ಟೆಸ್ಟ್‌ಗೆ ಮರಳಿದ ಬುಮ್ರಾ ಹಲವು ದಾಖಲೆ: 5 ವಿಕೆಟ್ ಗೊಂಚಲು, ಕಪಿಲ್ ದಾಖಲೆ ಉಡೀಸ್; ವಿಶ್ವದ ಮೊದಲ ಆಟಗಾರ!

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಟೆಸ್ಟ್ ಸರಣಿಯ ಮೂರನೇ ಪಂದ್ಯ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿದೆ. ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ವಿಶ್ರಾಂತಿ ಪಡೆದ ನಂತರ, ಬುಮ್ರಾ ಲಾರ್ಡ್ಸ್ ಟೆಸ್ಟ್‌ಗೆ ಮರಳಿದ್ದು ಹಲವು ದಾಖಲೆಗಳನ್ನು ಬರೆದಿದ್ದಾರೆ.
Jasprit bumrah
ಜಸ್ ಪ್ರೀತ್ ಬುಮ್ರಾ
Updated on

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಟೆಸ್ಟ್ ಸರಣಿಯ ಮೂರನೇ ಪಂದ್ಯ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿದೆ. ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ವಿಶ್ರಾಂತಿ ಪಡೆದ ನಂತರ, ಬುಮ್ರಾ ಲಾರ್ಡ್ಸ್ ಟೆಸ್ಟ್‌ಗೆ ಮರಳಿದ್ದಾರೆ. ಪಂದ್ಯದ ಮೊದಲ ದಿನದಂದು, ಬುಮ್ರಾ ಉತ್ತಮ ಪ್ರದರ್ಶನ ನೀಡಲಿಲ್ಲ. ಕೇವಲ ಒಂದು ವಿಕೆಟ್ ಪಡೆದಿದ್ದರು. ಆದರೆ ಎರಡನೇ ದಿನ ನಾಲ್ಕು ವಿಕೆಟ್ ಪಡೆದಿದ್ದು, ಹಲವು ದಾಖಲೆ ಬರೆದಿದ್ದಾರೆ. ಬುಮ್ರಾ 5 ವಿಕೆಗಳ ಗೊಂಚಲನ್ನು ಪಡೆದರು. ಈ ಪಂದ್ಯದಲ್ಲಿ ಜೋ ರೂಟ್ ಶತಕ ಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದರು. ನಂತರ ಜಸ್ಪ್ರೀತ್ ಬುಮ್ರಾ ಅವರ ಓಟಕ್ಕೆ ಲಗಾಮು ಹಾಕಿದರು. ಜೋ ರೂಟ್ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದ ಎಂಟನೇ ಶತಕ ಮತ್ತು ಲಾರ್ಡ್ಸ್ ಮೈದಾನದಲ್ಲಿ ಒಟ್ಟಾರೆ 37 ನೇ ಶತಕವನ್ನು ಗಳಿಸಿದರು. ಆದರೆ ರೂಟ್ ಶತಕದ ನಂತರ ದೊಡ್ಡ ಇನ್ನಿಂಗ್ಸ್ ಆಡುವ ಮೊದಲು, ಜಸ್ಪ್ರೀತ್ ಬುಮ್ರಾ ಜೋ ರೂಟ್ ಅವರನ್ನು 104 ರನ್ ಗಳಿಗೆ ಔಟ್ ಮಾಡುವ ಮೂಲಕ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆಯನ್ನು ಮಾಡಿದರು.

ಲಾರ್ಡ್ಸ್ ಮೈದಾನದಲ್ಲಿ ಇನ್ನಿಂಗ್ಸ್‌ನ 88ನೇ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ ಜೋ ರೂಟ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಇದರಿಂದಾಗಿ ರೂಟ್ 199 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ 104 ರನ್ ಗಳಿಸಿದ ನಂತರ ಔಟ್ ಆದರು. ಬುಮ್ರಾ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಜೋ ರೂಟ್ ಅವರನ್ನು ಔಟ್ ಮಾಡಿದ ಬೌಲರ್ ಎನಿಸಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅವರನ್ನು 11ನೇ ಬಾರಿಗೆ ಔಟ್ ಮಾಡಿದ್ದಾರೆ. ರೂಟ್ ಅವರನ್ನು ಔಟ್ ಮಾಡುವ ವಿಷಯದಲ್ಲಿ ಬುಮ್ರಾ ಪ್ಯಾಟ್ ಕಮ್ಮಿನ್ಸ್‌ಗೆ ಸಮನಾಗಿದ್ದಾರೆ. ಆಸ್ಟ್ರೇಲಿಯಾದ ನಾಯಕ ಕಮ್ಮಿನ್ಸ್ ಕೂಡ 31 ಇನ್ನಿಂಗ್ಸ್‌ಗಳಲ್ಲಿ 11 ಬಾರಿ ರೂಟ್ ಅನ್ನು ಔಟ್ ಮಾಡಿದ್ದಾರೆ. ಆದರೆ ಬುಮ್ರಾ ಕೇವಲ 27ನೇ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಜಸ್ಪ್ರೀತ್ ಬುಮ್ರಾ ಅವರಂತಹ ಮಾರಕ ಬೌಲರ್ ಈಗ ಜಗತ್ತಿನಲ್ಲಿ ಇಲ್ಲ. ಜಸ್ಪ್ರೀತ್ ಬುಮ್ರಾ ಇತಿಹಾಸ ಸೃಷ್ಟಿಸಿದರು. ಲಾರ್ಡ್ಸ್‌ನಲ್ಲಿ ಅದ್ಭುತ ಸಾಧನೆ ಮಾಡಿದ್ದು ಕಪಿಲ್ ದೇವ್ ಅವರ ದಾಖಲೆಯನ್ನು ಮುರಿದಿದ್ದಾರೆ. ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಭಾರತೀಯ ಬೌಲರ್‌ಗಳ ಬಗ್ಗೆ ಮಾತನಾಡಿದರೆ, ಇಶಾಂತ್ ಶರ್ಮಾ ಮೊದಲಿಗರು. ಅವರು ಇಂಗ್ಲೆಂಡ್‌ನಲ್ಲಿ 15 ಟೆಸ್ಟ್ ಪಂದ್ಯಗಳಲ್ಲಿ 51 ವಿಕೆಟ್‌ಗಳನ್ನು ಪಡೆದಿದ್ದಾರೆ. 2011 ರಿಂದ 2021 ರವರೆಗೆ ಭಾರತಕ್ಕಾಗಿ ಟೆಸ್ಟ್ ಆಡಿದ ಇಶಾಂತ್ ಇನ್ನೂ ನಿವೃತ್ತಿ ಹೊಂದಿಲ್ಲ. ಜಸ್ಪ್ರೀತ್ ಬುಮ್ರಾ ಈಗ ಈ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಂದಿದ್ದಾರೆ.

Jasprit bumrah
Video: 'Baz, Baz, Bazball.. ಅಂತಿದ್ರಲ್ಲಾ.. ಎಲ್ಲಿ ಆಡಿ ನೋಡೋಣ', 'ಬೋರಿಂಗ್ ಟೆಸ್ಟ್ ಗೆ ಸ್ವಾಗತ': ಆಂಗ್ಲರ ಕಾಲೆಳೆದ Team India

ಇಂಗ್ಲೆಂಡ್‌ನಲ್ಲಿ 11 ಟೆಸ್ಟ್ ಪಂದ್ಯಗಳನ್ನು ಆಡುವ ಮೂಲಕ ಅವರು ಇಲ್ಲಿಯವರೆಗೆ 46 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಸರಣಿಯಲ್ಲಿ ಬುಮ್ರಾ ಇಶಾಂತ್ ಶರ್ಮಾ ಅವರನ್ನು ಹಿಂದಿಕ್ಕುವ ಅವಕಾಶವಿದೆ. ಆದಾಗ್ಯೂ, ಅವರು ಈಗಾಗಲೇ ಕಪಿಲ್ ದೇವ್ ಅವರನ್ನು ಹಿಂದಿಕ್ಕಿದ್ದಾರೆ. ಕಪಿಲ್ ದೇವ್ ಇಂಗ್ಲೆಂಡ್‌ನಲ್ಲಿ 13 ಟೆಸ್ಟ್ ಪಂದ್ಯಗಳನ್ನು ಆಡುವ ಮೂಲಕ 43 ವಿಕೆಟ್‌ಗಳನ್ನು ಪಡೆದಿದ್ದರು. ಈಗ ಅವರು ಮೂರನೇ ಸ್ಥಾನಕ್ಕೆ ಹೋಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com