1st T20I: ಇಂಗ್ಲೆಂಡ್ ವಿರುದ್ಧ ಭಾರತದ ವನಿತೆಯರಿಗೆ ಐತಿಹಾಸಿಕ ಜಯ, ಹಲವು ದಾಖಲೆ ನಿರ್ಮಾಣ!

ನಾಟಿಂಗ್ ಹ್ಯಾಮ್ ನ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ಇಂದು ನಡೆದ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ವನಿತೆಯರ ತಂಡವನ್ನು ಭಾರತ ವನಿತೆಯರ ತಂಡ 97 ರನ್ ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿತು.
India Women beat England Women by 97 runs
ಇಂಗ್ಲೆಂಡ್ ವಿರುದ್ಧ ಭಾರತದ ವನಿತೆಯರಿಗೆ ಐತಿಹಾಸಿಕ ಜಯ
Updated on

ನಾಟಿಂಗ್ ಹ್ಯಾಮ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ವನಿತೆಯರ ತಂಡ ಮೊದಲ ಟಿ20 ಪಂದ್ಯದಲ್ಲಿ ಐತಿಹಾಸಿಕ ಜಯ ಸಾಧಿಸಿದ್ದು, ಟಿ20ಸರಣಿಯಲ್ಲಿ ಶುಭಾರಂಭ ಮಾಡಿದೆ.

ನಾಟಿಂಗ್ ಹ್ಯಾಮ್ ನ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ಇಂದು ನಡೆದ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ವನಿತೆಯರ ತಂಡವನ್ನು ಭಾರತ ವನಿತೆಯರ ತಂಡ 97 ರನ್ ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿತು.

ಭಾರತ ನೀಡಿದ್ದ 211 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಇಂಗ್ಲೆಂಡ್ ವನಿತೆಯರ ತಂಡ 14.5 ಓವರ್ ನಲ್ಲೇ ಕೇವಲ 113 ರನ್ ಗಳಿಗೇ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿತು.

ಈ ಪಂದ್ಯದ ಗೆಲುವಿನೊಂದಿಗೆ ಭಾರತ ವನಿತೆಯರ ತಂಡ 5 ಪಂದ್ಯಗಳ ಟಿ20 ಸರಣಿಯಲ್ಲಿ ಶುಭಾರಂಭ ಮಾಡಿದೆ.

India Women beat England Women by 97 runs
Ind Vs Eng: ಚೊಚ್ಚಲ ಟಿ20 ಶತಕ; ಎಲ್ಲಾ ಕ್ರಿಕೆಟ್ ಮಾದರಿಯಲ್ಲೂ ಶತಕ ಸಿಡಿಸಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟರ್ ಸ್ಮೃತಿ ಮಂದಾನ!

ಭಾರತ ಭರ್ಜರಿ ಬ್ಯಾಟಿಂಗ್

ಇನ್ನು ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ವನಿತೆಯರ ತಂಡ ನಿಗಧಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 210 ರನ್ ಕಲೆಹಾಕಿತು. ಭಾರತದ ಪರ ನಾಯಕಿ ಸ್ಮೃತಿ ಮಂದನಾ ಶತಕ ಸಿಡಿಸಿ ತಂಡದ ಗೆಲುವಿನ ರೂವಾರಿಯಾದರು. ಮಂದನಾ ಕೇವಲ 62 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 15 ಬೌಂಡರಿಗಳ ನೆರವಿನಿಂದ 112 ಕಲೆ ಹಾಕಿದರು. ಅವರಿಗೆ ಹರ್ಲೀನ್ ಡಿಯೋಲ್ (43 ರನ್) ಉತ್ತಮ ಸಾಥ್ ನೀಡಿದರು.

ಐತಿಹಾಸಿಕ ಜಯ

ಇನ್ನು ಇಂಗ್ಲೆಂಡ್ ವಿರುದ್ಧ ಭಾರತ ತಂಡಕ್ಕೆ ಸಿಕ್ಕ ಈ ಗೆಲುವು ಐತಿಹಾಸಿಕ ಜಯವಾಗಿದ್ದು, ಇದು ಭಾರತ ವನಿತೆಯರ ತಂಡಕ್ಕೆ ಸಿಕ್ಕ 4ನೇ ಅತೀ ದೊಡ್ಡ ಗೆಲುವಾಗಿದೆ. ಈ ಹಿಂದೆ 2018ರಲ್ಲಿ ಮಲೇಷ್ಯಾ ವಿರುದ್ಧ 142 ರನ್ ಗಳ ಅಂತರದ ಜಯ ಸಾಧಿಸಿತ್ತು. ಇದೀಗ ಪ್ರಬಲ ಇಂಗ್ಲೆಂಡ್ ವಿರುದ್ಧ 97 ರನ್ ಗಳ ಅಂತರದ ಜಯ ದಾಖಲಿಸಿದೆ.

Biggest win-margins for IND-W in T20Is

  • 142 runs vs Malaysia-W, Kuala Lumpur, 2018

  • 104 runs vs UAE-W, Sylhet, 2022

  • 100 runs vs Barbados-W, Edgbaston, 2022

  • 97 runs vs ENG-W, Trent Bridge, 2025

  • 84 runs vs WI-W, Gros Islet, 2019

ಇಂಗ್ಲೆಂಡ್ ಮಹಿಳೆಯರಿಗೆ ಹೀನಾಯ ಸೋಲು

ಇನ್ನು ಈ ಪಂದ್ಯದಲ್ಲಿ ಭಾರತದ ವಿರುದ್ಧ 97 ರನ್ ಗಳ ಅಂತರದಲ್ಲಿ ಸೋತ ಇಂಗ್ಲೆಂಡ್ ವನಿತೆಯರ ತಂಡಕ್ಕೆ ಇದು ಅತ್ಯಂತ ಹೀನಾಯ ಸೋಲಾಗಿದೆ. ಈ ಹಿಂದೆ 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ 93 ರನ್ ಗಳ ಅಂತರದಲ್ಲಿ ಸೋಲು ಕಂಡಿತ್ತು.

Biggest defeat margins for ENG-W in T20Is (by runs)

  • 97 runs vs IND-W, Trent Bridge, 2025

  • 93 runs vs AUS-W, Chelmsford, 2019

  • 72 runs vs AUS-W, Adelaide, 2025

  • 57 runs vs AUS-W, Sydney, 2025

  • 57 runs vs AUS-W, Brabourne, 2018

ಉಭಯ ತಂಡದ ನಾಯಕರ ರನ್ ದಾಖಲೆ

ಇನ್ನು ಈ ಪಂದ್ಯದಲ್ಲಿ ಭಾರತ ತಂಡದ ನಾಯಕಿ ಸ್ಮೃತಿ ಮಂದಾನ ಶತಕ ಸಿಡಿಸಿ ಗೆಲುವಿನ ರೂವಾರಿಯಾದರೆ ಅತ್ತ ಇಂಗ್ಲೆಂಡ್ ತಂಡದ ನಾಯಕಿ ನ್ಯಾಟ್ ಸಿವರ್-ಬ್ರಂಟ್ 66 ರನ್ ದಿಟ್ಟ ಹೋರಾಟ ನಡೆಸಿದರು. ಆ ಮೂಲಕ ಈ ಪಂದ್ಯದಲ್ಲಿ ಉಭಯ ತಂಡದ ಇಬ್ಬರು ನಾಯಕರು ಒಟ್ಟು 178 ರನ್ ಗಳಿಸಿದರು, ಇದು ಕನಿಷ್ಠ ಒಂದು ಪೂರ್ಣ ಸದಸ್ಯ ತಂಡವನ್ನು ಒಳಗೊಂಡ ಮಹಿಳಾ T20I ನಲ್ಲಿ ಎರಡನೇ ಅತ್ಯಧಿಕ ರನ್ ಆಗಿದೆ. ಈ ಹಿಂದೆ ಅಂದರೆ 2018 ರಲ್ಲಿ ಟೌಂಟನ್‌ನಲ್ಲಿ ನಡೆದ NZ-W vs SA-W ಪಂದ್ಯದಲ್ಲಿ 182 (ಸುಜಿ ಬೇಟ್ಸ್ - 124*, ಡೇನ್ ವ್ಯಾನ್ ನೀಕೆರ್ಕ್ - 58) ಗಳಿಸಿದ್ದರು.

The two captains aggregated 178 between them today, the second-highest in a Women’s T20I featuring at least one full-member side, after 182 (Suzie Bates - 124*, Dane van Niekerk - 58) in the NZ-W vs SA-W contest at Taunton in 2018.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com