
ಭಾರತ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ 3 ನೇ ದಿನಾಂತ್ಯಕ್ಕೆ ಭಾರತ 244 ರನ್ ಮುನ್ನಡೆ ಸಾಧಿಸಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 77 ರನ್‌ಗಳಿಂದ ಆಟ ಮುಂದುವರೆಸಿ, 407 ರನ್‌ಗೆ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್ ನಲ್ಲಿ ಭರತ ಒಂದು ವಿಕೆಟ್ ನಷ್ಟಕ್ಕೆ 64 ರನ್ ಗಳಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 587 ರನ್ ಗಳಿಸಿತ್ತು.
ಕೆಎಲ್ ರಾಹುಲ್ 28 ರನ್ ಹಾಗೂ ಕರುಣ್ ನಾಯರ್ 7 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. 22 ಎಸೆತಗಳಲ್ಲಿ 28 ರನ್ ಗಳಿಸಿದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಎಲ್ ಬಿಡಬ್ಲ್ಯು ಗೆ ಔಟ್ ಆದರು.
ದಾಖಲೆ ನಿರ್ಮಿಸಿದ Yashasvi Jaiswal
ಎರಡನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ ದಾಖಲೆ ನಿರ್ಮಿಸಿದ್ದಾರೆ. ಕಡಿಮೆ ರನ್ ಗಳಿಸಿದರೂ ಜೈಸ್ವಾಲ್ ವಿಶೇಷ ಕ್ಲಬ್ ಗೆ ಪ್ರವೇಶ ಪಡೆದಿದ್ದಾರೆ.
ಟೀಮ್ ಇಂಡಿಯಾದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಈ ಇನಿಂಗ್ಸ್ ಆಡುವ ಮುನ್ನ 39 ಇನಿಂಗ್ಸ್‌ಗಳಲ್ಲಿ 1990 ರನ್ ಬಾರಿಸಿದ್ದರು.
ಟೀಮ್ ಇಂಡಿಯಾದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಈ ವರೆಗೂ 39 ಇನಿಂಗ್ಸ್‌ಗಳಲ್ಲಿ 1990 ರನ್ ಗಳಿಸಿದ್ದರು. 2 ಸಾವಿರ ರನ್ ಪೂರ್ಣಗೊಳಿಸಲು 10 ರನ್ ಅವಶ್ಯಕತೆ ಇತ್ತು. 2 ನೇ ಇನ್ನಿಂಗ್ಸ್ ನಲ್ಲಿ ಈ ಗುರಿಯನ್ನು ಪೂರ್ಣಗೊಳಿಸಿರುವ ಜೈಸ್ವಾಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 2000 ರನ್ ಕಲೆ ಹಾಕಿದ ಎಲೈಟ್ ಕ್ಲಬ್‌ಗೆ ಸೇರ್ಪಡೆಯಾಗಿದ್ದಾರೆ.
ಜೈಸ್ವಾಲ್, ಸುನಿಲ್ ಗವಾಸ್ಕರ್, ವಿಜಯ್ ಹಜಾರೆ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಟೀಮ್ ಇಂಡಿಯಾದ ಆಟಗಾರರಾದ ವೀರೇಂದ್ರ ಸೆಹ್ವಾಗ್ ಹಾಗೂ ಟೆಸ್ಟ್ ಸ್ಪೆಷಲಿಸ್ಟ್ ರಾಹುಲ್ ದ್ರಾವಿಡ್ ಇಬ್ಬರೂ 40 ಇನಿಂಗ್ಸ್‌ಗಳಲ್ಲಿ 2 ಸಾವಿರ ರನ್ ಗಳಿಸಿದ್ದರು. ಇದೇ ಎಲೈಟ್ ಕ್ಲಬ್‌ಗೆ ಯಶಸ್ವಿ ಜೈಸ್ವಾಲ್ ಪ್ರವೇಶ ಪಡೆದಿದ್ದಾರೆ.
Advertisement