ಭಾರತದ ವಿರುದ್ಧ ಸೋಲಿಗೆ ಬೆನ್ ಸ್ಟೋಕ್ಸ್ ನಿರ್ಧಾರವೇ ಕಾರಣ: ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕಲಮ್ ಆರೋಪ

ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು ಆತಿಥೇಯ ತಂಡಕ್ಕೆ 336 ರನ್‌ಗಳ ಬೃಹತ್ ಸೋಲುಣಿಸಿತು.
Brendon MCCullum
ಬ್ರೆಂಡನ್ ಮೆಕಲಮ್
Updated on

ಇಂಗ್ಲೆಂಡ್ vs ಭಾರತ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡುವ ನಿರ್ಧಾರವು ಆತಿಥೇಯ ತಂಡಕ್ಕೆ ನಷ್ಟವನ್ನುಂಟುಮಾಡಿತು ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಹೇಳಿದ್ದಾರೆ. ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು ಆತಿಥೇಯ ತಂಡಕ್ಕೆ 336 ರನ್‌ಗಳ ಬೃಹತ್ ಸೋಲುಣಿಸಿತು. ಟಾಸ್ ವೇಳೆ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಬೆನ್ ಸ್ಟೋಕ್ಸ್ ಅವರ ನಿರ್ಧಾರವು ಅನೇಕ ತಜ್ಞರನ್ನು ಗೊಂದಲಕ್ಕೀಡು ಮಾಡಿತು ಮತ್ತು ಸೋಲಿನ ನಂತರ, ಇಂಗ್ಲೆಂಡ್ ತಪ್ಪು ಮಾಡಿದೆ ಎಂದು ಮೆಕಲಮ್ ಒಪ್ಪಿಕೊಂಡರು.

ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೆಕಲಮ್, ವಿಕೆಟ್ ಈ ರೀತಿ ವರ್ತಿಸುತ್ತದೆ ಎಂದು ತಂಡ ನಿರೀಕ್ಷಿಸಿರಲಿಲ್ಲ ಮತ್ತು ಅವರು ಅದನ್ನು ತಪ್ಪಾಗಿ ಗ್ರಹಿಸಿದ್ದರು. ಭಾರತವು ಐದು ವಿಕೆಟ್ ನಷ್ಟಕ್ಕೆ 200 ಗಳಿಸಿದ್ದಾಗ ಇಂಗ್ಲೆಂಡ್ ಲಾಭ ಮಾಡಿಕೊಳ್ಳುವಲ್ಲಿ ವಿಫಲವಾಯಿತು ಎಂದು ಅವರು ಗಮನಸೆಳೆದರು.

'ಪಂದ್ಯ ಸಾಗುತ್ತಿರುವ ಗತಿಯನ್ನು ಗಮನಿಸಿದಾಗ ಟಾಸ್‌ನಲ್ಲಿ ತೆಗೆದುಕೊಂಡ ನಿರ್ಧಾರವನ್ನು ಮರುಪರಿಶೀಲಿಸಿದೆವು. ಟಾಸ್‌ ವೇಳೆ ಬ್ಯಾಟಿಂಗ್ ಆಯ್ದುಕೊಂಡಿದ್ದರೆ ಗೆಲ್ಲಲು ಉತ್ತಮ ಅವಕಾಶ ಸಿಗುತ್ತಿತ್ತು. ಇದು ಬಹುಶಃ ನ್ಯಾಯಯುತವಾಗಿದೆ. ವಿಕೆಟ್ ಆ ರೀತಿ ವರ್ತಿಸುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ. ನಮ್ಮ ನಿರ್ಧಾರವು ಬಹುಶಃ ತಪ್ಪಾಗಿರಬಹುದು. ಆದರೆ, ನಾವು ಅವರನ್ನು 5 ವಿಕೆಟ್‌ ನಷ್ಟಕ್ಕೆ 200 ರನ್‌ಗಳಿಗೆ ಕಟ್ಟಿಹಾಕಿದ್ದೆವು ಮತ್ತು ನಾವು ಆ ಅವಕಾಶವನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದಾಗ ನೀವು ವಿಶ್ವಾಸದಲ್ಲಿರುತ್ತೀರಿ. ಆದರೆ, ಎದುರಾಳಿ ತಂಡವು 580 ರನ್ ಗಳಿಸುತ್ತದೆ ಎಂದು ನೀವು ನಿರೀಕ್ಷಿಸಿರುವುದಿಲ್ಲ ಮತ್ತು ಅಲ್ಲಿಂದಲೇ ನಾವು ಪಂದ್ಯದಿಂದ ಹಿಂದೆ ಉಳಿದೆವು' ಎಂದು ಮೆಕಲಮ್ ಹೇಳಿದರು.

Brendon MCCullum
India vs England, 2nd test: ಇಂಗ್ಲೆಂಡ್ ನೆಲದಲ್ಲಿ ಭಾರತಕ್ಕೆ 336 ರನ್ ಗೆಲುವು

ಇಂಗ್ಲೆಂಡ್ vs ಭಾರತ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಶ್ಲಾಘನೀಯ ಪ್ರದರ್ಶನ ಹ್ಯಾರಿ ಬ್ರೂಕ್ ಮತ್ತು ಜೇಮೀ ಸ್ಮಿತ್ ಅವರ ಜೊತೆಯಾಟದಿಂದ ಬಂದಿದೆ. ಇಂಗ್ಲೆಂಡ್ ತನ್ನ ತಂತ್ರಗಳನ್ನು ಅಳವಡಿಸಿಕೊಂಡರೂ, ಪಂದ್ಯದ ನಂತರ ಬ್ಯಾಟಿಂಗ್ ಸುಲಭವಾಗುತ್ತದೆ ಎಂಬ ಅವರ ನಿರೀಕ್ಷೆ ತಪ್ಪಾಯಿತು. ಈ ಪಿಚ್ ವೇಗಿಗಗಳಿಗೆ ಕಷ್ಟಕರವಾಗಿದ್ದರೂ, ಆಕಾಶ್ ದೀಪ್ ಉತ್ತಮ ಲೆಂತ್‌ನಲ್ಲಿ ಬೌಲಿಂಗ್ ಮಾಡಿದರು ಎಂದು ಪ್ರಶಂಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com