
ಲಂಡನ್: ಇಂಗ್ಲೆಂಡ್ ಮತ್ತು ಭಾರತ ನಡುವಿನ ಮೂರನೇ ಟೆಸ್ಟ್ ಪಂದ್ಯ ಲೀಡ್ಸ್ ನಲ್ಲಿ ನಡೆಯುತ್ತಿದೆ. ವಾಷಿಂಗ್ಟನ್ ಸುಂದರ್ ಮಾರಣಾಂತಿಕ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ತತ್ತರಿಸಿದ್ದು 2ನೇ ಇನ್ನಿಂಗ್ಸ್ ನಲ್ಲಿ 192 ರನ್ ಗಳಿಗೆ ಆಲೌಟ್ ಆಗಿದ್ದು ಭಾರತಕ್ಕೆ ಗೆಲ್ಲಲು 193 ರನ್ ಗಳ ಸಾಧಾರಣ ಮೊತ್ತ ನೀಡಿತ್ತು. ಈ ರನ್ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿದೆ. ನಾಲ್ಕನೇ ದಿನದಾಟದಂತ್ಯಕ್ಕೆ ಭಾರತ 58 ರನ್ ಗಳಿಗೆ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡಿದೆ. ಭಾರತ ಗೆಲ್ಲಲು ಇನ್ನು 135 ರನ್ ಬಾರಿಸಬೇಕಿದೆ.
ಲಾರ್ಡ್ಸ್ ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯ ಅಂತಿಮಘಟ್ಟಕ್ಕೆ ಬಂದು ತಲುಪಿದೆ. 193 ನರ್ ಗುರಿ ಬೆನ್ನಟ್ಟಿದ ಭಾರತ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿದೆ. ಭಾರತದ ಪರ ಜೈಸ್ವಾಲ್ ಶೂನ್ಯಕ್ಕೆ ಔಟಾದರೆ, ಕರುಣ್ ನಾಯರ್ 14, ಶುಭ್ಮನ್ ಗಿಲ್ 6 ಹಾಗೂ ಅಕಾಶ್ ದೀಪ್ 1 ರನ್ ಗೆ ಔಟಾಗಿದ್ದಾರೆ. ಇನ್ನು ಕನ್ನಡಿಗ ಕೆಎಲ್ ರಾಹುಲ್ ಅಜೇಯ 33 ರನ್ ಗಳಿಸಿದ್ದು ಐದನೇ ದಿನದಾಟವನ್ನು ಆರಂಭಿಸಲಿದ್ದಾರೆ.
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 387 ರನ್ ಗಳಿಸಿತ್ತು. ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಸಹ 387 ರನ್ ಗಳಿಗೆ ಆಲೌಟ್ ಆಯಿತು. ಇನ್ನು ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಬ್ಯಾಟರ್ ಗಳನ್ನು ಭಾರತೀಯ ಬೌಲರ್ ಗಳು ಕಾಡಿದರು. ನಾಲ್ಕನೇ ದಿನದಂದು ಇಂಗ್ಲೆಂಡ್ 192 ರನ್ ಗಳಿಗೆ ಆಲೌಟ್ ಆಯಿತು. ಇನ್ನು ಭಾರತ ಈ ಟೆಸ್ಟ್ ಪಂದ್ಯ ಗೆಲ್ಲಲು 193 ರನ್ ಸಿಡಿಸಬೇಕಿದೆ. ಭಾರತದ ಪರ ವಾಷಿಂಗ್ಟನ್ ಸುಂದರ್ 4 ವಿಕೆಟ್, ಜಸ್ ಪ್ರೀತ್ ಬುಮ್ರಾ ಮತ್ತು ಸಿರಾಜ್ ತಲಾ 2 ವಿಕೆಟ್ ಪಡೆದಿದ್ದಾರೆ.
Advertisement