Yash Dayal
ಯಶ್ ದಯಾಳ್

'ಮದುವೆ ಆಗುವುದಾಗಿ 5 ವರ್ಷದಿಂದ ಲೈಂಗಿಕವಾಗಿ ಬಳಕೆ': RCB ವೇಗಿ ಯಶ್ ದಯಾಳ್ ವಿರುದ್ಧ ಮಹಿಳೆ ಗಂಭೀರ ಆರೋಪ!

ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಪ್ರಸಿದ್ಧರಾದ ಭಾರತೀಯ ಕ್ರಿಕೆಟಿಗ ಯಶ್ ದಯಾಳ್ ದೊಡ್ಡ ವಿವಾದಕ್ಕೆ ಸಿಲುಕಿದ್ದಾರೆ.
Published on

ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಪ್ರಸಿದ್ಧರಾದ ಭಾರತೀಯ ಕ್ರಿಕೆಟಿಗ ಯಶ್ ದಯಾಳ್ (Yash Dayal) ದೊಡ್ಡ ವಿವಾದಕ್ಕೆ ಸಿಲುಕಿದ್ದಾರೆ. ಇತ್ತೀಚೆಗೆ ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯಶ್ ದಯಾಳ್ ಅವರ ಮೇಲೆ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ, ಹಿಂಸೆ ಮತ್ತು ವಂಚನೆ ಆರೋಪ ಹೊರಿಸಿದ್ದಾರೆ. ಯಶ್ ದಯಾಳ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಸಂತ್ರಸ್ತ ಮಹಿಳೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ವಿಷಯದಲ್ಲಿ ನ್ಯಾಯಕ್ಕಾಗಿ ಸಂತ್ರಸ್ತ ಮಹಿಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಮತ್ತು ರಾಜ್ಯ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಪ್ರಸ್ತುತ ದೇಶೀಯ ಕ್ರಿಕೆಟ್‌ನಲ್ಲಿ ಉತ್ತರ ಪ್ರದೇಶ ಮತ್ತು ಐಪಿಎಲ್‌ನಲ್ಲಿ ಬೆಂಗಳೂರು ಪರ ಆಡುತ್ತಿರುವ ಯಶ್ ದಯಾಳ್ ಇತ್ತೀಚಿನ ದಿನಗಳಲ್ಲಿ ಈ ಲೀಗ್‌ನಿಂದ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದಾರೆ. ಕಳೆದ ವರ್ಷವೂ ಅವರನ್ನು ಮೊದಲ ಬಾರಿಗೆ ಭಾರತದ ಟಿ20 ತಂಡಕ್ಕೆ ಕರೆಯಲಾಯಿತು. ಆದರೆ ಅವರು ಭಾರತ ಎ ಪರ ಕೆಲವು ಪಂದ್ಯಗಳನ್ನು ಆಡಿದ್ದಾರೆ. ಜೂನ್ 3 ರಂದು ಆರ್‌ಸಿಬಿಯನ್ನು ಮೊದಲ ಬಾರಿಗೆ ಐಪಿಎಲ್ (IPL) ಚಾಂಪಿಯನ್ ಮಾಡುವಲ್ಲಿ ದಯಾಳ್ ಪ್ರಮುಖ ಪಾತ್ರ ವಹಿಸಿದ್ದರು. ಈ ಆರೋಪಗಳು ಈಗ ದಯಾಳ್ ಅವರ ಸಾಧನೆಗಳ ಹೊಳಪನ್ನು ಮಂಕಾಗಿಸಿದೆ.

ಈ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆ ಸಿಎಂ ಹೆಲ್ಪ್‌ಲೈನ್ ಪೋರ್ಟಲ್‌ನಲ್ಲಿ ದೂರು ದಾಖಲಿಸಿದ್ದು, ಅದರ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ ದಯಾಳ್ ಅವರೊಂದಿಗಿನ ತಮ್ಮ ಫೋಟೋವನ್ನು ಸಹ ಮಹಿಳೆ ಹಂಚಿಕೊಂಡಿದ್ದಾರೆ. ಕಳೆದ 5 ವರ್ಷಗಳಿಂದ ಕ್ರಿಕೆಟಿಗನೊಂದಿಗೆ ಸಂಬಂಧ ಹೊಂದಿರುವುದಾಗಿ ಮಹಿಳೆ ತನ್ನ ದೂರಿನಲ್ಲಿ ಹೇಳಿಕೊಂಡಿದ್ದಾಳೆ. ಯಶ್ ದಯಾಳ್ ಮದುವೆಯ ಆಮಿಷವೊಡ್ಡಿ ತನ್ನನ್ನು ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ಶೋಷಿಸಿದ್ದಾರೆ ಎಂದು ಮಹಿಳೆ ತನ್ನ ದೂರಿನಲ್ಲಿ ಹೇಳಿಕೊಂಡಿದ್ದಾಳೆ. ಕ್ರಿಕೆಟಿಗ ತನ್ನ ಕುಟುಂಬಕ್ಕೆ ತನ್ನನ್ನು ಪರಿಚಯಿಸಿದಾಗ ಈಕೆ ನಿಮ್ಮ ಭಾವಿ ಸೊಸೆ ಎಂದು ಪರಿಚಯಿಸಿ ವಿಶ್ವಾಸಕ್ಕೆ ತೆಗೆದುಕೊಂಡಿದ್ದನು ಎಂದು ಮಹಿಳೆ ತನ್ನ ದೂರಿನಲ್ಲಿ ಹೇಳಿಕೊಂಡಿದ್ದಾಳೆ.

ಕ್ರಿಕೆಟಿಗ ತನಗೆ ಮೋಸ ಮಾಡುತ್ತಿದ್ದಾನೆಂದು ತಿಳಿದ ತಕ್ಷಣ ನಾನು ಪ್ರತಿಭಟಿಸಲು ಪ್ರಾರಂಭಿಸಿದೆ. ಹೀಗಾಗಿ ನಾನು ದೈಹಿಕ ಹಿಂಸೆ ಮತ್ತು ಮಾನಸಿಕ ಕಿರುಕುಳವನ್ನು ಎದುರಿಸಬೇಕಾಯಿತು ಎಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ಕ್ರಿಕೆಟಿಗನು ಇದೇ ರೀತಿ ಇತರ ಅನೇಕ ಮಹಿಳೆಯರೊಂದಿಗೆ ಸುಳ್ಳು ಸಂಬಂಧವನ್ನು ಹೊಂದಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ. ಜೂನ್ 14 ರಂದು ಮಹಿಳಾ ಸಹಾಯವಾಣಿಗೆ ದೂರು ನೀಡಿದ್ದರೂ, ಯಾವುದೇ ಕ್ರಮ ಕೈಗೊಳ್ಳಲಿಲ್ಲ, ನಂತರ ಸಿಎಂ ಸಹಾಯವಾಣಿಯಲ್ಲಿ ಸಹಾಯ ಪಡೆಯುವಂತೆ ಒತ್ತಾಯಿಸಲಾಯಿತು ಎಂದು ಸಂತ್ರಸ್ತೆ ಪೊಲೀಸರ ಮೇಲೆ ಆರೋಪಿಸಿದ್ದಾರೆ.

Yash Dayal
Ind Vs Eng: ಚೊಚ್ಚಲ ಟಿ20 ಶತಕ; ಎಲ್ಲಾ ಕ್ರಿಕೆಟ್ ಮಾದರಿಯಲ್ಲೂ ಶತಕ ಸಿಡಿಸಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟರ್ ಸ್ಮೃತಿ ಮಂದಾನ!

ದಯಾಳ್ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಿಲ್ಲ

ಸಂತ್ರಸ್ತ ಮಹಿಳೆ ತನ್ನ ಆರೋಪಗಳಲ್ಲಿ ಎಲ್ಲಿಯೂ ಕ್ರಿಕೆಟಿಗನ ಹೆಸರನ್ನು ಬರೆದಿಲ್ಲ. ಆದರೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಯಶ್ ದಯಾಳ್ ಅವರೊಂದಿಗಿನ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ಆದಾಗ್ಯೂ, ಈ ವಿಷಯದಲ್ಲಿ ಯಶ್ ದಯಾಳ್ ಅವರಿಂದ ಇನ್ನೂ ಯಾವುದೇ ಸ್ಪಷ್ಟೀಕರಣ ಅಥವಾ ಹೇಳಿಕೆ ಬಂದಿಲ್ಲ. ಸಂತ್ರಸ್ತ ಮಹಿಳೆ ಜೂನ್ 21 ರಂದು ಸಿಎಂ ಸಹಾಯವಾಣಿಯಲ್ಲಿ ಈ ದೂರು ನೀಡಿದ್ದಾರೆ ಮತ್ತು ನಂತರ ಜೂನ್ 25 ರಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಇದಾದ ಒಂದು ದಿನದ ನಂತರ, ಯಶ್ ದಯಾಳ್ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ - 'ಫಿಯರ್‌ಲೆಸ್' ಎಂದು ಬರೆಯಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com