
ನವದೆಹಲಿ: ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಅವರು ಆರ್‌ಜೆ ಮಹ್ವಾಶ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಕೆಲ ತಿಂಗಳುಗಳಿಂದಲೂ ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. ಧನಶ್ರೀ ವರ್ಮಾ ಅವರಿಂದ ಚಾಹಲ್ ವಿಚ್ಛೇದನ ಪಡೆದ ನಂತರ ಇಬ್ಬರೂ ಅನೇಕ ಬಾರಿ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಚಾಹಲ್ ಮತ್ತು ಮಹ್ವಾಶ್ ಇಬ್ಬರೂ ಇದನ್ನು ನಿರಾಕರಿಸಿದ್ದು, ತಾವಿಬ್ಬರು ಉತ್ತಮ ಸ್ನೇಹಿತರು ಎಂದಿದ್ದಾರೆ.
ನೆಟ್‌ಫ್ಲಿಕ್ಸ್‌ನಲ್ಲಿ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನ ಇತ್ತೀಚಿನ ಸಂಚಿಕೆಯಲ್ಲಿ, ಯುಜ್ವೇಂದ್ರ ಚಹಾಲ್ ಅವರು ಈ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಿಗೂಢ ಹುಡುಗಿಯ ಬಗ್ಗೆ ಕೇಳಿದಾಗ ಅವರು 'ಇಡೀ ದೇಶಕ್ಕೆ ಈಗಾಗಲೇ ತಿಳಿದಿದೆ' ಎಂದು ಹೇಳಿದರು. ಇದೇ ಎಪಿಸೋಡ್‌ನಲ್ಲಿ ಕಾಣಿಸಿಕೊಂಡಿರುವ ಸಹ ಕ್ರಿಕೆಟಿಗ ರಿಷಭ್ ಪಂತ್, ಚಾಹಲ್ ಅವರೀಗ 'ಫ್ರೀ ಮ್ಯಾನ್' ಎಂದಿದ್ದಾರೆ.
ಈ ಸಮಯದಲ್ಲಿ ಕೃಷ್ಣಾ ಅಭಿಷೇಕ್ ಅವರು ಮಹಿಳೆಯ ವೇಷ ಧರಿಸಿ ಚಾಹಲ್ ಅವರ ಪಕ್ಕದಲ್ಲಿ ಕುಳಿತರು ಮತ್ತು ಅವರನ್ನು 'ಜ್ಯೂಸಿ ಚಾಹಲ್' ಎಂದು ಕರೆದರು. ನಂತರ ಅವರು ಕಪಿಲ್ ಶರ್ಮಾ ಅವರನ್ನು ಹುಡುಗಿಯ ದೃಷ್ಟಿಕೋನದಿಂದ ನೋಡಲು ಹೇಳುತ್ತಾರೆ. ಆಗ ಅವರು, 'ಬಹುತ್ ಜ್ಯೂಸಿ ಹೈ' ಎಂದು ಹೇಳಿದರು.
ಆರ್‌ಜೆ ಮಹ್ವಾಶ್ ಜೊತೆಗಿನ ಚಾಹಲ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಬಗ್ಗೆ ಸುಳಿವು ನೀಡಿದ ಕೃಷ್ಣ, 'ನಾನು ಇನ್‌ಸ್ಟಾಗ್ರಾಂನಲ್ಲಿ ನೋಡಿದ್ದೇನೆ, ನೀವು ಹೆಚ್ಚು ಹೆದರಬೇಕಿಲ್ಲ' ಎಂದು ಲೇವಡಿ ಮಾಡಿದರು.
ನಂತರ, ಕಿಕು ಶಾರದಾ ಅವರು ಚಾಹಲ್ ಅವರ ಬ್ಯಾಗ್ ಅನ್ನು ತೆರೆದಂತೆ ನಟಿಸಿ, ಅವರ ಬಿಳಿ ಅಂಗಿಯ ಮೇಲೆ ಲಿಪ್‌ಸ್ಟಿಕ್ ಗುರುತನ್ನು ತೋರಿಸಿ 'ಅವರು ಏನು ಮಾಡುತ್ತಿದ್ದಾರೆ ಯುಜ್ವೇಂದ್ರ ಚಾಹಲ್ ಜೀ? ಅವರು ಯಾರು, ಇಡೀ ದೇಶವು ಅವರು ಯಾರೆಂದು ತಿಳಿಯಲು ಬಯಸುತ್ತದೆ ಎಂದರು. ಆಗ ಚಾಹಲ್, ಇಡೀ ಭಾರತಕ್ಕೆ ಅವರು ಯಾರೆಂದು ಗೊತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಧನಶ್ರೀ ವರ್ಮಾ ಅವರೊಂದಿಗೆ ವಿಚ್ಛೇದನ ಪಡೆಯಲು ಮುಂದಾದ ಬಳಿಕ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ವೇಳೆ ಚಾಹಲ್ ಅವರು ಇನ್‌ಸ್ಟಾಗ್ರಾಂ ಸೆಲೆಬ್ರಿಟಿ ಆರ್‌ಜೆ ಮಹ್ವಾಶ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಅಂದಿನಿಂದ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಊಹಾಪೋಹಗಳು ಕೇಳಿಬಂದಿದ್ದವು.
ಯುಜ್ವೇಂದ್ರ ಚಾಹಲ್ ಮತ್ತು ಆರ್‌ಜೆ ಮಹ್ವಾಶ್ ಕಳೆದ ಒಂದು ವರ್ಷದಿಂದ ಡೇಟಿಂಗ್ ವದಂತಿಗಳಿಗೆ ಆಹಾರವಾಗಿದ್ದಾರೆ. ಐಪಿಎಲ್ 2025ನೇ ಆವೃತ್ತಿಯಲ್ಲಿ ಚಾಹಲ್ ಪ್ರತಿನಿಧಿಸುತ್ತಿದ್ದ ಪಂಜಾಬ್ ಕಿಂಗ್ಸ್ ತಂಡದ ಪಂದ್ಯಗಳು ಇದ್ದ ವೇಳೆ ಮಹ್ವಾಶ್ ಕಾಣಿಸಿಕೊಳ್ಳುತ್ತಿದ್ದರು. ಚಾಹಲ್ ಗಾಯದಿಂದಾಗಿ ಪಂದ್ಯದಿಂದ ಹೊರಗುಳಿದಾಗಲೂ ಅವರು ತಂಡವನ್ನು ಬೆಂಬಲಿಸುತ್ತಿದ್ದರು.
ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಮಾರ್ಚ್ 20 ರಂದು ವಿಚ್ಛೇಧನ ಪಡೆದುಕೊಂಡರು. ಅಂದಿನಿಂದ ಚಾಹಲ್ ಮತ್ತು ಮಹ್ವಾಶ್ ಹಲವು ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಂಡರು.
Advertisement