
ಬರ್ಮಿಂಗ್ ಹ್ಯಾಮ್: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನಾಯಕ ಶುಭ್ ಮನ್ ಗಿಲ್ ಬ್ಯಾಟಿಂಗ್ ಅಬ್ಬರ ಮುಂದುವರೆದಿದ್ದು, ಮೊದಲ ಇನ್ನಿಂಗ್ಸ್ ನಲ್ಲಿ ದಾಖಲೆಯ ದ್ವಿಶತಕ ಸಿಡಿಸಿ ಹಲವು ಕ್ರಿಕೆಟ್ ದಿಗ್ಗಜರ ದಾಖಲೆಗಳ ಹಿಂದಿಕ್ಕಿದ್ದಾರೆ.
ಹೌದು.. ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 543 ರನ್ ಕಲೆಹಾಕಿದೆ.
ಭಾರತದ ಪರ ನಾಯಕ ಶುಭ್ ಮನ್ ಗಿಲ್ ಶತಕ (224*) ಸಿಡಿಸಿದ್ದಾರೆ. 328 ಎಸೆತಗಳನ್ನು ಎದುರಿಸಿರುವ ಗಿಲ್ 3 ಸಿಕ್ಸರ್ ಮತ್ತು 29 ಬೌಂಡರಿಗಳ ನೆರವಿನಿಂದ ಅಜೇಯ 254 ರನ್ ಗಳಿಸಿದ್ದಾರೆ.
ದ್ವಿಶತಕ ಸಿಡಿಸಿದ 2ನೇ ಕಿರಿಯ ಭಾರತೀಯ ಆಟಗಾರ
ಇನ್ನು ಇಂಗ್ಲೆಂಡ್ ವಿರುದ್ಧ ದ್ವಿಶತಕ ಸಿಡಿಸಿದ ಭಾರತದ 2ನೇ ಕಿರಿಯ ಆಟಗಾರ ಎಂಬ ಕೀರ್ತಿಗೆ ಗಿಲ್ ಪಾತ್ರರಾಗಿದ್ದಾರೆ. ಗಿಲ್ ಈ ಸಾಧನೆ ಮಾಡುವ ವೇಳೆಗೆ ಅವರ ವಯಸ್ಸು 25 ವರ್ಷ 298 ದಿನಗಳಾಗಿವೆ. ಇದಕ್ಕೂ ಮೊದಲು 1964ರಲ್ಲಿ ದೆಹಲಿಯಲ್ಲಿ ಪಟೌಡಿ (23 ವರ್ಷ 39 ದಿನ) ದ್ವಿಶತಕ ಸಿಡಿಸಿದ ಭಾರತದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ 3ನೇ ಸ್ಥಾನದಲ್ಲಿದ್ದು, ಸಚಿನ್ 1999ರಲ್ಲಿ ಅಹ್ಮದಾಬಾದ್ ನಲ್ಲಿ ದ್ವಿಶತಕ ಸಿಡಿಸಿದ್ದರು. ಅಂದಿಗ ಅವರ ವಯಸ್ಸು 26 ವರ್ಷ 189 ದಿನಗಳಾಗಿತ್ತು. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 4ನೇ ಸ್ಥಾನದಲ್ಲಿದ್ದು ಕೊಹ್ಲಿ 2016ರಲ್ಲಿ ವಿಂಡೀಸ್ ವಿರುದ್ಧ ದ್ವಿಶತಕ ಸಿಡಿಸಿದ್ದರು. ಅಂದಿಗೆ ಅವರ ವಯಸ್ಸು 27 ವರ್ಷ 260 ದಿನಗಳಾಗಿತ್ತು.
Youngest to score a Test double hundred as India captain
23y 39d - MAK Pataudi vs ENG, Delhi, 1964
25y 298d - Shubman Gill vs ENG, Edgbaston, 2025
26y 189d - Sachin Tendulkar vs NZ, Ahmedabad, 1999
27y 260d - Virat Kohli vs WI, North Sound, 2016
ಅಂತೆಯೇ ಇಂಗ್ಲೆಂಡ್ ನೆಲದಲ್ಲಿ ಒಟ್ಟು ನಾಯಕರ 11 ದ್ವಿಶತಕಗಳು ದಾಖಲಾಗಿದ್ದು, ಈ ಪೈಕಿ ದಕ್ಷಿಣ ಆಫ್ರಿಕಾದ ನಾಯಕ ಗ್ರೇಮ್ ಸ್ಮಿತ್ ದ್ವಿಶತಕ ಸಿಡಿಸಿದ ಕಿರಿಯ ನಾಯಕ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಗ್ರೇಮ್ ಸ್ಮಿತ್ ದ್ವಿಶತಕ ಸಿಡಿಸಿದಾಗ ಅವರ ವಯಸ್ಸು 22 ವರ್ಷ 175 ದಿನಗಳಾಗಿತ್ತು. 2003ರಲ್ಲಿ ಲಾರ್ಡ್ಸ್ (259 ರನ್) ಮತ್ತು ಎಡ್ಜ್ ಬ್ಯಾಸ್ಚನ್ (277 ರನ್)ನಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ್ದರು.
2016 ರಲ್ಲಿ ನಾರ್ತ್ ಸೌಂಡ್‌ನಲ್ಲಿ ವಿರಾಟ್ ಕೊಹ್ಲಿ 200 ರನ್ ಗಳಿಸಿದ ನಂತರ, ವಿದೇಶದಲ್ಲಿ ಭಾರತದ ನಾಯಕನೊಬ್ಬ ಬಾರಿಸಿದ ಎರಡನೇ ದ್ವಿಶತಕ ಇದಾಗಿದೆ. 1979 ರಲ್ಲಿ ದಿ ಓವಲ್‌ನಲ್ಲಿ ಸುನಿಲ್ ಗವಾಸ್ಕರ್ ಅವರು ಗಳಿಸಿದ್ದ 221 ರನ್‌ಗಳನ್ನು ಹಿಂದಿಕ್ಕಿದ ಶುಭಮನ್ ಗಿಲ್ ಈಗ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ನಲ್ಲಿ ಭಾರತದ ಪರ ಅತ್ಯಧಿಕ ಸ್ಕೋರ್ ಗಳಿಸಿದ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.
There have been 11 double hundreds by a captain in Tests in England (four for the hosts, seven for visiting teams).
Only Graeme Smith got there at a younger age than Gill, scoring 277 and 259 in back-to-back Tests at Edgbaston and Lord’s in 2003, the first coming at 22y, 175d.
This is just the second double hundred by an India captain in an overseas Test, after Virat Kohli’s 200 at North Sound in 2016.
Gavaskar 46 ವರ್ಷಗಳ ಹಳೆಯ ದಾಖಲೆ ಪತನ
ಇನ್ನು ಶುಭಮನ್ ಗಿಲ್ ಇಂಗ್ಲೆಂಡ್‌ನಲ್ಲಿ ದ್ವಿಶತಕ ಬಾರಿಸಿದ ಮೊದಲ ಭಾರತೀಯ ನಾಯಕರಾದರು. ಗಿಲ್ 222 ರನ್‌ಗಳ ಗಡಿಯನ್ನು ತಲುಪುತ್ತಿದ್ದಂತೆ, ಅವರು ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಸ್ಕೋರ್ ಗಳಿಸಿದ ಭಾರತದ ಮೊದಲ ಆಟಗಾರರಾದರು. ಆ ಮೂಲಕ ಭಾರತದ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಅವರ 46 ವರ್ಷಗಳ ಹಳೆಯ ದಾಖಲೆ ಮುರಿದರು. 1979 ರಲ್ಲಿ ದಿ ಓವಲ್ ಕ್ರೀಡಾಂಗಣದಲ್ಲಿ ಸುನಿಲ್ ಗವಾಸ್ಕರ್ ಗಳಿಸಿದ 221 ರನ್ ಗಳಿಸಿದ್ದರು.
4 ಕ್ರಿಕೆಟ್ ದಿಗ್ಗಜರ Record ಬ್ರೇಕ್
ಇದೇ ವೇಳೆ ಗಿಲ್ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ ಗರಿಷ್ಠ ರನ್ ಕಲೆ ಹಾಕಿ ಭಾರತದ 4 ಕ್ರಿಕೆಟ್ ದಿಗ್ಗಜರ ದಾಖಲೆಗಳನ್ನು ಬ್ರೇಕ್ ಮಾಡಿದ್ದಾರೆ. ಈ ಹಿಂದೆ 2002ರಲ್ಲಿ ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ (217), 1979ರಲ್ಲಿ ಸುನಿಲ್ ಗವಾಸ್ಕರ್ (221 ರನ್) 2004ರಲ್ಲಿ ಸಚಿನ್ ತೆಂಡೂಲ್ಕರ್ (241) ದಾಖಲೆಗಳನ್ನು ಹಿಂದಿಕ್ಕಿದ್ದಾರೆ.
Elite Group ಸೇರ್ಪಡೆ
ಅಂತೆಯೇ ಗಿಲ್ ಅವರ ಈ ಮೈಲಿಗಲ್ಲು ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ಆರನೇ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ, ಎಂಎಸ್ ಧೋನಿ, ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ಅವರಂತಹ ಅನುಭವಿ ಆಟಗಾರರ ಪಟ್ಟಿಗೆ ಸೇರಿದ್ದಾರೆ. ಈ ಪೈಕಿ ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ ಗರಿಷ್ಛ ಅಂದರೆ 7 ದ್ವಿಶತಕಗಳನ್ನು ಹೊಂದಿದ್ದಾರೆ.
ಮನ್ಸೂರ್ ಅಲಿ ಖಾನ್ ಪಟೌಡಿ
ಸುನಿಲ್ ಗವಾಸ್ಕರ್
ಸಚಿನ್ ತೆಂಡೂಲ್ಕರ್
ಎಂಎಸ್ ಧೋನಿ
ವಿರಾಟ್ ಕೊಹ್ಲಿ (7 ದ್ವಿಶತಕಗಳು)
ಶುಭಮನ್ ಗಿಲ್*
Double hundreds as India Test captain
7 - Virat Kohli
1 - MAK Pataudi, Sunil Gavaskar, Sachin Tendulkar, MS Dhoni, Shubman Gill
Advertisement