ICC ಪ್ರತಿಷ್ಠಿತ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿ ಗೆದ್ದ Jasprit Bumrah; ಭಾರತದ 5ನೇ ಆಟಗಾರ!

ಐಸಿಸಿ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ಬುಮ್ರಾ ಅವರ ಕೌಶಲ್ಯವು ಪ್ರತಿಫಲಿಸುತ್ತದೆ. ಇದರಲ್ಲಿ ಅವರು 900 ಅಂಕಗಳನ್ನು ದಾಟಿದ್ದಲದೆ ವರ್ಷವನ್ನು 907 ಅಂಕಗಳೊಂದಿಗೆ ಕೊನೆಗೊಳಿಸಿದರು.
Jasprit Bumrah
ಜಸ್‌ಪ್ರೀತ್ ಬುಮ್ರಾPTI
Updated on

ನವದೆಹಲಿ: ಟೀಂ ಇಂಡಿಯಾದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಅವರನ್ನು ಐಸಿಸಿ ವರ್ಷದ ಅತ್ಯುತ್ತಮ ಪುರುಷ ಕ್ರಿಕೆಟಿಗನಿಗೆ ನೀಡುವ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿಗೆ ಆಯ್ಕೆ ಮಾಡಿದೆ. 2024ರಲ್ಲಿ ಬುಮ್ರಾ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಕೌಶಲ್ಯ, ಸ್ಥಿರತೆ ಮತ್ತು ನಿಖರ ಪ್ರದರ್ಶನ ನೀಡಿದ್ದರು. 31 ವರ್ಷದ ಬುಮ್ರಾ ಸೋಮವಾರ ಐಸಿಸಿ ವರ್ಷದ ಪುರುಷ ಕ್ರಿಕೆಟಿಗ ಎಂದು ಹೆಸರಿಸಲ್ಪಟ್ಟಿದ್ದು ವರ್ಷದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದರು.

ಬುಮ್ರಾ ಅವರಿಗಿಂತ ಮೊದಲು, ಭಾರತದಿಂದ ರಾಹುಲ್ ದ್ರಾವಿಡ್ (2004), ಸಚಿನ್ ತೆಂಡೂಲ್ಕರ್ (2010), ರವಿಚಂದ್ರನ್ ಅಶ್ವಿನ್ (2016) ಮತ್ತು ವಿರಾಟ್ ಕೊಹ್ಲಿ (2017 ಮತ್ತು 2018) ವಿಶ್ವದ ಅಗ್ರ ಆಟಗಾರರಾಗಿದ್ದು ಈ ಪ್ರಶಸ್ತಿಯನ್ನು ಪಡೆದಿದ್ದರು.

ಐಸಿಸಿ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ಬುಮ್ರಾ ಅವರ ಕೌಶಲ್ಯವು ಪ್ರತಿಫಲಿಸುತ್ತದೆ. ಇದರಲ್ಲಿ ಅವರು 900 ಅಂಕಗಳನ್ನು ದಾಟಿದ್ದಲದೆ ವರ್ಷವನ್ನು 907 ಅಂಕಗಳೊಂದಿಗೆ ಕೊನೆಗೊಳಿಸಿದರು. ಇದು ಶ್ರೇಯಾಂಕದ ಇತಿಹಾಸದಲ್ಲಿ ಯಾವುದೇ ಭಾರತೀಯ ಬೌಲರ್‌ಗಿಂತ ಅತ್ಯಧಿಕವಾಗಿದೆ ಎಂದು ಐಸಿಸಿ ಹೇಳಿದೆ.

Jasprit Bumrah
Jasprit Bumrah: 2024ರ ಐಸಿಸಿ ಪುರುಷರ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com