
ಭಾರತದ ಸ್ಟಾರ್ ಕ್ರಿಕೆಟಿಗ ಮತ್ತು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ನಾಯಕ ಶ್ರೇಯಸ್ ಅಯ್ಯರ್ ತಮ್ಮ ಮನೆಯಲ್ಲಿ ತಮ್ಮ ತಾಯಿಯೊಂದಿಗೆ ಕಳೆದ ಸಂತೋಷದ ಕ್ಷಣವನ್ನು ಹಂಚಿಕೊಂಡಿದ್ದಾರೆ. ಸದ್ಯ ಅಂತರರಾಷ್ಟ್ರೀಯ ಕರ್ತವ್ಯದಿಂದ ದೂರವಿರುವ ಶ್ರೇಯಸ್, ಮನೆಯೊಳಗೆ ಕ್ರಿಕೆಟ್ ಆಡುತ್ತಿದ್ದು, ಅವರ ತಾಯಿಯೇ ಅವರಿಗೆ ಬೌಲಿಂಗ್ ಮಾಡುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಲಿವಿಂಗ್ ರೂಂನಲ್ಲಿ ರಿಯಲ್ ವರ್ಲ್ಡ್ ಕಪ್ ಫೈನಲ್ ಎಂದಿದೆ. ವಿಡಿಯೋ ನೋಡಿದ ಹಲವು ಬಳಕೆದಾರರು ತರಹೇವಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ.
'ಸರಪಂಚ್ (ಮುಖ್ಯಸ್ಥ) ಬೌಲಿಂಗ್ ಮಾಡುವುದಕ್ಕೆ ಯಾವುದೇ ಅಭ್ಯಂತರವಿಲ್ಲ' ಎಂದು ಪಂಜಾಬ್ ಕಿಂಗ್ಸ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಶೀರ್ಷಿಕೆ ನೀಡಿದೆ. ವಿಡಿಯೋದಲ್ಲಿ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಮಾಡುತ್ತಿದ್ದು, ಅವರ ಅಮ್ಮ ಬೌಲಿಂಗ್ ಮಾಡುತ್ತಿದ್ದಾರೆ. ಈ ವೇಳೆ ಅವರು ಅಯ್ಯರ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಸಂಭ್ರಮಿಸುತ್ತಾರೆ.
ಇಂಟರ್ನೆಟ್‌ನಲ್ಲಿ ಅಭಿಮಾನಿಗಳು ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಒಂದು ಬೌನ್ಸರ್ ಮತ್ತು ನಂತರ ಒಂದು ಯಾರ್ಕರ್, ನಿಮಗೆ ವಿಕೆಟ್ ಸಿಗುತ್ತದೆ' ಎಂದು ಒಬ್ಬ ಅಭಿಮಾನಿ ಹೇಳಿದ್ದಾರೆ.
'ಅವರು ಎರಡನೇ ಟೆಸ್ಟ್ ಪಂದ್ಯಕ್ಕೆ ಲಭ್ಯರಿರುವರೇ?' ಎಂದು ಜುಲೈ 2 ರಿಂದ ಪ್ರಾರಂಭವಾಗುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯವನ್ನು ಉಲ್ಲೇಖಿಸಿ ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
'ಆ ಎರಡನೆಯದು ಉತ್ತಮ ಸ್ಪಾಟ್‌ನಲ್ಲಿತ್ತು. ನೀವು ಅದನ್ನು ಪ್ರಶಂಸಿಸಲೇಬೇಕು' ಎಂದು ಮತ್ತೊಬ್ಬರು ಹೇಳಿದ್ದಾರೆ.
ಶ್ರೇಯಸ್ ಅಯ್ಯರ್ ಸದ್ಯ ಯಾವುದೇ ಕ್ರಿಕೆಟ್ ಆಡುತ್ತಿಲ್ಲ. ಇಂಗ್ಲೆಂಡ್‌ನ ಐದು ಪಂದ್ಯಗಳ ಟೆಸ್ಟ್ ಪ್ರವಾಸಕ್ಕಾಗಿ ಟೀಮ್ ಇಂಡಿಯಾ ತಂಡದಿಂದ ಹೊರಗುಳಿದಿದ್ದಾರೆ. ಆಗಸ್ಟ್ 17 ರಿಂದ ಪ್ರಾರಂಭವಾಗುವ ಭಾರತದ ಬಾಂಗ್ಲಾದೇಶ ಪ್ರವಾಸದಲ್ಲಿ ಅವರು ಮುಂದಿನ ಬಾರಿ ಆಡುವ ಸಾಧ್ಯತೆಯಿದೆ.
Advertisement