ್ದಾರೆ.

Smriti Mandhana
2024 ICC ಪುರುಷರ ಏಕದಿನ ತಂಡ ಪ್ರಕಟ: ಭಾರತದಿಂದ ಯಾರೂ ಇಲ್ಲ!

ಮಂಧಾನ 57.86ರ ಸರಾಸರಿಯಲ್ಲಿ 95.15 ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಅವರು ಈ ವರ್ಷದಲ್ಲಿ ನಾಲ್ಕು ಶತಕ ಗಳಿಸುವ ಮೂಲಕ ಮಹಿಳಾ ಕ್ರಿಕೆಟ್ ನಲ್ಲಿ ಹೊಸ ದಾಖಲೆ ಮಾಡಿದ್ದಾರೆ. 95 ಬೌಂಡರಿ ಹಾಗೂ ಆರು ಸಿಕ್ಸರ್ ಹೊಡೆದಿದ್ದಾರೆ.

2024ರಲ್ಲಿನ ಅದ್ಬುತ ಪ್ರದರ್ಶನವು ಐಸಿಸಿ ಮಹಿಳಾ ಚಾಂಪಿಯನ್ ಶಿಪ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿಸ್ಮೃತಿ ಮಂಧಾನ ಸ್ಥಾನವನ್ನು ಭದ್ರಪಡಿಸಿದೆ. ಇದು 2025ರ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವ ಕಪ್ ಗೆ ಅರ್ಹತೆ ಪಡೆಯುವ ಏಕದಿನ ಮಹಿಳಾ ಕ್ರಿಕೆಟರ ಪಟ್ಟಿ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com