Asia Cup 2025: ಸೆಪ್ಟೆಂಬರ್ 14ರಂದು ಭಾರತ-ಪಾಕ್ ಮುಖಾಮುಖಿ; ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿ!

ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಸೆಪ್ಟೆಂಬರ್ 14ರಂದು ಮುಖಾಮುಖಿಯಾಗಲಿವೆ. ಈ ಎರಡೂ ತಂಡಗಳು ಸೂಪರ್ ಫೋರ್ ಹಂತದಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿದ್ದು ಈ ಪಂದ್ಯ ಸೆಪ್ಟೆಂಬರ್ 21 ರಂದು ನಡೆಯಲಿದೆ.
India vs Pakistan
ಭಾರತ ವರ್ಸಸ್ ಪಾಕಿಸ್ತಾನ
Updated on

ನವದೆಹಲಿ: ಈ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯಾಕಪ್‌ನಲ್ಲಿ (Asia Cup 2025) ಭಾರತ ಮತ್ತು ಪಾಕಿಸ್ತಾನ ಸೆಪ್ಟೆಂಬರ್ 14 ರಂದು ಮುಖಾಮುಖಿಯಾಗಲಿವೆ. ಈ ಎರಡೂ ತಂಡಗಳು ಸೂಪರ್ ಫೋರ್ ಹಂತದಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿದ್ದು ಈ ಪಂದ್ಯ ಸೆಪ್ಟೆಂಬರ್ 21 ರಂದು ನಡೆಯಲಿದೆ. ಏಷ್ಯಾಕಪ್ ಸೆಪ್ಟೆಂಬರ್ 9 ರಿಂದ 28 ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಲ್ಲಿ ನಡೆಯಲಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಮೊಹ್ಸಿನ್ ನಖ್ವಿ ಘೋಷಿಸಿದರು.

ಟೂರ್ನಮೆಂಟ್‌ನಲ್ಲಿ ಭಾರತ (India) ಮತ್ತು ಪಾಕಿಸ್ತಾನ (Pakistan) ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ಈ ಪಂದ್ಯವು ಸೆಪ್ಟೆಂಬರ್ 14 ರಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ವೇಳಾಪಟ್ಟಿಯ ಪ್ರಕಾರ, ಭಾರತ ತಂಡವು ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸುತ್ತದೆ. ಪಂದ್ಯಾವಳಿಯಲ್ಲಿರುವ ಎಂಟು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪು ಎ ನಲ್ಲಿ ಭಾರತ, ಪಾಕಿಸ್ತಾನ, ಯುಎಇ ಮತ್ತು ಓಮನ್, ಇನ್ನು ಗುಂಪು ಬಿ ನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ತಂಡಗಳಿದ್ದು ಎಲ್ಲಾ ಪಂದ್ಯಗಳನ್ನು ದುಬೈ ಮತ್ತು ಅಬುಧಾಬಿಯಲ್ಲಿ ನಡೆಯಲಿವೆ.

ಏಷ್ಯಾ ಕಪ್ 2025 ವೇಳಾಪಟ್ಟಿ

ಸೆಪ್ಟೆಂಬರ್ 9: ಅಫ್ಘಾನಿಸ್ತಾನ vs ಹಾಂಗ್ ಕಾಂಗ್

ಸೆಪ್ಟೆಂಬರ್ 10: ಭಾರತ vs ಯುಎಇ

ಸೆಪ್ಟೆಂಬರ್ 11: ಬಾಂಗ್ಲಾದೇಶ vs ಹಾಂಗ್ ಕಾಂಗ್

ಸೆಪ್ಟೆಂಬರ್ 12: ಪಾಕಿಸ್ತಾನ vs ಓಮನ್

ಸೆಪ್ಟೆಂಬರ್ 13: ಬಾಂಗ್ಲಾದೇಶ vs ಶ್ರೀಲಂಕಾ

ಸೆಪ್ಟೆಂಬರ್ 14: ಭಾರತ vs ಪಾಕಿಸ್ತಾನ

ಸೆಪ್ಟೆಂಬರ್ 15: ಶ್ರೀಲಂಕಾ vs ಹಾಂಗ್ ಕಾಂಗ್

ಸೆಪ್ಟೆಂಬರ್ 15: ಯುಎಇ vs ಓಮನ್

ಸೆಪ್ಟೆಂಬರ್ 16: ಬಾಂಗ್ಲಾದೇಶ vs ಅಫ್ಘಾನಿಸ್ತಾನ

ಸೆಪ್ಟೆಂಬರ್ 17: ಪಾಕಿಸ್ತಾನ vs ಯುಎಇ

ಸೆಪ್ಟೆಂಬರ್ 18: ಶ್ರೀಲಂಕಾ vs ಅಫ್ಘಾನಿಸ್ತಾನ

ಸೆಪ್ಟೆಂಬರ್ 19: ಭಾರತ vs ಓಮನ್

India vs Pakistan
IND vs ENG: 7 ವರ್ಷಗಳ ಟೆಸ್ಟ್ ವೃತ್ತಿಜೀವನದಲ್ಲಿ ಅನಗತ್ಯ 'ಶತಕ'; ಜಸ್ಪ್ರೀತ್ ಬುಮ್ರಾ ಕಳಪೆ ದಾಖಲೆ!

ಸೂಪರ್ ಫೋರ್ ವೇಳಾಪಟ್ಟಿ

ಸೆಪ್ಟೆಂಬರ್ 20, ಬಿ 1 vs ಬಿ 2

ಸೆಪ್ಟೆಂಬರ್ 21, ಎ 1 vs ಎ 2 (ಭಾರತ vs ಪಾಕಿಸ್ತಾನ)

ಸೆಪ್ಟೆಂಬರ್ 23, ಎ 2 vs ಬಿ 1

ಸೆಪ್ಟೆಂಬರ್ 24, ಎ 1 vs ಬಿ 2

ಸೆಪ್ಟೆಂಬರ್ 25, ಎ 2 vs ಬಿ 2

ಸೆಪ್ಟೆಂಬರ್ 26, ಎ 1 vs ಬಿ 1

ಸೆಪ್ಟೆಂಬರ್ 28, ಫೈನಲ್ ಪಂದ್ಯ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com