
ನವದೆಹಲಿ: ಆಗಸ್ಟ್‌ನಲ್ಲಿ ನಿಗದಿಯಾಗಿದ್ದ ಬಾಂಗ್ಲಾದೇಶ ಪ್ರವಾಸವನ್ನು ಭಾರತ ರದ್ದುಗೊಳಿಸುವ ಸಾಧ್ಯತೆಯಿದೆ. ಕಳೆದ ಕೆಲವು ತಿಂಗಳುಗಳಿಂದ ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಸರಿಯಿಲ್ಲದಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ಬಿಸಿಸಿಐ ಮೂಲಗಳು ಹೇಳಿವೆ.
ಆಗಸ್ಟ್ 17 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಆಗಸ್ಟ್ 26 ರಿಂದ ಮೂರು ಪಂದ್ಯಗಳ ಟಿ-20 ಸರಣಿಯನ್ನು ಭಾರತ ಆಡಬೇಕಾಗಿತ್ತು.
ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಸರಿಯಿಲ್ಲದ ಕಾರಣ ಅಲ್ಲಿಗೆ ತೆರಳದಂತೆ ಸರ್ಕಾರ ಬಿಸಿಸಿಐಗೆ ಸೂಚಿಸಿದೆ. ಹೀಗಾಗಿ ಭಾರತ ತಂಡದ ಬಾಂಗ್ಲಾ ಪ್ರವಾಸ ರದ್ದಾಗುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಈ ಸಂಬಂಧ ಅಧಿಕೃತ ಪ್ರಕಟಣೆ ಇನ್ನೂ ಬಿಡುಗಡೆಯಾಗಿಲ್ಲ.
2024 ರಲ್ಲಿ ಭಾರತವು ಕೊನೆಯದಾಗಿ ಬಾಂಗ್ಲಾದೇಶಕ್ಕೆ ಪ್ರಯಾಣಿಸಿತ್ತು. ಅಲ್ಲಿ ಎರಡೂ ತಂಡಗಳು ಮೂರು ಪಂದ್ಯಗಳ T20I (3-0) ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ (2-0) ಪರಸ್ಪರ ಹೋರಾಡಿದ್ದವು. ಈ ಪ್ರವಾಸದಲ್ಲಿ ಟೆಸ್ಟ್ ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಮಾಡಿತ್ತು. ಟಿ-20 ಸರಣಿಯನ್ನೂ ಗೆದ್ದುಕೊಂಡಿತ್ತು.
ಇದಕ್ಕೂ ಮುನ್ನಾ ಭಾರತವು ಢಾಕಾದಲ್ಲಿನ ದುರ್ಗಾ ದೇವಾಲಯದ ಧ್ವಂಸವನ್ನು ಖಂಡಿಸಿತ್ತು. ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ಪಾತ್ರವನ್ನು ಟೀಕಿಸಿತು.
Advertisement