4 ವರ್ಷ ಸಂಬಂಧ, ವಿವಾಹವಾಗುವುದಾಗಿ ನಂಬಿಸಿ ಮೋಸ; Yash Dayal ವಿರುದ್ಧ ಮತೊಬ್ಬ ಮಹಿಳೆ ದೂರು!

ಎಡ್-ಟೆಕ್ ಕಂಪನಿಯೊಂದರ ಮಾಜಿ ಉದ್ಯೋಗಿಯಾಗಿದ್ದ ಮಹಿಳೆ, 2020 ರ ಕೊನೆಯಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಯಶ್ ದಯಾಳ್ ಅವರನ್ನು ಭೇಟಿಯಾದರು.
Yash Dayal
ಯಶ್ ದಯಾಳ್online desk
Updated on

ಘಾಜಿಯಾಬಾದ್: ಆರ್‌ಸಿಬಿ ವೇಗದ ಬೌಲರ್ ತನ್ನ ಮೇಲೆ ಮಾನಸಿಕ ಮತ್ತು ದೈಹಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. 5 ವರ್ಷಗಳ ಕಾಲ ತನ್ನೊಂದಿಗೆ ಸಂಬಂಧ ಹೊಂದಿದ್ದ ಯಶ್ ದಯಾಳ್ ಮದುವೆಯಾಗುವ ಭರವಸೆ ನೀಡಿದ್ದರು. ಆದರೆ ಈಗ ಅದನ್ನು ಉಲ್ಲಂಘಿಸಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ.

ಮಹಿಳೆ ಆನ್‌ಲೈನ್ ದೂರು ದಾಖಲಿಸಿದ್ದು, ನಂತರ ಗಾಜಿಯಾಬಾದ್ ಪೊಲೀಸರು ಆಕೆಯ ಹೇಳಿಕೆಯನ್ನು ದಾಖಲಿಸಿದ್ದಾರೆ. ಉತ್ತರ ಪ್ರದೇಶ ಸರ್ಕಾರದ ಕುಂದುಕೊರತೆ ಪರಿಹಾರ ಪೋರ್ಟಲ್‌ಗೆ ಮಹಿಳೆ ದೂರು ಸಲ್ಲಿಸಿದ ನಂತರ ಎರಡು ದಿನಗಳ ಹಿಂದೆ ಕ್ರಿಕೆಟಿಗನ ವಿರುದ್ಧದ ಆರೋಪಗಳ ಬಗ್ಗೆ ತಮಗೆ ತಿಳಿಸಲಾಗಿದೆ ಎಂದು ಗಾಜಿಯಾಬಾದ್ ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.

ಯಶ್ ಹುಡುಗಿಯರಿಗೆ ಖ್ಯಾತಿ ಮತ್ತು ಹಣದ ಆಮಿಷವೊಡ್ಡಿ ನಂತರ ಅವರನ್ನು ಶೋಷಿಸುತ್ತಿದ್ದರು ಎಂದು ದೂರುದಾರರು ಹೇಳಿದ್ದಾರೆ. ಗುಜರಾತ್ ಟೈಟಾನ್ಸ್ ಪಂದ್ಯದ ಸಮಯದಲ್ಲಿ ಯಶ್ ಜೊತೆಗಿರುವ ಮಹಿಳೆಯ ಫೋಟೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಮಹಿಳೆ ತನ್ನ ಹೇಳಿಕೆಯನ್ನು ದಾಖಲಿಸಿದ್ದಾರೆ ಆದರೆ ಪೊಲೀಸರು ಇನ್ನೂ ದಯಾಳ್ ಅವರೊಂದಿಗೆ ಮಾತನಾಡಿಲ್ಲ.

"ತನಿಖೆ ನಡೆಯುತ್ತಿದೆ, ಮತ್ತು ಅದು ಮುಗಿದ ನಂತರ, ಸತ್ಯಗಳು ಸ್ಪಷ್ಟವಾದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೂರುದಾರರು ದೂರಿನಲ್ಲಿ ಉಲ್ಲೇಖಿಸಿರುವ ಪ್ರಕಾರ, ಸಂಬಂಧದ ಸಮಯದಲ್ಲಿ, ಮಹಿಳೆ "ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ" ಅವರ ಮೇಲೆ ಅವಲಂಬಿತರಾಗಿದ್ದರು. ಆದರೆ ಯಶ್ ದಯಾಳ್ ಇನ್ನೊಬ್ಬ ಮಹಿಳೆಯೊಂದಿಗೆ ಸಹ ಸಂಬಂಧ ಹೊಂದಿದ್ದರು.

Yash Dayal
'ಮದುವೆ ಆಗುವುದಾಗಿ 5 ವರ್ಷದಿಂದ ಲೈಂಗಿಕವಾಗಿ ಬಳಕೆ': RCB ವೇಗಿ ಯಶ್ ದಯಾಳ್ ವಿರುದ್ಧ ಮಹಿಳೆ ಗಂಭೀರ ಆರೋಪ!

ಎಡ್-ಟೆಕ್ ಕಂಪನಿಯೊಂದರ ಮಾಜಿ ಉದ್ಯೋಗಿಯಾಗಿದ್ದ ಮಹಿಳೆ, 2020 ರ ಕೊನೆಯಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಯಶ್ ದಯಾಳ್ ಅವರನ್ನು ಭೇಟಿಯಾದರು. ಅವರ ಮೊದಲ ಭೇಟಿ ಪ್ರಯಾಗ್‌ರಾಜ್‌ನಲ್ಲಿ ನಡೆದಿತ್ತು. ಅವರು ಹಲವಾರು ಬಾರಿ ಯಶ್ ದಯಾಳ್ ಮನೆಯಲ್ಲಿಯೇ ಇದ್ದರು ಮತ್ತು ಅವರ ಕುಟುಂಬಕ್ಕೆ ಹತ್ತಿರವಾಗಿದ್ದರು. 2022 ರಲ್ಲಿ, ಅವರ ತಂಡ ಗುಜರಾತ್ ಟೈಟಾನ್ಸ್ ಚಾಂಪಿಯನ್‌ಶಿಪ್ ಗೆದ್ದಾಗ ಅವರು ಯಶ್ ಅವರ ಕುಟುಂಬದೊಂದಿಗೆ ಐಪಿಎಲ್ ಫೈನಲ್‌ನಲ್ಲಿ ಭಾಗವಹಿಸಿದ್ದರು. ಸಂಬಂಧವು ನಾಲ್ಕುವರೆ ವರ್ಷಗಳ ಕಾಲ ನಡೆಯಿತು, ಆದರೆ ಕಳೆದ ಎರಡೂವರೆ ವರ್ಷಗಳಲ್ಲಿ ಕುಸಿಯಲು ಪ್ರಾರಂಭಿಸಿತು ಎಂದು ಅವರು ಹೇಳಿದ್ದಾರೆ.

ಕ್ರಿಕೆಟಿಗನ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ದೂರುದಾರರು, ತಮ್ಮ ಆರೋಪಗಳನ್ನು ಬೆಂಬಲಿಸಲು ಚಾಟ್‌ಗಳು, ಸ್ಕ್ರೀನ್‌ಶಾಟ್‌ಗಳು, ವೀಡಿಯೊ ಕರೆಗಳು ಮತ್ತು ಫೋಟೋಗಳು ಸೇರಿದಂತೆ ಪುರಾವೆಗಳು ತಮ್ಮ ಬಳಿ ಇವೆ ಎಂದು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com