Cricket: ಇಂಗ್ಲೆಂಡ್ ವಿರುದ್ಧ ಹಲವು ದಾಖಲೆ ಮುರಿದ KL Rahul-Shubman Gill; 46 ವರ್ಷಗಳ ಬಳಿಕ ಇದೇ ಮೊದಲು!

ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಮೊದಲ ಇನ್ನಿಂಗ್ಸ್ 358 ರನ್‌ಗಳಿಗೆ ಸರ್ವಪತನ ಕಂಡಿತು.
KL Rahul-Shubman Gill Brokes many records
ಶುಭ್ ಮನ್ ಗಿಲ್ ಮತ್ತು ಕೆಎಲ್ ರಾಹುಲ್
Updated on

ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ 2ನೇ ಇನ್ನಿಂಗ್ಸ್ ನಲ್ಲಿ ಸಂಕಷ್ಟದಲ್ಲಿದ್ದ ಭಾರತ ತಂಡವನ್ನು ಪಾರು ಮಾಡಿದ ಕೆಎಲ್ ರಾಹುಲ್ ಮತ್ತು ನಾಯಕ ಶುಭ್ ಮನ್ ಗಿಲ್ ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಹಲವು ದಾಖಲೆಗಳನ್ನು ಮುರಿದಿದ್ದಾರೆ.

ಹೌದು.. ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಮೊದಲ ಇನ್ನಿಂಗ್ಸ್ 358 ರನ್‌ಗಳಿಗೆ ಸರ್ವಪತನ ಕಂಡಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 669 ರನ್ ಗಳಿಸಿ 311 ರನ್‌ಗಳ ಮುನ್ನಡೆ ಸಾಧಿಸಿತು. ಆ ಮೂಲಕ ಇಂಗ್ಲೆಂಡ್ 311 ರನ್ ಗಳ ಬೃಹತ್ ಮುನ್ನಡೆ ಸಾಧಿಸಿತು.

311 ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಕೇವಲ 1 ರನ್ ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಭಾರತಕ್ಕೆ ಮೊದಲ ಓವರ್ ನಲ್ಲೇ ಎರಡು ಆಘಾತ ಎದುರಾಯಿತು. ನಾಲ್ಕನೇ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಔಟಾದರೆ ಐದನೇ ಎಸೆತದಲ್ಲಿ ಸಾಯಿ ಸುದರ್ಶನ್ ಔಟಾದರು.

ಈ ವೇಳೆ ತಂಡಕ್ಕೆ ಆಸರೆಯಾಗಿದ್ದು ಕೆಎಲ್ ರಾಹುಲ್ ಹಾಗೂ ಶುಭಮನ್ ಗಿಲ್. ಈ ಜೋಡಿ ಮುರಿಯದ 3ನೇ ವಿಕೆಟ್ ಗೆ 173ರನ್ ಜೊತೆಯಾಟವಾಡಿತು. ಈ ಪೈಕಿ ಗಿಲ್ 78 ರನ್ ಗಳಿಸಿದರೆ, ಕೆಎಲ್ ರಾಹುಲ್ 87ರನ್ ಗಳಿಸಿ ಶತಕಕ್ಕೆ ಸನಿಹರಾಗಿದ್ದಾರೆ.

KL Rahul-Shubman Gill Brokes many records
IND vs ENG: ಶೂನ್ಯಕ್ಕೆ 2 ವಿಕೆಟ್ ಕಳೆದುಕೊಂಡ ಭಾರತಕ್ಕೆ ಗಿಲ್, ಕೆ.ಎಲ್ ರಾಹುಲ್ ಆಸರೆ; ಅರ್ಧಶತಕ ಗಳಿಸಿದ ಬ್ಯಾಟರ್ಸ್!

ಹಲವು ದಾಖಲೆಗಳ ಸೃಷ್ಟಿ

ಈ ಅದ್ಭುತ ಇನ್ನಿಂಗ್ಸ್ ಮೂಲಕ ಉಭಯ ಆಟಗಾರರು ಹಲವು ದಾಖಲೆಗಳನ್ನು ಸೃಷ್ಟಿ ಮಾಡಿದ್ದಾರೆ. ಈ ಪೈಕಿ ಕೆಎಲ್ ರಾಹುಲ್ ಮತ್ತು ಗಿಲ್ ವೈಯುಕ್ತಿಕ ದಾಖಲೆಗಳ ಜೊತೆಗೆ ಜೊತೆಯಾಟದ ದಾಖಲೆಗಳಿಗೂ ಪಾತ್ರರಾಗಿದ್ದಾರೆ.

ವಿದೇಶಿ ಟೆಸ್ಟ್ ಸರಣಿಯಲ್ಲಿ ಗರಿಷ್ಠ ರನ್

ಇನ್ನು ಈ ಸರಣಿಯಲ್ಲಿ ಭಾರತ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ಕೆಎಲ್ ರಾಹುಲ್ ಈ ವರೆಗೂ 508 ರನ್ ಗಳಿಸಿದ್ದು, ಆ ಮೂಲಕ ವಿದೇಶಿ ಟೆಸ್ಟ್ ಸರಣಿಯಲ್ಲಿ ಗರಿಷ್ಠ ರನ್ ಪೇರಿಸಿದ ಭಾರತದ 2ನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ 2 ಬಾರಿ ಗರಿಷ್ಟ ರನ್ ಪೇರಿಸಿದ್ದು, 1971ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 774ರನ್ ಮತ್ತು 1979ರಲ್ಲಿ ಇಂಗ್ಲೆಂಡ್ ವಿರುದ್ಧ 542 ರನ್ ಕಲೆ ಹಾಕಿದ್ದಾರೆ. ಈ ಪಟ್ಟಿಗೆ ಇದೀಗ ಕೆಎಲ್ ರಾಹುಲ್ ಸೇರಿದ್ದಾರೆ.

Indian openers with 500-plus runs in an Away Test series

  • 774 - Sunil Gavaskar in WI, 1971

  • 542 - Sunil Gavaskar in ENG, 1979

  • 508* - KL Rahul in ENG, 2025 *

ಒಂದೇ ಸರಣಿಯಲ್ಲಿ ಹೆ್ಚ್ಚ ಆಟಗಾರರಿಂದ 500ಕ್ಕೂ ಹೆಚ್ಚು ರನ್ ಗಳಿಕೆ

ಇನ್ನು ಇದೇ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತದ ಕೆಎಲ್ ರಾಹುಲ್ (508) ಮತ್ತು ಶುಭ್ ಮನ್ ಗಿಲ್ (697) 500ಕ್ಕೂ ಹೆಚ್ಚು ರನ್ ಕಲೆಹಾಕಿದ್ದು, ಆ ಮೂಲಕ ವಿದೇಶಿ ಟೆಸ್ಟ್ ಸರಣಿಯಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ 2ನೇ ಜೋಡಿ ಎಂಬ ಕೀರ್ತಿಗೆ ಭಾಜನವಾಗಿದೆ. ಈ ಹಿಂದೆ 1970-71ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತದ ಸುನಿಲ್ ಗವಾಸ್ಕರ್ (774) ಮತ್ತು ದಿಲೀಪ್ ಸರ್ದೇಸಾಯಿ (642) ಈ ಸಾಧನೆ ಮಾಡಿದ್ದರು.

Multiple Indian batters with 500-plus in the same Away Test series

  • Sunil Gavaskar (774) & Dilip Sardesai (642) vs WI, 1970-71

  • Shubman Gill (697*) & KL Rahul (508*) vs ENG, 2025*

46 ವರ್ಷಗಳ ಬಳಿಕ ಇದೇ ಮೊದಲು!

ಇನ್ನು ಈ ಟೂರ್ನಿಯಲ್ಲಿ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿದು 500ಕ್ಕೂ ಅಧಿಕ ರನ್ ಗಳಿಸಿದ ಏಷ್ಯಾದ 2ನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಪಟ್ಟಿಯಲ್ಲಿ ಸುನಿಲ್ ಗವಾಸ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಗವಾಸ್ಕರ್ 1979ರಲ್ಲಿ ಈ ಸಾಧನೆ ಮಾಡಿದ್ದರು. ಈ ಮೂಲಕ 46 ವರ್ಷಗಳ ಬಳಿಕ ವಿದೇಶಿ ಟೆಸ್ಟ್ ಸರಣಿಯಲ್ಲಿ ಆರಂಭಿಕ ಆಟಗಾರನೊಬ್ಬ 500ಕ್ಕೂ ಅಧಿಕ ರನ್ ಗಳಿಸಿದ್ದು ಇದೇ ಮೊದಲು.

KL Rahul becomes the second Asian opener to aggregate 500-plus runs in a Test series in England, after Sunil Gavaskar (542 in 1979). He’s also the second visiting opener to do that in the country in the 21st century after Graeme Smith (714 runs in 2003).

ಶುಭ್ ಮನ್ ಗಿಲ್ ದಾಖಲೆ

ಇನ್ನು ಇದೇ ಸರಣಿಯಲ್ಲಿ ಭಾರತ ತಂಡದ ನಾಯಕ ಶುಭ್ ಮನ್ ಗಿಲ್ 632 ರನ್ ಗಳಿಸಿದ್ದು ಆ ಮೂಲಕ ವಿದೇಶಿ ಟೆಸ್ಟ್ ಸರಣಿಯಲ್ಲಿ ಗರಿಷ್ಠ ರನ್ ಗಳಿಸಿದ ಮೊದಲ ಏಷ್ಯನ್ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಪಟ್ಟಿಯಲ್ಲಿ 631 ರನ್ ಗಳೊಂದಿಗೆ ಮಹಮದ್ ಯೂಸುಫ್ 2ನೇ ಸ್ಥಾನಕ್ಕೆ ಕುಸಿದಿದ್ದು, 602 ರನ್ ಗಳೊಂದಿಗೆ ರಾಹುಲ್ ದ್ರಾವಿಡ್ 3ನೇ ಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com