
ಐಪಿಎಲ್ 2025ನೇ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ ತಂಡಗಳು ಇದೀಗ ಸಾಕಷ್ಟು ಬದಲಾವಣೆ ಮಾಡಿಕೊಳ್ಳುತ್ತಿವೆ. ಈ ಬೆನ್ನಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ಹರಾಜಿಗೆ ತಿಂಗಳುಗಳು ಬಾಕಿ ಇದ್ದು, ಆಟಗಾರರ ಬದಲಾವಣೆ ಮುಂದುವರಿದಿದೆ. ಕ್ರಿಕ್‌ಬಜ್ ಪ್ರಕಾರ, ಈಗಾಗಲೇ ಆಟಗಾರರ ಟ್ರೇಡಿಂಗ್ ವಿಂಡೋ ಮತ್ತು ನಿಯಮಗಳು ತೆರೆದಿದ್ದು, ಅದರ ಬಗ್ಗೆ ಮಾಹಿತಿ ಇಲ್ಲಿದೆ.
IPL 2026 ಆಟಗಾರರ ಟ್ರೇಡಿಂಗ್ ವಿಂಡೋ
* ಐಪಿಎಲ್ 2025 ಸೀಸನ್ ಮುಗಿದ (ಜೂನ್ 10) ಒಂದು ವಾರದ ನಂತರ ಬೆಳಿಗ್ಗೆ 9 ಗಂಟೆಯಿಂದ ಐಪಿಎಲ್ 2026 ಹರಾಜಿಗೂ ಒಂದು ವಾರದ ಮೊದಲು ಸಂಜೆ 5 ಗಂಟೆಯವರೆಗೆ ಮೊದಲ ಟ್ರೇಡಿಂಗ್ ವಿಂಡೋ ಪ್ರಾರಂಭವಾಗುತ್ತದೆ.
* ಎರಡನೇ ಟ್ರೇಡಿಂಗ್ ವಿಂಡೋ ಐಪಿಎಲ್ 2026ರ ಹರಾಜಿನ ಮರುದಿನದಿಂದ IPL 2026 ಸೀಸನ್ ಪ್ರಾರಂಭವಾಗುವ ಒಂದು ತಿಂಗಳ ಮೊದಲು ಸಂಜೆ 5 ಗಂಟೆಯವರೆಗೆ ಪ್ರಾರಂಭವಾಗುತ್ತದೆ.
IPL 2026 ಆಟಗಾರರ ವ್ಯಾಪಾರ ನಿಯಮಗಳು
* ಹರಾಜಿನಲ್ಲಿ ಖರೀದಿಸಲಾದ ಆಟಗಾರರು ಟ್ರೇಡಿಂಗ್‌ಗೆ ಅರ್ಹರಾಗಿರುವುದಿಲ್ಲ.
* ವಿದೇಶಿ ಆಟಗಾರನನ್ನು ಟ್ರೇಡಿಂಗ್ ಮಾಡುತ್ತಿದ್ದರೆ, ಫ್ರಾಂಚೈಸಿಯು ಆಯಾ ಕ್ರಿಕೆಟ್ ಮಂಡಳಿಯಿಂದ ಎನ್‌ಒಸಿ ಪಡೆಯಬೇಕಾಗುತ್ತದೆ.
* ಟ್ರೇಡಿಂಗ್ ಮಾಡಲಾಗುವ ಆಟಗಾರನಿಗೆ ಅಥವಾ ಆತ ಪ್ರತಿನಿಧಿಸುವ ಫ್ರಾಂಚೈಸಿಗೆ ಪ್ರತ್ಯೇಕ ಪಾವತಿಯನ್ನು ಮಾಡಲಾಗುವುದಿಲ್ಲ.
* ಖರೀದಿ ಮಾಡುವ ಫ್ರಾಂಚೈಸಿಯು ಟ್ರೇಡಿಂಗ್ ಮಾಡುವ ಆಟಗಾರ ಆರೋಗ್ಯವಾಗಿದ್ದಾನೆಯೇ ಎಂದು ಪರಿಶೀಲಿಸುವ ಜವಾಬ್ದಾರಿ ಹೊಂದಿರುತ್ತದೆ ಮತ್ತು ಅಗತ್ಯ ದಾಖಲೆಗಳಿಗೆ ಸಹಿ ಪಡೆಯುವ ಮುನ್ನ ಆಟಗಾರನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬಹುದು.
* ಎರಡು ವಿಂಡೋಗಳ ನಡುವೆ ಟ್ರೇಡಿಂಗ್ ಆಗುವ ಆಟಗಾರರ ಸಂಖ್ಯೆಗೆ ಯಾವುದೇ ಮಿತಿಯಿಲ್ಲ, ಆದರೆ ಫ್ರಾಂಚೈಸಿಗಳು ವೇತನ ಮಿತಿ ಮತ್ತು ತಂಡ ಸಂಯೋಜನೆಯ ನಿಯಮಗಳನ್ನು ಪಾಲಿಸಬೇಕು.
* ಐಪಿಎಲ್ 2025ರ ಅಂತ್ಯ ಮತ್ತು ಐಪಿಎಲ್ 2026ರ ಆರಂಭದ ನಡುವೆ ಒಬ್ಬ ಆಟಗಾರನನ್ನು ಒಮ್ಮೆ ಮಾತ್ರ ವಿನಿಮಯ ಮಾಡಿಕೊಳ್ಳಬಹುದು.
* ಉದಾಹರಣೆಗೆ, 15 ಕೋಟಿ ರೂ. ಮೌಲ್ಯದ ಆಟಗಾರನನ್ನು ಟ್ರೇಡಿಂಗ್ ಮಾಡುತ್ತಿದ್ದರೆ, ಖರೀದಿಸುವ ತಂಡದ ಪರ್ಸ್ ಮೊತ್ತವು 15 ಕೋಟಿ ರೂ.ಗಳಷ್ಟು ಕಡಿಮೆಯಾಗುತ್ತದೆ ಮತ್ತು ಮಾರಾಟ ಮಾಡುವ ತಂಡದ ಪರ್ಸ್ ಮೊತ್ತವು ಅದೇ ಪ್ರಮಾಣದಲ್ಲಿ ಹೆಚ್ಚಾಗುತ್ತದೆ.
* ಒಂದಕ್ಕಿಂತ ಹೆಚ್ಚು ಫ್ರಾಂಚೈಸಿಗಳು ಒಬ್ಬ ಆಟಗಾರನ ಮೇಲೆ ಆಸಕ್ತಿ ಹೊಂದಿದ್ದರೆ, ಮಾರಾಟ ಮಾಡುವ ಫ್ರಾಂಚೈಸಿಯು ಆಸಕ್ತ ಫ್ರಾಂಚೈಸಿಗಳೊಂದಿಗೆ ಮಾತುಕತೆ ನಡೆಸಬಹುದು. ಈ ಸಂದರ್ಭದಲ್ಲಿ, ಆಟಗಾರನು ಒಪ್ಪಿದರೆ, ಮಾರಾಟ ಮಾಡುವ ಫ್ರಾಂಚೈಸಿಗಳು ಇತರ ಫ್ರಾಂಚೈಸಿಗಳಿಂದ ಬಿಡ್‌ಗಳನ್ನು ಸ್ವೀಕರಿಸಬಹುದು.
Advertisement