
ಮುಂಬೈ: ಆಸ್ಟ್ರೇಲಿಯಾದಲ್ಲಿ ನಡೆದ 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿ(ಬಿಜಿಟಿ) ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಠಿಣ ಸವಾಲುಗಳನ್ನು ಎದುರಿಸಿದ್ದು, ಬ್ಯಾಟಿಂಗ್ ಮತ್ತು ನಾಯಕತ್ವ ಎರಡರಲ್ಲೂ ವಿಫಲರಾದರು.
ಪಿತೃತ್ವ ರಜೆಯಿಂದಾಗಿ ಮೊದಲ ಟೆಸ್ಟ್ ಪಂದ್ಯದಿಂದ ದೂರ ಉಳಿದಿದ್ದ ರೋಹಿತ್ ಶರ್ಮಾ, ಎರಡನೇ ಪಂದ್ಯಕ್ಕೆ ತಂಡವನ್ನು ಸೇರಿಕೊಂಡರೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು.
ಈ ಮಧ್ಯೆ ಆಸ್ಟ್ರೇಲಿಯಾ ಪ್ರವಾಸದ ವೇಳೆ ರೋಹಿತ್ ಶರ್ಮಾ ಲಯ ಕಂಡುಕೊಳ್ಳಲು ಪರದಾಟ ನಡೆಸಿದ್ದರು. ಅವರ ಫಾರ್ಮ್ ಅವರ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ ಎಂದು ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಟೀಕಿಸಿದ್ದರು.
ಈ ಟೀಕೆಗಳಿಂದ ಆಕ್ರೋಶಗೊಂಡ ರೋಹಿತ್ ಶರ್ಮಾ, ಕೊನೆಯ ಪಂದ್ಯದ ವೇಳೆ, ಆಟಗಾರರ ನಿವೃತ್ತಿಯನ್ನ ಮೈಕ್ ಹಿಡಿದವರು, ಪೆನ್ ಹಿಡಿದವರು ನಿರ್ಧರಿಸುವುದು ಬೇಡ ಎಂದು ತಿರುಗೇಟು ನೀಡಿದ್ದರು. ಇದೀಗ ಅದರ ಬಗ್ಗೆಯೇ ಹಿಟ್ ಮ್ಯಾನ್ ಬಿಸಿಸಿಐಗೂ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ಆಸ್ಟ್ರೇಲಿಯಾ ಪ್ರವಾಸದ ವೇಳೆ ತಮ್ಮ ಪ್ರದರ್ಶನದ ಬಗ್ಗೆ ಸುನಿಲ್ ಗವಾಸ್ಕರ್ ಮಾಡಿದ ಕಾಮೆಂಟ್‌ಗಳು ನಕಾರಾತ್ಮಕ ಕಾಮೆಂಟ್‌ಗಳ ಮಿತಿಯನ್ನು ಮೀರಿವೆ ಎಂದು ರೋಹಿತ್ ಶರ್ಮಾ ಬಿಸಿಸಿಐ ಸಭೆಯಲ್ಲಿ ಹೇಳಿದ್ದಾರೆ. ಗವಾಸ್ಕರ್ ಅವರು ಇತರ ಕ್ರಿಕೆಟಿಗರ ಮೇಲೆ ಹೆಚ್ಚು ನಕಾರಾತ್ಮಕ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ ಮತ್ತು ಹಾಗೆ ಮಾಡುವುದು ಸರಿಯಲ್ಲ. ಸುನೀಲ್ ಗವಾಸ್ಕರ್ ಆಟಗಾರರನ್ನು ಕೆಟ್ಟದಾಗಿ ಟೀಕಿಸಬಾರದು. ಅವರ ಟೀಕೆ ಆಟಗಾರರ ಮನಸ್ಥಿತಿಯ ಮೇಲೆ ಒತ್ತಡ ಮತ್ತು ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಅಂತಹ ಟೀಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು" ಎಂದು ರೋಹಿತ್ ಶರ್ಮಾ ಬಿಸಿಸಿಐಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಆಸ್ಟ್ರೇಲಿಯಾ ಪ್ರವಾಸದ ವೇಳೆ ರೋಹಿತ್ ಶರ್ಮಾ ಲಯ ಕಂಡುಕೊಳ್ಳಲು ಪರದಾಟ ನಡೆಸಿದ್ದರು. ಅವರ ಫಾರ್ಮ್ ಅವರ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ ಎಂದು ಸುನಿಲ್ ಗವಾಸ್ಕರ್ ಟೀಕಿಸಿದ್ದರು.
Advertisement