Gavaskar and Kohli Images
ಸುನೀಲ್ ಗವಾಸ್ಕರ್, ಕೊಹ್ಲಿ ಸಾಂದರ್ಭಿಕ ಚಿತ್ರ

RCB ಚೊಚ್ಚಲ ಟ್ರೋಫಿ ಗೆಲುವಲ್ಲಿ ವರವಾದ 'ಇ ಸಲ ಕಪ್ ನಮ್ದೇ' ಘೋಷಣೆ! ಸುನೀಲ್ ಗವಾಸ್ಕರ್ ಹೇಳಿದ್ದು ಹೀಗೆ..

ಪ್ರತಿ ಬಾರಿ ಅಭಿಮಾನಿಗಳು ಈ ಸಲ ಕಪ್‌ ನಮ್ದೇ ಎಂದು ಹೇಳಿಕೊಂಡೇ ಬರುತ್ತಿದ್ದರು. ಬೀದಿ ಬೀದಿಗಳಲ್ಲಿ ಅಭಿಮಾನಿಗಳು ಈ ಸಲ ಕಪ್‌ ನಮ್ದೇ ಎಂದು ಕೂಗಿ ಬೆಂಬಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
Published on

ಬೆಂಗಳೂರು: 18 ವರ್ಷಗಳ ಬಳಿಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್‌ ಕಪ್‌ ಗೆದ್ದಿರುವುದರಲ್ಲಿ “ಈ ಸಲ ಕಪ್‌ ನಮ್ದೆ” ಎಂಬ ಘೋಷ ವಾಕ್ಯವೂ ವರವಾಗಿದೆ.

ಹೌದು. ಪ್ರತಿ ಬಾರಿ ಅಭಿಮಾನಿಗಳು ಈ ಸಲ ಕಪ್‌ ನಮ್ದೇ ಎಂದು ಹೇಳಿಕೊಂಡೇ ಬರುತ್ತಿದ್ದರು. ಬೀದಿ ಬೀದಿಗಳಲ್ಲಿ ಅಭಿಮಾನಿಗಳು ಈ ಸಲ ಕಪ್‌ ನಮ್ದೇ ಎಂದು ಕೂಗಿ ಬೆಂಬಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕೊನೆಗೂ ಅಭಿಮಾನಿಗಳ ಆಸೆ ಈಡೇರಿದೆ. ಇದು 18 ವರ್ಷಗಳ ನಂತರ RCB ಟ್ರೋಫಿ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಭಾರತದ ಲೆಜೆಂಡರಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

RCB ಎಲ್ಲಿಗೆ ಹೋದರೂ ಈ ಸಲ ಈ ಸಲ ಕಪ್‌ ನಮ್ದೇ ಎಂಬ ಘೋಷಣೆ ಮುಗಿಲು ಮುಟ್ಟಿತ್ತು. ಇದು ಒಂದು ಕಡೆ ಆಟಗಾರರು ಹಾಗೂ ಅಭಿಮಾನಿಗಳಲ್ಲಿ ಸ್ಪೂರ್ತಿ ತುಂಬುವಲ್ಲಿ ನೆರವಾಗಿದ್ದು, ಆರ್ ಸಿಬಿ ಟ್ರೋಫಿ ಮುಡಿಗೇರಿಸಿಕೊಳ್ಳುವಲ್ಲಿ ನೆರವಾಗಿದೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

Gavaskar and Kohli Images
RCB ವಿಜಯೋತ್ಸವ: ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ; 10 ಅಭಿಮಾನಿಗಳು ಸಾವು, ಹಲವರು ಅಸ್ವಸ್ಥ! Video

ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಕೊನೆಯ ಮೂರು ಪಂದ್ಯಗಳ ವಿಜಯಕ್ಕಾಗಿ ಆರ್ ಸಿಬಿ ತಂಡವನ್ನು ಮಾಜಿ ಟೀಂ ಇಂಡಿಯಾ ನಾಯಕ ಶ್ಲಾಘಿಸಿದ್ದಾರೆ. ಈ ಬಾರಿ ಟೂರ್ನಿಯುದ್ದಕ್ಕೂ ಆರ್ ಸಿಬಿ ಅತ್ಯುತ್ತಮ ಪ್ರದರ್ಶನ ತೋರಿರುವುದಾಗಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com